ಮತ್ತೊಮ್ಮೆ ರೈತರಿಗೆ ಸಾಲ ಮನ್ನಾ ಬಂಪರ್!

By Web DeskFirst Published Sep 18, 2018, 8:23 AM IST
Highlights

ದೇಶದ ಎಲ್ಲಾ ರೈತರ ಸಾಲ ಮನ್ನಾ ಮಾಡಲಾಗುವುದು ಎಂದು ರೈತರಿಗೆ ಗುಡ್ ನ್ಯೂಸ್ ಒಂದನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಲೋಕಸಭಾ ಚುನಾವಣೆ ಬೆನ್ನಲ್ಲೇ ಓಲೈಕೆಗೆ ಮುಂದಾಗಿದ್ದಾರೆ. 

ಭೋಪಾಲ್: ‘ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ರೈತರ ಎಲ್ಲ ಸಾಲ ಮನ್ನಾ ಮಾಡಲಾಗುವುದು. ಯಾವುದೇ ಅರ್ಥಶಾಸ್ತ್ರ ಜ್ಞರನ್ನು ನಾನು ಕೇರ್ ಮಾಡಲ್ಲ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಘೋಷಿಸಿ ದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಇತ್ತೀಚೆಗಷ್ಟೇ ದ್ವಿದಳ ಧಾನ್ಯ, ಎಣ್ಣೆಕಾಳಿಗೆ ಕನಿಷ್ಠ ಬೆಂಬಲ  ಬೆಲೆ ಘೋಷಿಸಿ ರೈತರ ಓಲೈಕೆ ಮಾಡಿದ ಬೆನ್ನಲ್ಲೇ, ರಾಹುಲ್ ಕೂಡಾ ರೈತರ ಓಲೈಕೆಗೆ ಮುಂದಾಗಿದ್ದಾರೆ. 

ಮಧ್ಯಪ್ರದೇಶದಲ್ಲಿ ಸೋಮವಾರ ಸಂಕಲ್ಪ ಯಾತ್ರೆ ಉದ್ದೇಶಿಸಿ ಮಾತನಾಡಿದ ಅವರು, ‘ಮೋದಿ ಸರ್ಕಾರವು 15 ಸಿರಿ ವಂತರ 1.5 ಲಕ್ಷ ಕೋಟಿ ಸಾಲವನ್ನು ‘ಅನುತ್ಪಾದಕ ಆಸ್ತಿ’ ಹೆಸರಲ್ಲಿ ಮನ್ನಾ ಮಾಡಿದೆ. ಆದರೆ 5 ಸಾವಿರ ರು. ಬಾಕಿ ಉಳಿಸಿಕೊಂಡ ರೈತರನ್ನು ಕಟಬಾಕಿದಾರ ಎಂದು ಘೋಷಿಸುತ್ತದೆ. ಆದರೆ ಕೇಂದ್ರ ದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಎಲ್ಲ ಕೃಷಿ ಸಾಲ ಮನ್ನಾ ಮಾಡಲಿದೆ’ ಎಂದು ಪ್ರಕಟಿಸಿದರು.
‘ರೈತರು ನನ್ನ ಹೃದಯದಲ್ಲಿ ನಂ.1  ಸ್ಥಾನದಲ್ಲಿದ್ದಾರೆ.

ಸಾಲ ಮನ್ನಾಗೆ ಸಿದ್ಧರಾಗಿ. ಯಾವುದೇ ಅರ್ಥಶಾಸ್ತ್ರಜ್ಞರ ಸಲಹೆಯನ್ನೂ ನಾನು ಪರಿಗಣಿಸಲ್ಲ. ಈ ಹಿಂದೆಯೂ ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ 70000 ಕೋಟಿ ರು.ನಷ್ಟು ಸಾಲ ಮನ್ನಾ ಮಾಡಲಾ ಗಿತ್ತು’ ಎಂದರು. ನೋಟು ರದ್ದತಿಯು ಮೋದಿ ಮಾಡಿದ  ಬಹುದೊಡ್ಡ ಹಗರಣ. 

ಸಣ್ಣ ವ್ಯಾಪಾರಿಗಳ ಹಣವನ್ನು ಈ ಮೂಲಕ ಪೀಕಿ, 15 ಸಿರಿವಂತರ ಸಾಲ ಮನ್ನಾಗೆ ಬಳಸಲಾಯಿತು’ ಎಂದು ಅವರು ಆರೋಪಿಸಿ ದರು. ಇದಕ್ಕೂ ಮುನ್ನ ರಾಹುಲ್ ಸುಮಾರು 15 ಕೀ.ಮೀ ರೋಡ್ ಶೋ ನಡೆಸಿದರು. ಈ ಶೋ ವೇಳೆ ಹಲವು ದೇಗುಗಳಿಗೆ ಭೇಟಿ
ನೀಡಿದ ರಾಹುಲ್ 11 ಜನ ಅರ್ಚಕರಿಂದ ಆಶೀರ್ವಾದ ಪಡೆದರು. ಜೊತೆಗೆ ಸಣ್ಣ ಅಂಗಡಿಯೊಂದರ ಮುಂದೆ ಇಳಿದು ಚಹಾ, ಸಮೋಸಾ ಸೇವಿಸಿದರು.

click me!