ಫೇಕ್‌ ನ್ಯೂಸ್‌ ವಿರುದ್ಧ ಸಮರ ಯಾವ ದೇಶದಲ್ಲಿ ಹೇಗಿದೆ?

By Web DeskFirst Published Oct 3, 2019, 10:20 AM IST
Highlights

ಸೋಷಿಯಲ್‌ ಮೀಡಿಯಾಗಳಲ್ಲಿ ಸುಳ್ಳುಸುದ್ದಿ ಹರಡುವುದನ್ನು ತಡೆಯಲು ಏನು ಕ್ರಮ ಕೈಗೊಳ್ಳುತ್ತೀರಿ ಎಂದು ಮೂರು ವಾರಗಳಲ್ಲಿ ತಿಳಿಸುವಂತೆ ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ. ಸಾಮಾಜಿಕ ಜಾಲತಾಣಗಳನ್ನು ನಿಯಂತ್ರಿಸುವುದು ಕಷ್ಟದ ಕೆಲಸ ಎಂದು ಈ ಬಗ್ಗೆ ನಿರ್ಧಾರ ಕೈಗೊಳ್ಳುವುದನ್ನು ಸರ್ಕಾರ ಮುಂದೂಡುತ್ತಲೇ ಇತ್ತು. ಆದರೆ ಈಗ ಇಕ್ಕಟ್ಟಿಗೆ ಸಿಲುಕಿದೆ. ಬೇರೆ ಬೇರೆ ದೇಶಗಳು ಸೋಷಿಯಲ್‌ ಮೀಡಿಯಾಗಳನ್ನು ನಿಯಂತ್ರಿಸಲು ಏನು ದಾರಿ ಕಂಡುಕೊಂಡಿವೆ? ಇಲ್ಲಿವೆ ನೋಡಿ. 

ಸೋಷಿಯಲ್‌ ಮೀಡಿಯಾಗಳಲ್ಲಿ ಸುಳ್ಳುಸುದ್ದಿ ಹರಡುವುದನ್ನು ತಡೆಯಲು ಏನು ಕ್ರಮ ಕೈಗೊಳ್ಳುತ್ತೀರಿ ಎಂದು ಮೂರು ವಾರಗಳಲ್ಲಿ ತಿಳಿಸುವಂತೆ ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ. ಸಾಮಾಜಿಕ ಜಾಲತಾಣಗಳನ್ನು ನಿಯಂತ್ರಿಸುವುದು ಕಷ್ಟದ ಕೆಲಸ ಎಂದು ಈ ಬಗ್ಗೆ ನಿರ್ಧಾರ ಕೈಗೊಳ್ಳುವುದನ್ನು ಸರ್ಕಾರ ಮುಂದೂಡುತ್ತಲೇ ಇತ್ತು. ಆದರೆ ಈಗ ಇಕ್ಕಟ್ಟಿಗೆ ಸಿಲುಕಿದೆ. ಬೇರೆ ಬೇರೆ ದೇಶಗಳು ಸೋಷಿಯಲ್‌ ಮೀಡಿಯಾಗಳನ್ನು ನಿಯಂತ್ರಿಸಲು ಏನು ದಾರಿ ಕಂಡುಕೊಂಡಿವೆ?

ಭಾರತ

ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೇಂದ್ರ ಸರ್ಕಾರ ಕಾಯ್ದೆ ರೂಪಿಸುವುದಕ್ಕೆ ಮುಂದಾಗಿದೆ. ಫೇಸ್‌ಬುಕ್‌, ಟ್ವೀಟರ್‌ನಂತಹ ಸೋಷಿಯಲ್‌ ಮೀಡಿಯಾಗಳೇ ಸ್ವತಃ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಬಂದ್‌ ಮಾಡಿಸುತ್ತೇವೆ ಎಂದೂ ಎಚ್ಚರಿಕೆ ನೀಡಿದೆ. ಹಲವಾರು ವೆಬ್‌ಸೈಟುಗಳು ಸುಳ್ಳುಸುದ್ದಿಗಳನ್ನು ಪತ್ತೆಹಚ್ಚಿ ಪ್ರಕಟಿಸುತ್ತಿವೆ.

ಸುಳ್ಳು ಸುದ್ದಿ ಹಬ್ಬಿಸಿದರೆ 5 ಕೋಟಿ ದಂಡ, 10 ವರ್ಷ ಜೈಲು ಶಿಕ್ಷೆ ಖಚಿತ!

ಪಾಕಿಸ್ತಾನ

ಕಾಯ್ದೆ, ನಿಯಮಗಳೇನೂ ಇಲ್ಲ. ಆದರೆ ಕಳೆದ ವರ್ಷ ಪಾಕಿಸ್ತಾನ ಸರ್ಕಾರವೇ ‘ಫೇಕ್‌ನ್ಯೂಸ್‌ ಬಸ್ಟರ್‌’ ಎಂಬ ಟ್ವೀಟರ್‌ ಖಾತೆ ತೆರೆದಿದೆ. ಸೋಷಿಯಲ್‌ ಮೀಡಿಯಾಗಳಲ್ಲಿ ಕಾಣಿಸಿಕೊಳ್ಳುವ ಹಾನಿಕಾರ ಸುಳ್ಳುಸುದ್ದಿಗಳನ್ನು ಹೆಕ್ಕಿ ಹೆಕ್ಕಿ ‘ಇದು ಸುಳ್ಳುಸುದ್ದಿ’ ಎಂದು ಈ ಟ್ವೀಟರ್‌ ಖಾತೆ ಪತ್ತೆಹಚ್ಚಿ ಹೇಳುತ್ತದೆ.

ಅಮೆರಿಕ

ಫೇಕ್‌ ನ್ಯೂಸ್‌ ಪ್ರಸಾರ ತಡೆಗಟ್ಟಲು ಕಾಯ್ದೆ ರೂಪಿಸಲು ಮುಂದಾಗಿದೆ. ಸುಳ್ಳುಸುದ್ದಿಗಳನ್ನು ಸೋಷಿಯಲ್‌ ಮೀಡಿಯಾಗಳು ಫಿಲ್ಟರ್‌ ಮಾಡದಿದ್ದರೆ ಕಾನೂನು ಸಮರಕ್ಕೂ ನಿರ್ಧರಿಸಿದೆ. 2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಷಿಯಲ್‌ ಮೀಡಿಯಾಗಳ ಮೂಲಕ ರಷ್ಯಾ ಹಸ್ತಕ್ಷೇಪ ಮಾಡಿದ್ದರಿಂದ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

ಸಿಂಗಾಪುರ

ಕಾಯ್ದೆಯ ಕರಡು ಸಿದ್ಧವಾಗಿದೆ. ಅದರಲ್ಲಿ ಸುಳ್ಳುಸುದ್ದಿ ಹರಡುವವರಿಗೆ 10 ವರ್ಷದವರೆಗೆ ಜೈಲುಶಿಕ್ಷೆ ವಿಧಿಸುವ ಪ್ರಸ್ತಾಪವಿದೆ. ಸೋಷಿಯಲ್‌ ಮೀಡಿಯಾಗಳು ಸುಳ್ಳುಸುದ್ದಿ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ 5 ಕೋಟಿ ರು. ದಂಡ ವಿಧಿಸುವ, ಸರ್ಕಾರ ಸೂಚಿಸಿದ ಮೇಲೂ ತಪ್ಪು ಮಾಹಿತಿ ಹರಡುವ ಪೋಸ್ಟ್‌ಗಳನ್ನು ತಿದ್ದದ ಜನರಿಗೆ 10 ಲಕ್ಷ ರು. ದಂಡ ವಿಧಿಸುವ ಅವಕಾಶವಿದೆ.

ರಷ್ಯಾ

ಈ ವರ್ಷದ ಮಾಚ್‌ರ್‍ನಲ್ಲಿ ಕಠಿಣ ಕಾಯ್ದೆ ಜಾರಿಗೆ ಬಂದಿದೆ. ಸುಳ್ಳುಸುದ್ದಿ ಪ್ರಕಟಿಸುವ ಮಾಧ್ಯಮಗಳಿಗೆ 16 ಲಕ್ಷ ರು. ದಂಡ, ಸರ್ಕಾರವನ್ನು ಅವಮಾನಿಸುವ ಪೋಸ್ಟ್‌ಗಳಿಗೆ 3 ಲಕ್ಷ ರು. ದಂಡ ಹಾಗೂ 15 ದಿನಗಳ ಜೈಲುಶಿಕ್ಷೆ ವಿಧಿಸಲಾಗುತ್ತದೆ.

ಚೀನಾ

ಈಗಾಗಲೇ ಟ್ವೀಟರ್‌, ಗೂಗಲ್‌, ವಾಟ್ಸ್‌ಆ್ಯಪ್‌ಗಳನ್ನು ಚೀನಾ ನಿಷೇಧಿಸಿದೆ. ಸರ್ಕಾರವೇ ಸೋಷಿಯಲ್‌ ಮೀಡಿಯಾ ಪೋಸ್ಟ್‌ಗಳ ಮೇಲೆ ಕಣ್ಣಿಡಲು ಸಾವಿರಾರು ಸೈಬರ್‌ ಪೊಲೀಸರನ್ನು ನೇಮಿಸಿದೆ. ಅವರು ಸುಳ್ಳುಸುದ್ದಿ ಅಥವಾ ಸರ್ಕಾರದ ವಿರುದ್ಧದ ಸುದ್ದಿಗಳನ್ನು ಡಿಲೀಟ್‌ ಮಾಡುತ್ತಾರೆ.

ಸುಳ್ಳು ಸುದ್ದಿ ಪ್ರಸಾರ ತಡೆಗೆ ವಿಶ್ವಸಂಸ್ಥೆಯೊಂದಿಗೆ ಭಾರತ ಸಹಿ!

ಜರ್ಮನಿ

ಕಠಿಣ ಕಾಯ್ದೆಯಿದೆ. ಫೇಕ್‌ ನ್ಯೂಸ್‌ ವಿರುದ್ಧ ದೂರು ಬಂದರೆ ಸೋಷಿಯಲ್‌ ಮೀಡಿಯಾಗಳು 24 ಗಂಟೆಯೊಳಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ 400 ಕೋಟಿ ರು. ದಂಡ ವಿಧಿಸಲಾಗುತ್ತದೆ. ಸುಳ್ಳುಸುದ್ದಿ ಹರಡುವ ವ್ಯಕ್ತಿಗಳಿಗೆ 40 ಕೋಟಿ ರು. ದಂಡ ವಿಧಿಸಲಾಗುತ್ತದೆ.

ಆಸ್ಪ್ರೇಲಿಯಾ

ಈ ವರ್ಷ ಕಠಿಣ ಕಾಯ್ದೆ ಜಾರಿಗೆ ತಂದಿದೆ. ಭಯೋತ್ಪಾದನೆ, ಕೊಲೆ, ಅತ್ಯಾಚಾರ ಹಾಗೂ ಗಂಭೀರ ಅಪರಾಧಗಳನ್ನು ತೋರಿಸುವ ಪೋಸ್ಟ್‌ಗಳನ್ನು ಪ್ರಕಟಿಸಿದರೆ ಸೋಷಿಯಲ್‌ ಮೀಡಿಯಾಗಳು ತಮ್ಮ ಆದಾಯದ ಶೇ.10ರಷ್ಟುಹಣವನ್ನು ಸರ್ಕಾರಕ್ಕೆ ದಂಡದ ರೂಪದಲ್ಲಿ ಪಾವತಿಸಬೇಕು. ಸುಳ್ಳುಸುದ್ದಿ ಹರಡುವ ಜನರಿಗೆ 80 ಲಕ್ಷ ರು. ದಂಡ.

ಮಲೇಷ್ಯಾ

ಸುಳ್ಳುಸುದ್ದಿ ಪ್ರಸಾರ ತಡೆಗೆ ಕಠಿಣ ಕಾಯ್ದೆ ಹೊಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಫೇಕ್‌ ನ್ಯೂಸ್‌ ಪೋಸ್ಟ್‌ ಮಾಡುವವರಿಗೆ 85 ಲಕ್ಷ ರು. ದಂಡ ಅಥವಾ ಆರು ವರ್ಷದವರೆಗೆ ಜೈಲುಶಿಕ್ಷೆ ವಿಧಿಸಲಾಗುತ್ತದೆ.

click me!