ಕಾಂಗ್ರೆಸ್ ಮುಸ್ಲಿಂ ಮಹಿಳೆಯರ ಪರವೋ ಇಲ್ವೋ?

Aug 11, 2018, 6:35 PM IST

ಬೆಂಗಳೂರು(ಆ.11): ಒಂದು ಅಸಹ್ಯ ರಾಜಕಾರಣಕ್ಕೆ ನಿನ್ನೆ ರಾಜ್ಯಸಭೆ ಸಾಕ್ಷಿಯಾಗಿದೆ. ತ್ರಿವಳಿ ತಲಾಖ್ ನಿಷೇದಕ್ಕೆ ತನ್ನ ಬೆಂಬಲ ಇದೆ ಎಂದು ಹೇಳಿದ್ದ ಕಾಂಗ್ರೆಸ್, ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್ ನಿಷೇಧ ಕಾನೂನು ಪಾಸ್ ಆಗಲು ಬಿಡಲೇ ಇಲ್ಲ.

ಒಂದು ವೇಳೆ ಈ ಕಾನೂನು ಪಾಸಾದರೆ ದೇಶದ ಮುಸ್ಲಿಮರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂಬುದು ಕಾಂಗ್ರೆಸ್ ಭಯ ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ. ಮುಂದಿನ ಲೋಕಸಭೆ ಚುನಾವಣೆಗೆ ಮುಸ್ಲಿಂ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್. ಇದಕ್ಕಾಗಿ ಮುಸ್ಲಿಂ ಮಹಿಳೆಯರಿಗೆ ಆಗುತ್ತಿರುವ ಅನ್ಯಾಯವನ್ನು ಕಂಡೂ ಕಾಣದಂತೆ ಸುಮ್ಮನೆ ಕುಳಿತಿದೆ.

ಈ ಕುರಿತು ನಿಮ್ಮ ಸುವರ್ಣನ್ಯೂಸ್ ನ ಲೆಫ್ಟ್ ರೈಟ್ ಆ್ಯಂಡ್ ಸೆಂಟರ್ ನಲ್ಲಿ ನಡೆದ ಚರ್ಚೆಯ ಪೂರ್ಣ ವಿವರ ಇಲ್ಲಿದೆ..