ನೀರಿನ ಬಾಟಲಿಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ: ಡ್ವೇನ್​ ಜಾನ್ಸನ್​ ಮೇಲೆ ಗಂಭೀರ ಆರೋಪ

May 5, 2024, 12:42 PM IST

ದಿ ರಾಕ್​ ಅಲಿಯಾಸ್​ ಡ್ವೇನ್​ ಜಾನ್ಸನ್​ ಯಾರಿಗೆ ಗೊತ್ತಿಲ್ಲ ಹೇಳಿ. ಈತ ಹಾಲಿವುಡ್‌​ನ (Hollywood) ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್​ ಆಗಿದ್ದಾರೆ. ಕೋಟ್ಯಂತರ ಮಂದಿಗೆ ದಿ ರಾಕ್ (The Rock)​ ಎಂದರೆ ಅಚ್ಚುಮೆಚ್ಚು. ಈತನಿಗೆ ವಿಶ್ವಾದ್ಯಂತ ಅಭಿಮಾನಿಗಳು ಇದ್ದಾರೆ. ಆದರೆ ಈಗ ಅವರ ಮೇಲೆ ಕೆಲವು ಗಂಭೀರ ಆರೋಪಗಳು ಕೇಳಿಬಂದಿವೆ. ‘ದಿ ರಾಕ್​ ಅವರು ನೀರಿನ ಬಾಟಲಿಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ’ ಎಂದು ಕೆಲವರು ಆರೋಪಿಸಿದ್ದಾರೆ. ಅಮೆರಿಕದ ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಕಟ ಆಗಿದೆ. ಡ್ವೇನ್​ ಜಾನ್ಸನ್​ (Dwayne Johnson) ಮೇಲಿನ ಈ ಆರೋಪಗಳನ್ನು ಕೇಳಿ ಎಲ್ಲರಿಗೂ ಶಾಕ್​ ಆಗಿದೆ.

ಇದನ್ನೂ ವೀಕ್ಷಿಸಿ:  'ಕಾಂತಾರ'ದ ದಟ್ಟ ಕಾಡಿಗೆ ಎಂಟ್ರಿ ಕೊಟ್ಟ ರಾಮ್-ಲಕ್ಷ್ಮಣ್! ನಟ ರಿಷಬ್ ಶೆಟ್ಟಿಗೆ ಕಾಲಿವುಡ್ ಅಣ್ತಮ್ಮ ಆ್ಯಕ್ಷನ್ ಕಟ್ !