ನೀರಿಲ್ಲದೆ ಸೌತೆಕಾಯಿ ಬೆಳೆ ಕುಂಠಿತ : ಬೇಡಿಕೆ ಏರಿಕೆ - ಬೆಲೆ ದುಬಾರಿ

By Kannadaprabha News  |  First Published May 5, 2024, 12:38 PM IST

ಬಿಸಿಲಿನ ತಾಪದಿಂದಾಗಿ ಚಿಕ್ಕಬಳ್ಳಾಪುರದಲ್ಲಿ ಸೌತೆಕಾಯಿಗೆ ಭಾರೀ ಡಿಮ್ಯಾಂಡ್ ಬಂದಿದೆ. ಒಂದು ಸೌತೆಕಾಯಿ ಬೆಲೆ 15ರಿಂದ 20 ರೂಪಾಯಿಗಳಿಗೆ ಮಾರಾಟವಾಗುತ್ತಿದೆ.


  ಚಿಕ್ಕಬಳ್ಳಾಪುರ ;  ಬಿಸಿಲಿನ ತಾಪದಿಂದಾಗಿ ಚಿಕ್ಕಬಳ್ಳಾಪುರದಲ್ಲಿ ಸೌತೆಕಾಯಿಗೆ ಭಾರೀ ಡಿಮ್ಯಾಂಡ್ ಬಂದಿದೆ. ಒಂದು ಸೌತೆಕಾಯಿ ಬೆಲೆ 15ರಿಂದ 20 ರೂಪಾಯಿಗಳಿಗೆ ಮಾರಾಟವಾಗುತ್ತಿದೆ.

ಈಗ ಮೊದಲೇ ಬಿರು ಬಿಸಿಲು, ಮತ್ತೊಂದೆಡೆ ಬರ ತಾಂಡವವಾಡುತ್ತಿದೆ. ಇನ್ನೊಂದೆಡೆ ನೀರಿನ ಕೊರತೆ ಇದೆಲ್ಲದರ ಮಧ್ಯೆ ಅತಿಯಾದ ತಾಪಮಾನದಿಂದ ಉತ್ಪಾದನೆ ಕುಂಠಿತಗೊಂಡಿದೆ. ಇದರಿಂದಾಗಿ ಸೌತೆಕಾಯಿ ಕೊರತೆಯಿಂದಾಗಿ ಬೆಲೆ ದುಬಾರಿಯಾಗಿದೆ. ಚಿಕ್ಕಬಳ್ಳಾಪುರದ ಎಪಿಎಂಸಿ ಮಾರುಕಟ್ಟೆಗೆ ಪ್ರತಿದಿನ ಮೂರು ಸಾವಿರದಿಂದ ಐದು ಸಾವಿರ ಸೌತೆಕಾಯಿ ಮೂಟೆಗಳು ಬರುತ್ತಿದ್ದವು. ಆದರೆ, ಈಗ ಇನ್ನೂರು ಮುನ್ನೂರು ಸೌತೆಕಾಯಿ ಮೂಟೆಗಳು ಮಾತ್ರ ಬರುತ್ತಿವೆ. ಇದರಿಂದ ಬೇಡಿಕೆಯಷ್ಟು ಸೌತೆಕಾಯಿ ಸರಬರಾಜು ಮಾಡಲಾಗುತ್ತಿಲ್ಲ.

Tap to resize

Latest Videos

ತೂಕ ನಿಯಂತ್ರಣಕ್ಕೆ ಸದ್ಗುರು ಹೇಳಿದ ಬೆಸ್ಟ್ ಟಿಪ್ ಇದು, ಬೆಳಗ್ಗೆ ತಿಂಡಿಯೊಟ್ಟಿಗೆ ತಿಂದ್ರೆ ಸರಿ!

ಇನ್ನು ಚಿಕ್ಕಬಳ್ಳಾಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ 30 ಕೆಜಿಯ ಸೌತೆಕಾಯಿ ಒಂದು ಮೂಟೆಗೆ ಸಾವಿರದಿಂದ ಸಾವಿರದ ಐನೂರು ರೂಪಾಯಿ ದುಬಾರಿಯಾಗಿದೆ. ಕೇಳಿದಷ್ಟು ಹಣ ಕೊಟ್ಟರೂ ಸೌತೆಕಾಯಿಗಳು ದೊರೆಯುತ್ತಿಲ್ಲ. ಇನ್ನೂ ಸಂತೆ ಮಾರುಕಟ್ಟೆಯಲ್ಲಿ ಕೆ.ಜಿ ಸೌತೆಕಾಯಿ 60 ರಿಂದ 80 ರೂಪಾಯಿ ಮಾರಾಟವಾಗುತ್ತಿದೆ. ಕೆಜಿ ಸೌತೆಕಾಯಿಗೆ ನಾಲ್ಕು ಕಾಯಿಗಳು ಮಾತ್ರ ಬರುತ್ತೆ. ಒಂದು ಸೌತೆಕಾಯಿ ಬೆಲೆ 15 ರಿಂದ 20ರೂಪಾಯಿ ಆಗುತ್ತಿದೆ. ಒಂದೆಡೆ ಸೌತೆಕಾಯಿ ಬೆಲೆ ರೈತರಿಗೆ ವರದಾನವಾದರೆ ಗ್ರಾಹಕರ ಜೇಬಿಗೆ ಕತ್ತರಿಯಾಗಿದೆ.

click me!