ಪಾಕಿಸ್ತಾನದಲ್ಲೂ ಯೋಗಕ್ಕೆ ಈಗ ಸಿಕ್ಕಿತು ಅಧಿಕೃತ ಮಾನ್ಯತೆ

Published : May 05, 2024, 12:46 PM IST
ಪಾಕಿಸ್ತಾನದಲ್ಲೂ ಯೋಗಕ್ಕೆ ಈಗ ಸಿಕ್ಕಿತು ಅಧಿಕೃತ ಮಾನ್ಯತೆ

ಸಾರಾಂಶ

ಯೋಗಕ್ಕೆ ವಿಶ್ವಮಾನ್ಯತೆ ಸಿಕ್ಕು ಈಗ 10 ವರ್ಷ ಆಗುತ್ತ ಬಂದರೂ ನೆರೆ ದೇಶ ಪಾಕಿಸ್ತಾನದಲ್ಲಿ ಈವರೆಗೂ ಮನ್ನಣೆ ಸಿಕ್ಕಿರಲಿಲ್ಲ. ಆದರೆ ಇದೇ ಮೊದಲ ಬಾರಿ ಅಧಿಕೃತವಾಗಿ ನೆರೆಯ ಪಾಕಿಸ್ತಾನಕ್ಕೂ ಯೋಗ ಪ್ರವೇಶಿಸಿದೆ. 

ಇಸ್ಲಾಮಾಬಾದ್‌ (ಮೇ.05): ಯೋಗಕ್ಕೆ ವಿಶ್ವಮಾನ್ಯತೆ ಸಿಕ್ಕು ಈಗ 10 ವರ್ಷ ಆಗುತ್ತ ಬಂದರೂ ನೆರೆ ದೇಶ ಪಾಕಿಸ್ತಾನದಲ್ಲಿ ಈವರೆಗೂ ಮನ್ನಣೆ ಸಿಕ್ಕಿರಲಿಲ್ಲ. ಆದರೆ ಇದೇ ಮೊದಲ ಬಾರಿ ಅಧಿಕೃತವಾಗಿ ನೆರೆಯ ಪಾಕಿಸ್ತಾನಕ್ಕೂ ಯೋಗ ಪ್ರವೇಶಿಸಿದೆ. ಪಾಕಿಸ್ತಾನದ ಸರ್ಕಾರಿ ಸಂಸ್ಥೆಯೊಂದು ಇದೇ ಮೊದಲ ಬಾರಿ ಯೋಗ ಕಲಿಸುವುದಕ್ಕೆ ಮುಂದಾಗಿದೆ. ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನಗರ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ರಾಜಧಾನಿ ಅಭಿವೃದ್ಧಿ ಪ್ರಾಧಿಕಾರ ( ಸಿಡಿಎ), ತನ್ನ ಅಧಿಕೃತ ಫೇಸ್ಬುಕ್ ಪುಟದಲ್ಲಿ ಜನರು ಯೋಗ ಮಾಡುತ್ತಿರುವ ಫೋಟೋಗಳನ್ನು ಹಂಚಿಕೊಂಡು ಈ ಬಗ್ಗೆ ಮಾಹಿತಿ ನೀಡಿದೆ.

ಇಸ್ಲಾಮಾಬಾದ್‌ ಮೆಟ್ರೋಪೊಲಿಟಿಯನ್ ಕಾರ್ಪೋರೆಷನ್ ಎಫ್-9 ಪಾರ್ಕ್‌ನಲ್ಲಿ ಉಚಿತ ಯೋಗ ತರಬೇತಿ ಶಿಬಿರವನ್ನು ಪ್ರಾಧಿಕಾರ ಪ್ರಾರಂಭಿಸಿದೆ. ಈಗಾಗಲೇ ಹಲವರು ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ಈ ತರಗತಿಗೆ ಸೇರಿಕೊಂಡಿದ್ದಾರೆ’ ಎಂದು ಬರೆದು ಕೊಂಡಿದೆ. ಯೋಗ ತರಬೇತಿ ಪ್ರಾರಂಭಗೊಂಡಿರುವುದನ್ನು ಅಲ್ಲಿನ ಸ್ಥಳೀಯರು ಕೂಡ ಸ್ವಾಗತಿಸಿದ್ದಾರೆ.

38 ರಿಂದ 18ರ ವಯಸ್ಸಿಗೆ ಕಾಲಿಟ್ರಾ ಹಾಟ್ ಬ್ಯೂಟಿ ಜ್ಯೋತಿ: ನಮ್ಮನ್ನು ಇಷ್ಟೊಂದು ಡಿಸ್ಟರ್ಬ್‌ ಮಾಡಬೇಡಿ ಎಂದ ಫ್ಯಾನ್ಸ್‌

ಪ್ರಾಚೀನ ಯೋಗ ಪದ್ಧತಿಯನ್ನು ವಿಶ್ವದೆಲ್ಲೆಡೆ ಪಸರಿಸುವ ದೃಷ್ಟಿಯಿಂದ 2014ರಿಂದ ಪ್ರತಿವರ್ಷ ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಭಾರತದ ಒತ್ತಾಯದ ಮೇರೆಗೆ ವಿಶ್ವಸಂಸ್ಥೆಯೇ ಯೋಗ ದಿನಾಚರಣೆ ಘೋಷಣೆ ಮಾಡಿತ್ತು, ಇದಕ್ಕೆ ಜಗತ್ತಿನ ಸುಮಾರು 175 ದೇಶಗಳಿಂದ ಅನುಮೋದನೆಯೂ ಸಿಕ್ಕಿತ್ತು. ಆದರೆ ನಮ್ಮ ನೆರೆಯ ರಾಷ್ಟ್ರಪಾಕಿಸ್ತಾನದಲ್ಲಿ ಯಾವುದೇ ಸರ್ಕಾರಿ ಸಂಸ್ಥೆಗಳಲ್ಲಿ ಈವರೆಗೂ ಯೋಗಕ್ಕೆ ಅಧಿಕೃತ ಮನ್ನಣೆ ದೊರೆತಿರಲಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತೀಯರ ಎಚ್‌-1ಬಿ ವೀಸಾ ಸಂದರ್ಶನ ದಿಢೀರ್‌ ರದ್ದು : ಕಿಡಿ
ಯುನೆಸ್ಕೋ ಪರಂಪರೆ ಪಟ್ಟಿಗೆ ದೀಪಾವಳಿ ಸೇರ್ಪಡೆ!