ಲಡಾಕ್ ಈಗ ಕೇಂದ್ರಾಡಳಿತ ಪ್ರದೇಶ, 2010ರಲ್ಲಿ ಏನಾಗಿತ್ತು?

By Web DeskFirst Published Aug 6, 2019, 4:18 PM IST
Highlights

ಲಡಾಕ್ ಇನ್ನು ಮುಂದೆ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಗಿ ಆಡಳಿತಕ್ಕೆ ಒಳಪಡಲಿದೆ. ಕರ್ನಾಟಕದಲ್ಲಿ ವರುಣ ಅಬ್ಬರಿಸುತ್ತಿದ್ದಾನೆ. ಪ್ರವಾಹ ಪರಿಸ್ಥಿತಿ ತಲೆದೋರುತ್ತಿದೆ. ಅರೇ ಎಲ್ಲಿಂದ ಎಲ್ಲಿಗೆ ಸಂಬಂಧ ಎಂದುಕೊಂಡ್ರಾ? ಈ ಎಲ್ಲ ಘಟನಾವಳಿಗಳು ನಮ್ಮನ್ನು 2010ಕ್ಕೆ ಕರೆದುಕೊಂಡು ಹೋಗುತ್ತದೆ.

ನವದೆಹಲಿ(ಆ. 06) ಅದು ಆಗಸ್ಟ್6 , 2010 ಜಮ್ಮು ಕಾಶ್ಮೀರದ ಲಡಾಕ್ ಪ್ರಾಂತ್ಯದಲ್ಲಿ ಕಂಡು ಕೇಳರಿಯದ ಪ್ರವಾಹ ಬಂದಿತ್ತು. ಭೀಕರ ಪ್ರವಾಹಕ್ಕೆ 255 ಜನ ಪ್ರಾಣ ಕಳೆದುಕೊಂಡಿದ್ದರು. 50 ಹಳ್ಳಿಗಳು ಮುಳುಗಿ ಹೋಗಿದ್ದವು. ಲೇಹ್ ಲಡಾಕ್ ಸಂಪೂರ್ಣ ಮುಳುಗಿಹೋಗಿತ್ತು.

ಅಂದು ಸುರಿದ ಧಾರಾಕಾರ ಮಳೆಗೆ ಎರಡು ನೂರು ಜನ ಕಣ್ಮರೆಯಾಗಿದ್ದರು. ಭೂಕುಸಿತ ಉಂಟಾಗಿತ್ತು. ರಸ್ತೆ ಸಂಪರ್ಕ ಕಡಿತವಾಗಿತ್ತು. 6 ಜನ ವಿದೇಶಿ ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದರು.

ಭೀಕರ ಪ್ರವಾಹ ಒಂಭತ್ತು ಸಾವಿರ ಜನರ ಜೀವನವನ್ನು ಬೀದಿಗೆ ತಂದು ನಿಲ್ಲಿಸಿತ್ತು. ಭೀಕರ ಪ್ರವಾಹದ ಒಂದು ದಿನದ ನಂತರದಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭವಾಗಿತ್ತು. ಹತ್ತು ಅಡಿ ನೀರು, ಭೂ ಕುಸಿತದ ನಡುವೆಯೇ ರಕ್ಷಣಾ ಕಾರ್ಯ ಸಾಗಿತ್ತು. ವಾಹನಗಳ ಮೂಲಕ ಪ್ರವಾಸಿಗರನ್ನು ರಕ್ಷಣೆ ಮಾಡುವ ಕೆಲಸವೂ ಅಂದು ದೊಡ್ಡ ಸವಾಲಾಗಿತ್ತು.

ಈ ವೇಳೆ ಭಾರತೀಯ ಸೇನೆ ಮಡಿದ ಕಾರ್ಯಾಚರಣೆಯಿಂದ ಅದೆಷ್ಟೋ ಜೀವಗಳನ್ನು ಕಾಪಾಡಲಾಯಿತು. ಗಂಭೀರವಾಗಿ ಗಾಯಗೊಂಡಿದ್ದ 400 ಜನರನ್ನು ಸೇನಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.

ಸಂವಿಧಾನ ತಿದ್ದುಪಡಿ ಮಾಡದೆಯೇ 370ನೇ ವಿಧಿ ರದ್ದು: ಇದು ಹೇಗಾಯ್ತು? ಇಲ್ಲಿದೆ ಮಾಹಿತಿ

ಆರು ಸಾವಿರ ಸೈನಿಕರು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದರು ಎಂದು ಅಂದು ಗೃಹ ಸಚಿವರಾಗಿದ್ದ ಪಿ. ಚಿದಂಬರಂ ತಿಳಿಸಿದ್ದರು. ಪ್ರಾಣ ಕಳೆದುಕೊಂಡವರಿಗೆ ಒಂದು ಲಕ್ಷ ರೂ. ಮತ್ತು ಗಾಯಗೊಂಡವರಿಗೆ ಐವತ್ತು ಸಾವಿರ ರೂ. ಪರಿಹಾರ ಘೋಷಣೆ ಮಾಡಲಾಗಿತ್ತು.

ವರ್ಷಗಳು ಉರುಳಿವೆ. ಲಡಾಕ್ ಬದಲಾಗಿದೆ. ಕೇಂದ್ರ ಸರ್ಕಾರ ಲಡಾಕ್ ನ್ನು ಜಮ್ಮು ಮತ್ತು ಕಾಶ್ಮೀರದಿಂದ ಬೇರ್ಪಡಿಸಿ ನೇರವಾಗಿ ಆಡಳಿತ ನಡೆಸಲಿದೆ.

ಒಮ್ಮೆಮ್ಮೆ ಇತಿಹಾಸದ ಪುಟಗಳನ್ನು ಮೆಲುಕು ಹಾಕಬೇಕಾಗುತ್ತದೆ. ಚಾರಣಿಗರೂ ಸಹ ಲಡಾಕ್ ಅನ್ನು ಬಹಳ ಇಷ್ಟಪಡುತ್ತಾರೆ. ಇಲ್ಲಿಗೆ ಒಂದೆಲ್ಲಾ ಒಂದು ದಿನ ದ್ವಿಚಕ್ರ ವಾಹನದಲ್ಲಿ ತೆರಳಬೇಕು ಎಂಬ ಕನಸು ಕಾಣುವ ಯುವಕರಿಗೇನೂ ಕೊರತೆ ಇಲ್ಲ.

 ಮಳೆಯಬ್ಬರಕ್ಕೆ ಕೊಚ್ಚಿ ಹೋಗುತ್ತಿದೆ ಬದುಕು!: ಮನಕಲುಕುತ್ತಿವೆ ಫೋಟೋಸ್

 

click me!