ನಾನು ಹುಟ್ಟು ಕಾಂಗ್ರೆಸ್ಸಿಗ; ಇದು ನನ್ನ ಘರ್ ವಾಪಸಿ

By Suvarna Web DeskFirst Published Jan 16, 2017, 7:16 AM IST
Highlights

ಬಿಜೆಪಿ ರಾಜ್ಯಸಭಾ ಸಂಸದರಾಗಿದ್ದ ಸಿಧು ಆ ಪಕ್ಷಕ್ಕೆ ಗುಡ್ ಬೈ ಹೇಳಿ, ಅವಾಜ್ ಈ ಪಂಜಾಬ್ ಎಂಬ ಪಕ್ಷವನ್ನು ಸ್ಥಾಪಿಸಿದ್ದರು.

ನವದೆಹಲಿ(ಜ.16): ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಗೂ ಮುನ್ನ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರಿರುವ ಖ್ಯಾತ ಕ್ರಿಕೆಟಿಗ ಹಾಗೂ ರಾಜಕಾರಣಿ ನವಜೋತ್ ಸಿಂಗ್ ಸಿಧು, 'ಈಗ ನನ್ನ ಹೊಸ ಇನಿಂಗ್ಸ್ ಶುರುವಾಗಿದ್ದು, ನನ್ನ ಇಡೀ ಜೀವನವನ್ನು ಕಾಂಗ್ರೆಸ್ ಪಕ್ಷಕ್ಕೆ ಮೀಸಲಿಡುತ್ತೇನೆ' ಎಂದಿದ್ದಾರೆ.

ಕಾಂಗ್ರೆಸ್'ಗೆ ಅಧಿಕೃತವಾಗಿ ಸೇರ್ಪಡೆಗೊಂಡ ಬಳಿಕ ಸುದ್ದಿಘೋಷ್ಠಿ ಬಳಿಕ ಮಾತನಾಡಿದ ಸಿಧು, ನಾನು ಹುಟ್ಟು ಕಾಂಗ್ರೆಸ್ಸಿಗನಾಗಿದ್ದು, ಇದು ನನ್ನ ಘರ್ ವಾಪಸಿ ಎಂದಿದ್ದಾರೆ.

ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಅಮರೀಂದರ್ ಸಿಂಗ್ ನೇತೃತ್ವದಲ್ಲಿ ಕೆಲಸ ಮಾಡುವಿರಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ 'ಸಿಕ್ಸರ್' ಪ್ರತಿಕ್ರಿಯೆ ನೀಡಿದ ಸಿಧು, " ಲಾಲೂ ಪ್ರಸಾದ್ ಮತ್ತು ನಿತೀಶ್ ಕುಮಾರ್ ಒಂದಾಗುತ್ತಾರೆ ಎಂದಾದರೆ ,ನಾನು ಮತ್ತು ಅಮರೀಂದರ್ ಯಾಕೆ ಒಂದಾಗಬಾರದು ಎಂದಿದ್ದಾರೆ.

ಈ ಬಾರಿಯ ಚುನಾವಣೆ ಪಂಜಾಬಿನ ಜನರ ಆತ್ಮಗೌರವದ ಹೋರಾಟವಾಗಿದೆ ಎಂದಿರುವ ಸಿಧು, ಡ್ರಗ್ಸ್ ಸಮಸ್ಯೆಯಿಂದ ಯುವಕರು ದಾರಿ ತಪ್ಪುತ್ತಿರುವುದನ್ನು ನೋಡಲು ಆಗುತ್ತಿಲ್ಲ. ಪಂಜಾಬ್'ನಲ್ಲಿ ಈ ಕಳಂಕವನ್ನು ತೊಡೆದು ಹಾಕುವುದೇ ನನ್ನ ಗುರಿ ಎಂದಿದ್ದಾರೆ.

ಬಿಜೆಪಿ ರಾಜ್ಯಸಭಾ ಸಂಸದರಾಗಿದ್ದ ಸಿಧು ಆ ಪಕ್ಷಕ್ಕೆ ಗುಡ್ ಬೈ ಹೇಳಿ, ಅವಾಜ್ ಈ ಪಂಜಾಬ್ ಎಂಬ ಪಕ್ಷವನ್ನು ಸ್ಥಾಪಿಸಿದ್ದರು. ಇದೀಗ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ಭೇಟಿ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. 

click me!