ಬೆಂಗಳೂರು: ಕೊಕೇನ್ ಮಾರುತ್ತಿದ್ದ ನೈಜೀರಿಯಾ ಪ್ರಜೆ ಬಂಧನ

By Web DeskFirst Published Nov 26, 2019, 1:08 PM IST
Highlights

ಸಿಲಿಕಾನ್ ಸಿಟಿಯಲ್ಲಿ ವಿದೇಶಿಗಳ ಪುಂಡಾಟ ಅತಿಯಾಗಿದ್ದು, ಇದೀಗ ಬೆಂಗಳೂರಿನ ಜಯನಗರದಲ್ಲಿ ಕೊಕೇನ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ನೈಜಿರಿಯಾ ಮೂಲದ ಯುವಕ ಜಯನಗರದಲ್ಲಿ ಕೊಕೇನ್ ಪೋರೈಸುತ್ತಿದ್ದ.

ಬೆಂಗಳೂರು(ನ.26): ಸಿಲಿಕಾನ್ ಸಿಟಿಯಲ್ಲಿ ವಿದೇಶಿಗಳ ಪುಂಡಾಟ ಅತಿಯಾಗಿದ್ದು, ಇದೀಗ ಬೆಂಗಳೂರಿನ ಜಯನಗರದಲ್ಲಿ ಕೊಕೇನ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ನೈಜಿರಿಯಾ ಮೂಲದ ಯುವಕ ಜಯನಗರದಲ್ಲಿ ಕೊಕೇನ್ ಪೋರೈಸುತ್ತಿದ್ದ.

ಕೊಕೇನ್ ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆಯನ್ನು ಬಂಧಿಸಲಾಗಿದ್ದು, ಒಬೆರಾಯ್ ವಿಕ್ಟರ್ ಬಂಧಿತ ನೈಜೀರಿಯಾ ಪ್ರಜೆ. ವಾಟ್ಸಪ್ ಮೂಲಕ ಜನರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ ವಿಕ್ಟರ್ ನಂತರ ಆರ್ಡರ್‌ಗಳನ್ನು ತೆಗೆದುಕೊಳ್ಳುತ್ತಿದ್ದ. ನಿಗದಿತ ಸ್ಥಳ ಗೊತ್ತು ಮಾಡಿ ಕೊಕೇನ್ ಹಸ್ತಾಂತರಿಸಲಾಗುತ್ತಿತ್ತು. ನಿರ್ದಿಷ್ಟ ಸ್ಥಳಕ್ಕೆ ವ್ಯಕ್ತಿಯನ್ನು ಕರೆಯಿಸಿ ಮಾದಕ ವಸ್ತು ಕೊಕೇನ್ ಮಾರಾಟ ಮಾಡುತ್ತಿದ್ದ.

ಫ್ಯಾಕ್ಟರಿ ಕೊಡದ ಮಾವನ ಕೊಲೆಗೆ ಸುಪಾರಿ ಕೊಟ್ಟ ಅಳಿಯ!

ಜಯನಗರ ಪೊಲೀಸರು ಕಾರ್ಯಚರಣೆ ನಡೆಸಿ ನೈಜೀರಿಯಾ ಪ್ರಜೆಯನ್ನು ಬಂಧಿಸಿದ್ದಾರೆ. ಜಯನಗರ ಪೊಲೀಸರು ಅರೋಪಿ ಮೊಬೈಲ್‌ಗೆ ಕೊಕೇನ್ ಬೇಕೆಂದು ವಾಟ್ಸಪ್ ನಲ್ಲಿ ಸಂದೇಶ ಕಳುಹಿಸಿದ್ದಾರೆ. ಈ ಸಂದೇಶ ನೋಡಿ ಒಪ್ಪಿಗೆ ಸೂಚಿಸಿದ ಆರೋಪಿ ಒಂದು ಲೋಕೆಶನ್ ಕಳುಹಿಸಿ ಬರುವಂತೆ ತಿಳಿಸಿದ್ದಾನೆ.

ಕೊಕೇನ್ ನೀಡಲು ವಿಕ್ಟರ್ ಬಂದಂತಹ ಸಂದರ್ಭ ಅರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತದಿಂದ ಒಂದು ಲಕ್ಷ ಮೌಲ್ಯದ 14 ಗ್ರಾಂ ಕೊಕೇನ್, ಮೂರು ಸಾವಿರ ಹಣ ಹಾಗೂ ಒಂದು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

800 ರೂ. ಕುರ್ತಾ ಬುಕ್ ಮಾಡಿ 79 ಸಾವಿರ ಕಳ್ಕೊಂಡ ಯುವತಿ, ನಡೆದಿದ್ದೇನು..?

click me!