
ಬೆಂಗಳೂರು(ನ.01) 827 ಪೋರ್ನ್ ವೆಬ್ಸೈಟ್ಗಳಿಗೆ ಬ್ಯಾನ್ ಪಟ್ಟಿ ನೀಡಲಾಗಿತ್ತು. ಮೊದಲಿಗೆ ಈ ಸಂಗತಿ ಅರಿವಿಗೆ ಬಾರದ ಗ್ರಾಹಕರು ಸುಮ್ಮನಿದ್ದರು. ಯಾವಾಗ ತಾವು ಹುಡುಕುತ್ತಿರುವುದು ಸಿಗಲಿಲ್ಲವೋ ಆಗ ಮಾಡಿದ ಕೆಲಸವೇ ಬೇರೆ.
ಡೇಟಾ ಬಳಕೆಯಲ್ಲಿ ಪೋರ್ನ್ ಕೊಡುಗೆ ಸಾಕಷ್ಟಿದೆ. ಪೋರ್ನ್ ಹಬ್ ಎನ್ನುವ ಕಂಪನಿ ಬೆಳೆದು ನಿಂತ ರೀತಿಯೇ ಇದಕ್ಕೆ ಸಾಕ್ಷ್ಯ ಒದಗಿಸುತ್ತದೆ. ಆದರೆ ಸಂಪೂರ್ಣ ಪೋರ್ನ್ ಬ್ಯಾನ್ ನಿಂದ ಕಂಪನಿಗಳು ಶೇ. 35-40 ರಷ್ಟು ಆದಾಯ ಕಳೆದುಕೊಳ್ಳಬೇಕಾಗುತ್ತದೆ ಎಂಬ ಮಾಹಿತಿಯನ್ನು ತಜ್ಞರು ನೀಡುತ್ತಾರೆ.
ಬೇಕಾದ್ದನ್ನು ಎಂದಿನಂತೆ ನೋಡಲು ಹೋದಾಗ ನೀವು ಈ ಹೊಸ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಳ್ಳಿ ಎಂಬ ಮೆಸೇಜ್ ಬಂದಿದೆ. ಸಿಡಿಮಿಡಿಗೊಂಡ ಗ್ರಾಹಕರು ಮೊದಲು ಕರೆ ಮಾಡಿದ್ದು ಕಸ್ಟಮ್ ಕೇರ್‌ಗೆ ಏರ್ ಟೆಲ್, ಜೀಯೋ ಮತ್ತು ವೋಡಾಫೋನ್ ಗೆ ಸಾವಿರಾರು ಕರೆಗಳು ಹರಿದು ಬಂದಿವೆ.
ಪೋರ್ನ್.. ಅಲ್ಲಿ ಓಪನ್ ಆಗದಿದ್ದರೇನು.. ಇಲ್ಲಿ ಆಗ್ತಿದೆ!
ಇನ್ನೊಂದು ಕಡೆ ಪೋರ್ನ್ ಬ್ಯಾನ್ ಹ್ಯಾಶ್ ಟ್ಯಾಗ್ ಅಡಿಯಲ್ಲಿ ಟ್ವೀಟ್ ಸಮರ ಶುರು ಮಾಡಿದ್ದಾರೆ. ಇದು ನೆಟ್ ನ್ಯೂಟ್ರಾಲಿಟಿ ನಿಯಮಕ್ಕೆ ವಿರೋಧ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೋರ್ನ್ ಬ್ಯಾನ್, ಸೋಶಿಯಲ್ ಮೀಡಿಯಾ ರಿಯಾಕ್ಷನ್.. ಅಬ್ಬಬ್ಬಾ!
ಪೋರ್ನ್ ಸಂಪೂರ್ಣ ಬ್ಯಾನ್ ಆದರೆ ಟೆಲಿಕಾಂ ವಲಯದ ಮೇಲೂ ದೊಡ್ಡ ಪರಿಣಾಮ ಬೀರಲಿದೆ. ಶೇ. 35-40 ರಷ್ಟು ಬಳಕೆಯಾಗುವ ಡೇಟಾ ಪೋರ್ನ್ ಗೆ ಸಂಬಂಧಿಸಿದ್ದೇ ಆಗಿರುತ್ತದೆ. ಈ ಬಗ್ಗೆ ಟೆಲಿಕಾಂ ಕಂಪನಿಗಳು ಯಾವುದೇ ಸ್ಪಷ್ಟ ನಿರ್ಧಾರ ಹೇಳುತ್ತಿಲ್ಲ.
ಇದೇ ಮೊದಲಲ್ಲ: 2015ರ ಆಗಸ್ಟ್ ನಲ್ಲಿಯೇ ಸುಪ್ರೀಂ ಕೋರ್ಟ್ ಆದೇಶದಂತೆಯೇ ಪೋರ್ನ್ ವೆಬ್ ತಾಣಗಳನ್ನು ಭಾರತದಲ್ಲಿ ಬಂದ್ ಮಾಡಲು ಟೆಲಿಕಾಂ ಇಲಾಖೆ ಮುಂದಾಗಿತ್ತು. ಮಕ್ಕಳನ್ನು ಫೋರ್ನೋಗ್ರಫಿಗೆ ಬಳಸಿಕೊಳ್ಳಲಾಗುತ್ತಿದೆ, ಮಕ್ಕಳಿಗೆ ಸಂಬಂಧಿಸಿದ ಅಶ್ಲೀಲ ಚಿತ್ರ ಮಾರಾಟ ಜಾಲವೇ ದೇಶದಲ್ಲಿ ಹುಟ್ಟಿಕೊಂಡಿದೆ ಎಂಬ ಆರೋಪಗಳು ಕೇಳಿ ಬಂದ ನಂತರ ಕೇಂದ್ರ ಸರಕಾರ ಎಲ್ಲ ಸೈಟ್ ಗಳ ನಿಷೇಧಕ್ಕೆ ಮುಂದಾಗಿತ್ತು. ಆದರೆ ಪರ-ವಿರೋಧದ ಅಭಿಪ್ರಾಯದ ನಂತರ ಕೆಲವು ಸೈಟ್ ಗಳ ನಿಷೇಧ ಮಾಡಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.