'ನಂಗೇ ರಕ್ಷಣೆ ನೀಡಲಾಗದಿದ್ದರೆ ರಾಜೀನಾಮೆ ನೀಡಲಿ'

By Web DeskFirst Published Nov 27, 2018, 2:13 PM IST
Highlights

ನನಗೆ ರಕ್ಷಣೆ ನೀಡಲಾಗದಿದ್ದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡುವುದು ಒಳಿತು ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂಗ್ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ನವದೆಹಲಿ : ದಿಲ್ಲಿ ಮುಖ್ಯಮಂತ್ರಿಗೆ  ಭದ್ರತೆ ನೀಡಲು ಸಾಧ್ಯವಾಗದಿದ್ದಲ್ಲಿ ತಮ್ಮ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಲಿ ಎಂದು ದಿಲ್ಲಿ ಮುಖ್ಯಮಂತ್ರಿ ಅವರಿಂದ್ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. 

ಕೆಲ ದಿನಗಳ ಹಿಂದಷ್ಟೇ ಕೇಜ್ರಿವಾಲ್ ಮೇಲೆ ಖಾರದಪುಡಿ ದಾಳಿ ನಡೆದಿದ್ದು, ಈ ಘಟನೆಯ ಸಂಬಂಧ ಕೇಜ್ರಿವಾಲ್ ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ. 

ದಿಲ್ಲಿ ಜನಕ್ಕೆ ಹೆಮ್ಮೆ ಇದೆ :  ಇನ್ನು ದಿಲ್ಲಿಯಲ್ಲಿ ಆಮ್ ಆದ್ಮಿ ಸರ್ಕಾರ ಕಳೆದ ಮೂರು ವರ್ಷಗಳಿಂದ ಆಡಳಿತ ನಡೆಸುತ್ತಿದ್ದು, ಗುಜರಾತ್ ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿ ಮಾಡಿದ ಕೆಲಸಕ್ಕಿಂತ ನಮ್ಮ ಪಕ್ಷ ಹೆಚ್ಚು ಕೆಲಸ ಮಾಡಿದೆ . ದಿಲ್ಲಿಯ ಜನತೆ ತಮ್ಮ ಪ್ರಾಮಾಣಿಕ ಮುಖ್ಯಮಂತ್ರಿಯ ಬಗ್ಗೆ ಹೆಮ್ಮೆ ಪಡುತ್ತಿದ್ದಾರೆ. ದೇಶದ ಜನರೂ ಕೂಡ ಪ್ರಧಾನಿ ಬಗ್ಗೆ ಇದೇ ರೀತಿಯ ಭಾವನೆಯನ್ನು ಹೊಂದಿದ್ದಾರೆಯೇ ಎಂದು  ಪ್ರಶ್ನೆ ಮಾಡಿದ್ದಾರೆ. 

ಇನ್ನು ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು ಭ್ರಷ್ಟಾಚಾರ, ರಪೇಲ್ ಯುದ್ಧ ವಿಮಾನ ಖರೀದಿಯಲ್ಲಿ ಭಾರೀ ಅವ್ಯವಹಾರಗಳು ನಡೆದಿವೆ.  ಅಲ್ಲದೇ ಎನ್ ಡಿ ಎ ಸರ್ಕಾರದ ಅವಧಿಯಲ್ಲಿಯೇ ನೀರವ್ ಮೋದಿ, ವಿಜಯ್ ಮಲ್ಯ  ಸಾವಿರಾರು ಕೋಟಿ ರು. ಸಾಲ ಮಾಡಿ ದೇಶದಿಂದ ಪರಾರಿಯಾದರು. ಇಂತಹ ಪ್ರಕರಣಗಳ ಬಗ್ಗೆಯೂ ಮೋದಿ ನೇತೃತ್ವದ ಸರ್ಕಾರ ಕ್ರಮ ಕೈಗೊಳ್ಳುವಲ್ಲಿ ತನ್ನ ವೈಫಲ್ಯವನ್ನು ತೋರಿಸುತ್ತಿದೆ. 

ಗುಜರಾತ್ ಮಾದರಿ ಎಂದು ಹೇಳುವ ಪ್ರಧಾನಿಗೆ ನಾನು ಚಾಲೆಂಜ್ ಮಾಡುತ್ತೇವೆ.  12 ವರ್ಷ ಗುಜರಾತ್ ನಲ್ಲಿ ಮಾಡಿದ ಕೆಲಸಕ್ಕಿಂತ ಮೂರು ವರ್ಷದಲ್ಲಿ ನಮ್ಮ ಸರ್ಕಾರದಲ್ಲಿ ದಿಲ್ಲಿಯಲ್ಲಿ ಹೆಚ್ಚಿನ ಕೆಲಸ ಮಾಡಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. 

ನವೆಂಬರ್ 20ರಂದು ವ್ಯಕ್ತಿಯೋರ್ವ ಖಾರದಪುಡಿ ಎರಚಿ ದಾಳಿ ಮಾಡಿದ್ದು, ಇದರ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಕೇಜ್ರಿವಾಲ್ ತಮ್ಮ ಮೇಲಿನ ದಾಳಿ ಸಂಬಂಧ ಆರೋಪ  ಮಾಡಿದ್ದಾರೆ.

click me!