Jul 26, 2018, 11:57 AM IST
ಕರಾಚಿ[ಜು.26]: ಪಾಕಿಸ್ತಾನ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು ಯಾವೊಂದು ಪಕ್ಷವು ಸ್ಪಷ್ಟ ಬಹುಮತ ಗಳಿಸಲು ಸಫಲವಾಗಿಲ್ಲ. ಮಾಜಿ ಕ್ರಿಕೆಟಿಗ ಕಂ ರಾಜಕಾರಣಿ ಇಮ್ರಾನ್ ಖಾನ್ ನೇತೃತ್ವದ ತೆಹ್ರಿಕ್ ಇ ಇನ್ಸಾಫ್ ಪಕ್ಷ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಒಟ್ಟು 272 ಸ್ಥಾನಗಳಲ್ಲಿ ಪಿಟಿಐ ಪಕ್ಷ 112 ಸ್ಥಾನಗಳನ್ನು ಗೆದ್ದುಕೊಂಡರೆ, ನವಾಜ್ ಷರೀಫ್ ಪಕ್ಷ 65 ಸ್ಥಾನ ಹಾಗೂ ಪಿಪಿಪಿ ಪಕ್ಷ 43 ಸ್ಥಾನಗಳಲ್ಲಿ ಗೆಲುವಿನ ನಗೆ ಬೀರಿದೆ.