
ಭಾರತೀಯ ಮಸಾಲೆ ಪದಾರ್ಥಗಳು ಒಂದು ಕಾಲದಲ್ಲಿ ತನ್ನ ರುಚಿ, ಘಮಲಿನಿಂದಾಗಿ ಚಿನ್ನಕ್ಕೂ ಹೆಚ್ಚಿನ ಮೌಲ್ಯ ಪಡೆದಿದ್ದವು. ಪರಂಗಿಯವರಿಗೆ ದೊಡ್ಡ ಆಕರ್ಷಣೆಯಾಗಿದ್ದವು. ಆದರೆ, ಇತ್ತೀಚೆಗೆ ಕಲಬೆರಕೆ ಮಸಾಲೆ ಪುಡಿಗಳ ಬಗ್ಗೆ ಸುದ್ದಿಗಳು ಪದೇ ಪದೆ ಬರುತ್ತಿವೆ. ಹೆಸರಾಂತ ಬ್ರ್ಯಾಂಡ್ಗಳು ಕೂಡಾ ಕೆಮಿಕಲ್ ಹೆಚ್ಚು ಬಳಸುತ್ತಿವೆ ಎಂದು ಕೆಲ ವಿದೇಶಗಳು ಅವುಗಳ ರಫ್ತು ನಿಲ್ಲಿಸಿವೆ. ಇವುಗಳ ನಡುವೆ ದೆಹಲಿ ಪೋಲೀಸರು ಮೇ 5ರಂದು ದೆಹಲಿಯ ಕರವಾಲ್ ನಗರದಲ್ಲಿ ನಕಲಿ ಭಾರತೀಯ ಮಸಾಲೆ ಉತ್ಪಾದನಾ ಘಟಕಗಳನ್ನು ಭೇದಿಸಿದ್ದಾರೆ.
ನಕಲಿ ಭಾರತೀಯ ಮಸಾಲೆಗಳ ಇಬ್ಬರು ತಯಾರಕರು ಮತ್ತು ಒಬ್ಬ ಸರಬರಾಜುದಾರನನ್ನು ಬಂಧಿಸಲಾಗಿದೆ. ಅಪರಾಧದಲ್ಲಿ ಭಾಗಿಯಾಗಿರುವ 2 ಉತ್ಪಾದನಾ ಘಟಕಗಳು, ಯಂತ್ರಗಳು, ಟೆಂಪೋ ಮತ್ತು ಇತರ ಉಪಕರಣಗಳನ್ನು ದೆಹಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಒಟ್ಟು 15 ಟನ್‌ಗಳಷ್ಟು ಕಲಬೆರಕೆ ಭಾರತೀಯ ಮಸಾಲೆಗಳು ಮತ್ತು ಕಚ್ಚಾ ವಸ್ತುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಆರಂಭಿಕ ತನಿಖೆಯ ಪ್ರಕಾರ ಆರೋಪಿಗಳು ಭಾರೀ ಲಾಭ ಗಳಿಸಲು ದೆಹಲಿ/ಎನ್‌ಸಿಆರ್‌ನಲ್ಲಿ ಇವನ್ನು ಸರಬರಾಜು ಮಾಡುತ್ತಿದ್ದರು.
34 ವರ್ಷದ 317 ಕೆಜಿ ತೂಕದ ಮನುಷ್ಯ ಬಹು ಅಂಗಾಂಗ ವೈಫಲ್ಯದಿಂದ ಸಾವು, ಇವನನ್ನು ಎತ್ತಲು ಕ್ರೇನ್ ಬೇಕಿತ್ತು!
ಈಶಾನ್ಯ ದೆಹಲಿಯ ಕೆಲವು ತಯಾರಕರು ದೆಹಲಿ-ಎನ್‌ಸಿಆರ್‌ನಲ್ಲಿ ವಿವಿಧ ಬ್ರಾಂಡ್‌ಗಳ ಅಡಿಯಲ್ಲಿ ಕಲಬೆರಕೆ ಭಾರತೀಯ ಮಸಾಲೆಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಸೈಬರ್ ಸೆಲ್, ಕ್ರೈಂ ಬ್ರಾಂಚ್‌ಗೆ ಮಾಹಿತಿ ಬರುತಿದ್ದಂತೆಯೇ ಪೋಲೀಸರು ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದರು.
ಏನೆಲ್ಲ ಕಚ್ಚಾ ವಸ್ತುಗಳು?
ಕಣ್ಣು ಕುಕ್ಕುವಂಥ ಬಣ್ಣ ಹೊಂದಿದ, ಸಾಮಾನ್ಯರಿಂದ ಗುರುತಿಸಲು ಸಾಧ್ಯವಾಗದಷ್ಟು ಒರಿಜಿನಲ್ ಆಗಿ ಕಾಣುವ ಬರೋಬ್ಬರಿ 15 ಟನ್‌ನಷ್ಟು ಅರಿಶಿನ, ಗರಂ ಮಸಾಲಾ ಪುಡಿ, ಆಮ್ಚೂರ್ ಪುಡಿ ಮತ್ತು ಇತರ ಕಚ್ಚಾ ವಸ್ತುಗಳನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ. ನಿಜವಾಗಿ ಈ ಪದಾರ್ಥಗಳನ್ನು ತಯಾರಿಸಲು ಈ ಘಟಕಗಳು ಬಳಸುತ್ತಿದ್ದುದು, ಕೊಳೆತ ಅಕ್ಕಿ, ಕೊಳೆತ ತೆಂಗಿನಕಾಯಿ, ನೀಲಗಿರಿ ಎಲೆಗಳು, ಕೊಳೆತ ಹಣ್ಣುಗಳು, ಮರದ ಪುಡಿ, ಸಿಟ್ರಿಕ್ ಆಮ್ಲ, ಒಣ ಮೆಣಸಿನಕಾಯಿ ತಲೆಗಳು, ಬಣ್ಣ ರಾಸಾಯನಿಕಗಳು ಇತ್ಯಾದಿ!
ನಟಿ ಸಮಂತಾ ನಗ್ನ ಫೋಟೋ ಬಗ್ಗೆ ಬಿಸಿ ಬಿಸಿ ಚರ್ಚೆ; ಸ್ವತಃ ಶೇರ್ ಮಾಡಿ ಡಿಲೀಟ್ ಮಾಡಿದ್ರಾ?
ಅರಿಶಿನದ ನಕಲನ್ನು ತಯಾರಿಸಲು ಈ ಲಂಪಟರು ನಿಷೇಧಿತ ಅಶುದ್ಧ ವಸ್ತುಗಳು, ಆಮ್ಲಗಳು, ಎಣ್ಣೆಗಳನ್ನು ಬಳಸುತ್ತಿದ್ದರು. ಈ ನಕಲಿ ಮಸಾಲೆಗಳನ್ನು ದೆಹಲಿಯ ಖ್ಯಾತ ಮಾರುಕಟ್ಟೆಗಳಿಗೆ ಸರಬರಾಜು ಮಾಡಲಾಗುತ್ತಿತ್ತು.
ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ