ಪೈಲೆಟ್ ಕಾಣೆಯಾಗಿರುವುದು ನಿಜ: ವಿದೇಶಾಂಗ ಇಲಾಖೆ!

By Web DeskFirst Published Feb 27, 2019, 3:36 PM IST
Highlights

ಪೈಲೆಟ್ ಕಾಣೆಯಾಗಿರುವುದು ನಿಜ ಎಂದ ವಿದೇಶಾಂಗ ಇಲಾಖೆ| ಭಾರತೀಯ ವಿದೇಶಾಂಗ ಇಲಾಖೆ ಸ್ಪಷ್ಟನೆ| ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವಿದೇಶಾಂಗ ಕಾರ್ಯದರ್ಶಿ| ಪೈಲೆಟ್ ಕಾಣೆಯಾಗಿದ್ದಾರೆ ಎಂದ ರವೀಶ್ ಕುಮಾರ್| 'ಪಾಕ್ ವಶದಲ್ಲಿರುವ ಕುರಿತು ಸ್ಪಷ್ಟ ಮಾಹಿತಿ ಇಲ್ಲ'| ಪಾಕ್ ವಾಯುಪಡೆಯ ಎಫ್-16 ಯುದ್ಧ ವಿಮಾನ ಹೊಡೆದುರಿಳಿಸಲಾಗಿದೆ ಎಂದ ರವೀಶ್!

ನವದೆಹಲಿ(ಫೆ.27): ಬುದ್ಗಾನ್ ನಲ್ಲಿ ಪತನಗೊಂಡ ಭಾರತೀಯ ವಾಯುಪಡೆಯ ಮಿಗ್-21 ಪೈಲೆಟ್ ಕಾಣೆಯಾಗಿದ್ದಾರೆ ಎಂದು ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ.

Raveesh Kumar, MEA: One Pakistan Air Force fighter aircraft was shot down by Indian Air Force. In this engagement, we have lost one MiG 21. Pilot is missing in action. Pakistan claims he is in their custody. We are ascertaining the facts. pic.twitter.com/Bm0nVChuzF

— ANI (@ANI)

ಬುದ್ವಾನ ವಿಮಾನ ಪತನದ ಕುರಿತು ಪತ್ರಿಕಾಗೋಷ್ಠಿ ನಡೆಸಿದ ವಿದೇಶಾಂಗ ಕಾರ್ಯದರ್ಶಿ ರವೀಶ್ ಕುಮಾರ್, ಪೈಲೆಟ್ ಪಾಕಿಸ್ತಾನದ ವಶದಲ್ಲಿರುವುದು ಇನ್ನಷ್ಟೇ ಖಚಿತವಾಗಬೇಕಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಪಾಕಿಸ್ತಾನ ಎಫ್-16 ಯುದ್ಧ ವಿಮಾನವನ್ನು ಭಾರತೀಯ ವಾಯುಸೇನೆ ಹೊಡೆದುರಿಳಿಸಿರುವುದಾಗಿ ರವೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

click me!