ಬೆಂಗಳೂರಿನಲ್ಲಿ ಡಿ.ಕೆ.ಶಿವಕುಮಾರ್ ಮತದಾರರಿಗೆ ಬೆದರಿಕೆ ಹಾಕಿದ್ರು. ಶಿವರಾಜ್ ತಂಗಡಗಿ ಮೋದಿ ಮೋದಿ ಎನ್ನುವ ಯುವಕರಿಗೆ ಕಪಾಳಮೋಕ್ಷ ಮಾಡಿ ಅಂದ್ರು. ಮೊರಿಯಾ ಆಲಂ ಸಂವಿಧಾನ ಬಾಹಿರವಾಗಿ ಓಟ್ ಜಿಹಾದ್ ಗೆ ಕರೆಕೊಟ್ಟಿದ್ದಾರೆ. ಇವೆಲ್ಲವೂ ಕಾಂಗ್ರೆಸ್‌ನ ನೀತಿ ತೋರಿಸುತ್ತದೆ. ಕಾಂಗ್ರೆಸ್ ನಾಯಕರ ಹತಾಶೆ ಅವರ ಮಾತುಗಳಲ್ಲಿ ತೋರಿಸುತ್ತದೆ: ಬಿಜೆಪಿ ನಾಯಕ ಸಿ.ಟಿ. ರವಿ
ಬೆಳಗಾವಿ(ಮೇ.02): ಬಿಜೆಪಿಗೆ ಜಗತ್ತು ಮೆಚ್ಚುಗೆ ಪಡೆದ(ನರೇಂದ್ರ ಮೋದಿ) ನೇತೃತ್ವವಿದೆ. ಜಗತ್ತಿನ ಗಣ್ಯರು, ಗೌರವಿಸುವ ನಾಯಕ ನಮ್ಮ ನರೇಂದ್ರ ಮೋದಿ ನಾಯಕತ್ವವಿದೆ. ನಾನು ಕಾಂಗ್ರೆಸ್‌ಗೆ ಕೇಳಲು ಬಯಸುತ್ತೇನೆ. ನಿಮ್ಮ ಲೀಡರ್ ಯಾರು, ನಿಮಗೆ ನೇತ್ರತ್ವವು ಇಲ್ಲ. ರಾಹುಲ್ ಗಾಂಧಿ ಮಹೋಬತ್ ಕೀ ದುಖಾನ್‌ನಲ್ಲಿ ನಫ್ರತ್ ಮಾರಾಟ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಮಾಜಿ ಸಚಿವ ಸಿ.ಟಿ.ರವಿ ಹರಿಹಾಯ್ದಿದ್ದಾರೆ.
ಇಂದು(ಗುರುವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿ.ಟಿ.ರವಿ ಅವರು, ಬೆಂಗಳೂರಿನಲ್ಲಿ ಡಿ.ಕೆ.ಶಿವಕುಮಾರ್ ಮತದಾರರಿಗೆ ಬೆದರಿಕೆ ಹಾಕಿದ್ರು. ಶಿವರಾಜ್ ತಂಗಡಗಿ ಮೋದಿ ಮೋದಿ ಎನ್ನುವ ಯುವಕರಿಗೆ ಕಪಾಳಮೋಕ್ಷ ಮಾಡಿ ಅಂದ್ರು. ಮೊರಿಯಾ ಆಲಂ ಸಂವಿಧಾನ ಬಾಹಿರವಾಗಿ ಓಟ್ ಜಿಹಾದ್ ಗೆ ಕರೆಕೊಟ್ಟಿದ್ದಾರೆ. ಇವೆಲ್ಲವೂ ಕಾಂಗ್ರೆಸ್‌ನ ನೀತಿ ತೋರಿಸುತ್ತದೆ. ಕಾಂಗ್ರೆಸ್ ನಾಯಕರ ಹತಾಶೆ ಅವರ ಮಾತುಗಳಲ್ಲಿ ತೋರಿಸುತ್ತದೆ. ಕಾಂಗ್ರೆಸ್ಸಿಗರು ಅಪ್ರಚಾರ, ಅಪನಂಬಿಕೆ ಮಾಡುತ್ತಿದ್ದಾರೆ. ಅತಿ ಹೆಚ್ಚು ಬಾರಿ ಸಂವಿಧಾನದ ತಿದ್ದುಪಡಿ ಮಾಡಿದ್ದು ಕಾಂಗ್ರೆಸ್. ಅತಿ ಹೆಚ್ಚು ಸರ್ಕಾರಗಳನ್ನ ವಜಾ ಮಾಡಿದ್ದು ಕಾಂಗ್ರೆಸ್. ತುರ್ತು ಪರಿಸ್ಥಿತಿ ಹೇರಿದ್ದು ಕಾಂಗ್ರೆಸ್ ಎಂದು ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದಾರೆ.
ದೇವೇಗೌಡರ ಕುಟುಂಬ ಸದಸ್ಯರು ಹಾಸನಷ್ಟೇ ಅಲ್ಲ, ಕರ್ನಾಟಕದ ಹೆಸರು ಕೆಡಿಸಿದ್ದಾರೆ: ಮೊಯ್ಲಿ ಆಕ್ರೋಶ
ಅಂಬೇಡ್ಕರ್ ಅವರು ಸತ್ತಾಗ ಜಾಗ ಕೊಡದೇ, ಅವರಿಗೆ ಮರಣೋತ್ತರ ಭಾರತ ರತ್ನ ಕೊಡದೇ ಇರೋದು ಕಾಂಗ್ರೆಸ್. ಮೋದಿ ಪ್ರಧಾನಮಂತ್ರಿ ಆದ ಮೇಲೆ ಪಾರದರ್ಶಕ ಆಡಳಿತ ಜಾರಿ ಮಾಡಿದ್ದೇವೆ. ಬೆಳಗಾವಿ ಉತ್ತರದಲ್ಲಿ ಕಾಂಗ್ರೆಸ್ ಶಾಸಕ ಗೆದ್ದಾಗ, ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬ್ ಎಂದವರು ಕಾಂಗ್ರೆಸ್‌ನವರೇ. ಅಧಿಕಾರ ದುರುಪಯೋಗ ಮಾಡಿಕೊಂಡವರು ಕಾಂಗ್ರೆಸ್ ಎಂದು ಕಿಡಿ ಕಾರಿದ್ದಾರೆ.
ಮೋದಿ ಅಲೆಯಲ್ಲಿ ಎರಡು ಬಾರಿ ವಿರೋಧ ಪಕ್ಷಗಳು ಕೊಚ್ಚಿಕೊಂಡು ಹೋಗಿವೆ. ಮೂರನೇ ಬಾರಿಯೂ ಮೋದಿ ಸರ್ಕಾರ ಬರಲಿದೆ. ಬೆಳಗಾವಿ ಲೋಕಸಭೆ ಬಹುತೇಕ ನಾಯಕರು, ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ ಎಂದು ಸಿ.ಟಿ. ರವಿ ಹೇಳಿದ್ದಾರೆ.
ಹಾಸನ ಸಂಸದ ಪೆನ್‌ಡ್ರೈವ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿ.ಟಿ. ರವಿ ಅವರು, ಚುನಾವಣೆ ಮುಗಿದ ನಂತರ ಅನ್ಯಾಯವಾದವರ ಜೊತೆಗೆ ನಿಲ್ಲುತ್ತೇವೆ. ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಡಿಯರ್ ಬ್ರದರ್ಸ್ ಎಂದಿದ್ದು ಡಿ.ಕೆ.ಶಿವಕುಮಾರ್. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಎಸ್‌ಐಟಿ ತನಿಖೆಯಲ್ಲಿ ಸತ್ಯ ಗೊತ್ತಾಗಲಿದೆ. ಚುನಾವಣಾ ನಂತರ ಪ್ರಜ್ವಲ್ ಪ್ರಕರಣವೂ ಕಣ್ಮರೆ ಆಗಬಹುದು ಎಂದು ಹೇಳಿದ್ದಾರೆ.
ಹತಾಶರಾದ ಮೋದಿ ಭಯಾನಕ ಸುಳ್ಳುಗಳಿಂದ ಭಾರತೀಯರನ್ನ ದಾರಿ ತಪ್ಪಿಸುತ್ತಿದ್ದಾರೆ: ಸಿದ್ದು ಆಕ್ರೋಶ
ಅಧಿಕಾರ ಇಲ್ಲದಾಗ ಸುಳ್ಳು, ಇವು ಕಾಂಗ್ರೆಸ್ ಪಕ್ಷದ ಒಂದೇ ನಾಯ್ಯದ ಎರಡು ಮುಖಗಳು
ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಬೇಕು. ಪೊಲೀಸ್ ವ್ಯವಸ್ಥೆ ರಾಜಕೀಯಕರಣ ಆಗೋ ಸಾಧ್ಯತೆ ಇದೆ. 24 ರಂದು ಪೆನ್‌ಡ್ರೈವ್ ವಿಚಾರ ಗೊತ್ತಾಗಿದೆ. 26 ರಂದು ಪೆನ್‌ಡ್ರೈವ್ ಹೊರಗೆ ಬಂತು. ಸರ್ಕಾರ ಆಗಲೇ ಕೇಸ್ ದಾಖಲಿಸಬಹುದಿತ್ತು. ಪ್ರಜ್ವಲ್ ವಿದೇಶಕ್ಕೆ ಹೋಗುವುದನ್ನ ತಡೆಯಬಹುದಿತ್ತು. ಅಧಿಕಾರ ಇದ್ದಾಗ ಭ್ರಷ್ಟಾಚಾರ, ಅಧಿಕಾರ ಇಲ್ಲದಾಗ ಸುಳ್ಳು. ಇವು ಕಾಂಗ್ರೆಸ್ ಪಕ್ಷದ ಒಂದೇ ನಾಯ್ಯದ ಎರಡು ಮುಖಗಳು ಎಂದು ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.
ರಾಹುಲ್ ಗಾಂಧಿ ವಿದೇಶದಲ್ಲಿ ಸಿಕ್ಕಿಕೊಂಡಿದ್ದಾರೆ. ರಾಹುಲ್ ಗಾಂಧಿ ಒಂದೊಂದು ಪ್ರಿಪ್ ಒಬ್ಬರೊಂದಿಗೆ ಹೋಗ್ತಾರೆ ಅಂತೆ ಇದನ್ನ ನಾವು ನಂಬಬೇಕಾ?. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ಆಗ್ತಾ ಇರುತ್ತೆ. ಮಾಜಿ ಸಿಎಂ ಕುಮಾರಸ್ವಾಮಿ ಅವರೇ ಹೇಳಿದ್ದಾರೆ ಉಪ್ಪು ತಿಂದವರು ನೀರು ಕುಡಿಯಬೇಕು ಅಂತ. ಕರ್ನಾಟಕದಲ್ಲಿ ಕೆಲವು ಜನ ಕ್ರಿಮಿನಲ್ ಹಿನ್ನೆಲೆ ಇದ್ದವರು ಇದ್ದಾರೆ. ಹೀಗಾಗಿ ರಾಜಕಾರಣದಲ್ಲಿದ್ದವರು ಎಚ್ಚರಿಕೆಯಿಂದ ಇರಬೇಕು ಎಂದು ಸಿ.ಟಿ. ರವಿ ಹೇಳಿದ್ದಾರೆ.