ಜನರಲ್ಲಿ ಮೋದಿ ವಿಶೇಷ ರಿಕ್ವೆಸ್ಟ್, ಪ್ರಮಾಣವಚನ ಸ್ವೀಕರಿಸಿದ ಗೆಹ್ಲೋಟ್; ಜು.11ರ ಟಾಪ್ 10 ಸುದ್ದಿ!

By Suvarna NewsFirst Published Jul 11, 2021, 5:01 PM IST
Highlights

ಭಾರತದ ಕಾನೂನಿಗೆ ತಲೆ ಬಾಗಿರುವ ಟ್ವಿಟರ್ ಕುಂದು ಕೊರತೆ ಅಧಿಕಾರಿ ನೇಮಕ ಮಾಡಿದೆ. ಪದ್ಮ ಪ್ರಶಸ್ತಿಗೆ ಹೆಸರು ಸೂಚಿಸುವಂತೆ ಜನತೆಗೆ ಮೋದಿ ಆಹ್ವಾನ ನೀಡಿದ್ದಾರೆ. ಕರ್ನಾಟಕದ  ರಾಜ್ಯಪಾಲರಾಗಿ ಥಾವರ್ ಚಂದ್ ಗೆಹ್ಲೋಟ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಸುದೀಪ್ ಪೋಸ್ಟರ್ ಕಾಪಿ, ಭೂಮಿಗಪ್ಪಳಿಸಲಿದೆ ಸೌರ ಚಂಡಮಾರುತ ಸೇರಿದಂತೆ ಜುಲೈ 11ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 

ಭಾರತದ ಕಾನೂನಿಗೆ ತಲೆ ಬಾಗಿದ ಟ್ವಿಟರ್,ಕುಂದು ಕೊರತೆ ಅಧಿಕಾರಿ ನೇಮಕ

ಟ್ವಿಟರ್ ವಿನಯ್ ಪ್ರಕಾಶ್ ಅವರನ್ನು ಭಾರತದಲ್ಲಿ ಕುಂದುಕೊರತೆ ಅಧಿಕಾರಿ (ಆರ್‌ಜಿಒ) ಆಗಿ ನೇಮಿಸಿದೆ. ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನ ವೆಬ್‌ಸೈಟ್ ವಿವರಗಳ ಪ್ರಕಾರ, ಪ್ರಕಾಶ್ ಅವರನ್ನು ಕುಂದುಕೊರತೆ-ಅಧಿಕಾರಿ-ಇನ್ @ twitter.com ನಲ್ಲಿ ಸಂಪರ್ಕಿಸಬಹುದಾಗಿದೆ.

#PeoplesPadma ಪ್ರಶಸ್ತಿಗೆ ಹೆಸರು ಸೂಚಿಸುವಂತೆ ಜನತೆಗೆ ಮೋದಿ ಆಹ್ವಾನ

 ತಳಹಂತದಲ್ಲಿ, ತೆರೆ ಮರೆಯಲ್ಲಿ ಅತ್ಯಂತ ಶ್ರಮದಿಂದ ಕೆಲಸ ಮಾಡುತ್ತಿರೋ ಅದ್ಭುತ ಪ್ರತಿಭೆಗಳ ಹೆಸರನ್ನು ಪದ್ಮ ಪ್ರಶಸ್ತಿಗೆ ಸೂಚಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕೇಳಿಕೊಂಡಿದ್ದಾರೆ.

ಬಾಹ್ಯಾಕಾಶದಲ್ಲಿ ಇಂದು ಭಾರತದ ಶಿರಿಶಾ ಇತಿಹಾಸ : ಖಾಸಗಿ ನೌಕೆಯಲ್ಲಿ 90 ನಿಮಿಷ ಸಾಹಸ

ಖಾಸಗಿ ಬಾಹ್ಯಾಕಾಶ ನೌಕೆಯೊಂದು ಭಾನುವಾರ ಅಮೆರಿಕದಿಂದ ಅಂತರಿಕ್ಷಕ್ಕೆ ಉಡಾವಣೆಯಾಗಲಿದೆ. ಈ ನೌಕೆಯ ನಾಲ್ಕನೇ ಯಾತ್ರಿಕರಾಗಿ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಜನಿಸಿ, ಈಗ ಅಮೆರಿಕದಲ್ಲಿ ನೆಲೆ ಕಂಡುಕೊಂಡಿರುವ 34 ವರ್ಷದ ಏರೋನಾಟಿಕಲ್‌ ಎಂಜಿನಿಯರ್‌ ಶಿರಿಶಾ ಬಾಂಡ್ಲಾ ತೆರಳುತ್ತಿದ್ದಾರೆ. 90 ನಿಮಿಷಗಳ ಈ ಯಾನ ಇಡೀ ವಿಶ್ವದ ಗಮನಸೆಳೆದಿದೆ.

20 ಬೆಂಜ್ ಕಾರಿನ ಓನರ್‌ ಟೀಮ್‌ ಇಂಡಿಯಾ ಮಾಜಿ ಕ್ಯಾಪ್ಟನ್‌!

ಟೀಮ್‌ ಇಂಡಿಯಾದ ಮಾಜಿ ಕ್ಯಾಪ್ಟನ್‌ ಸೌರವ್ ಗಂಗೂಲಿ ಜುಲೈ 8 ರಂದು 49 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಆಕ್ರಮಣಕಾರಿ ಎಡಗೈ ಬ್ಯಾಟ್ಸ್‌ಮನ್‌ನ ಹೊರತಾಗಿ, ಅವರು ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು. ಕ್ರೀಡೆ ಜೊತೆಗೆ, ತಮ್ಮ ಅದ್ಧೂರಿ ಲೈಫ್‌ಸ್ಟೈಲ್‌ಗೂ ಫೇಮಸ್‌ ದಾದಾ. ಗಂಗೂಲಿಯ ಕೆಲವು ಅತ್ಯುತ್ತಮ ಕಾರುಗಳು ಮತ್ತು ಬೈಕುಗಳ ಕಲೆಕ್ಷನ್‌ ಮಾಹಿತಿ ಇಲ್ಲಿದೆ.

ದಿವ್ಯಾ- ಅರವಿಂದ್ ಒಂದೇ ಬಣ್ಣದ ಬಟ್ಟೆ, ಡಿಸೈನ್‌ ನೋಡಿ ನೆಟ್ಟಿಗರು ಶಾಕ್?

ಬಿಗ್ ಬಾಸ್ ಎರಡನೇ ಇನಿಂಗ್ಸ್‌ನಲ್ಲಿ ಹೊಸ ಟ್ರೆಂಡ್ ಕ್ರಿಯೇಟ್ ಮಾಡುತ್ತಿರುವ ದಿವ್ಯಾ ಉರುಡುಗ- ಅರವಿಂದ್ ಕೆಪಿ. ಅವರಿಬ್ಬರ ಫ್ಯಾನ್‌ ಪೇಜ್‌ಗಳಲ್ಲಿ ನೀವು ನೋಡಬಹುದು ಮ್ಯಾಚಿಂಗ್ ಲುಕ್ಸ್.

ಸುದೀಪ್ ಪೋಸ್ಟರ್ ಲುಕ್ ಕಾಪಿ ಮಾಡಿದ ಬಾಲಿವುಡ್!...

ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಏನೋ ಡಿಫರೆಂಟ್ ಆಗಿದೆ ಎಂದು ಕಾಮೆಂಟ್ ಮಾಡುತ್ತಿದ್ದ ನೆಟ್ಟಿಗರು, ಯಾಮಿ ಗೌತಮ್‌ ಚಿತ್ರದ 'ಬೂಟ್ ಪೊಲೀಸ್‌' ಪೋಸ್ಟರ್ ನೋಡಿ ಶಾಕ್ ಆಗಿದ್ದಾರೆ. ಇದು ಪಕ್ಕಾ ವಿಕ್ರಾಂತ್ ರೋಣ ಕಾಪಿ ಮಾಡಿರುವ ಪೋಸ್ಟರ್‌ ಎಂದು ಟ್ರೋಲ್ ಮಾಡುತ್ತಿದ್ದಾರೆ.

ಭೂಮಿಗಪ್ಪಳಿಸಲಿದೆ ಸೌರ ಚಂಡಮಾರುತ: GPS, ನೆಟ್‌ವರ್ಕ್‌ ಸಮಸ್ಯೆ

ಪ್ರಬಲ ಸೌರ ಚಂಡಮಾರುತವು 1.6 ದಶಲಕ್ಷ ಕಿಲೋಮೀಟರ್ ವೇಗದಲ್ಲಿ ಭೂಮಿಯನ್ನು ಸಮೀಪಿಸುತ್ತಿದೆ. ಈ ಚಂಡಮಾರುತವು ಭಾನುವಾರ ಅಥವಾ ಸೋಮವಾರ ಭೂಮಿಯನ್ನು ಅಪ್ಪಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಕರ್ನಾಟಕದ ನೂತನ ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕರಿಸಿದ ಥಾವರ್ ಚಂದ್ ಗೆಹ್ಲೋಟ್

ಕರ್ನಾಟಕದ ನೂತನ ರಾಜ್ಯಪಾಲರಾಗಿ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು(ಭಾನುವಾರ) ಪ್ರಮಾಣವಚನ ಸ್ವೀಕರಿಸಿದ್ದಾರೆ. ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಪ್ರತಿಜ್ಞಾವಿಧಿ ಬೋಧಿಸಿದ್ದಾರೆ. 

ಹಿಂದು ಯುವಕ ಹಿಂದು ಯುವತಿಗೆ ಸುಳ್ಳು ಹೇಳಿದ್ರೂ ಅದು ಜಿಹಾದ್..!

ಹಿಂದೂ ಹುಡುಗಿಗೆ ಸುಳ್ಳು ಹೇಳುವ ಹಿಂದೂ ಹುಡುಗ ಕೂಡ ಜಿಹಾದ್ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ರಾಜ್ಯ ಸರ್ಕಾರ ಇದರ ವಿರುದ್ಧ ಕಾನೂನು ತರಲಿದೆ ಎಂದು ಹೇಳಿದ್ದಾರೆ.
 

click me!