ತರಗತಿಗಳಲ್ಲಿ ಮಕ್ಕಳು ಎ.ಸಿ ಬಳಕೆ ಮಾಡುತ್ತಿದ್ದರೆ, ಅದಕ್ಕಾಗುವ ವೆಚ್ಚವನ್ನು ಪೋಷಕರು ಶುಲ್ಕದ ರೂಪದಲ್ಲಿ ಪಾವತಿಸಬೇಕು ಎಂದು ದೆಹಲಿ ಹೈಕೋರ್ಟ್ ಆದೇಶ ನೀಡಿದೆ. ಈ ಸಂಬಂಧ ಶಾಲೆ ವಿಧಿಸಿದ್ದ ಶುಲ್ಕವನ್ನು ಎತ್ತಿಹಿಡಿದಿದೆ.
ನವದೆಹಲಿ (ಮೇ.6): ಶಾಲೆಗಳಲ್ಲಿ ತರಗತಿ ಕೋಣೆಗಳಲ್ಲಿ ಹವಾ ನಿಯಂತ್ರಕವನ್ನು(ಎಸಿ) ಬಳಸಿದರೆ ಅದರ ವೆಚ್ಚವನ್ನು ಪೋಷಕರೇ ಶುಲ್ಕದ ರೂಪದಲ್ಲಿ ವಿಧಿಸಬೇಕು ಎಂದು ದೆಹಲಿ ಹೈಕೋರ್ಟ್ ಆದೇಶಿಸಿದೆ.
ಪದವಿ ಆನರ್ಸ್ ಪ್ರವೇಶಕ್ಕೆ ಬೆಂ.ವಿವಿ ಅರ್ಜಿ ಆಹ್ವಾನ, ಕೇಂದ್ರೀಯ ವಿವಿ ಕೋರ್ಸ್‌ಗಳಿಗೆ ಮೇ 15ರಿಂದ ಪ್ರವೇಶ ಪರೀಕ್ಷೆ
ಇಲ್ಲಿನ ಖಾಸಗಿ ಶಾಲೆಯೊಂದು ತರಗತಿಯಲ್ಲಿ ಎಸಿ ಬಳಕೆಗಾಗಿ ಪೋಷಕರಿಂದ ತಿಂಗಳಿಗೆ 2000 ರು. ಶುಲ್ಕ ವಸೂಲಿ ಮಾಡಿರುವುದನ್ನು ವಿರೋಧಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಮನ್‌ಮೋಹನ್ ಈ ರೀತಿ ಅಭಿಪ್ರಾಯ ಪಟ್ಟಿದ್ದಾರೆ.
‘ಎಸಿ ವಿದ್ಯಾರ್ಥಿಗಳಿಗೆ ವಿಧಿಸುವ ಸೌಲಭ್ಯವಾಗಿದೆ. ಇದು ಪ್ರಯೋಗಾಲಯ ಶುಲ್ಕ ಸೇರಿದಂತೆ ಇತರ ಶುಲ್ಕಗಳಿಗಿಂತ ಭಿನ್ನವಾಗಿಲ್ಲ. ಇಂತಹ ಆರ್ಥಿಕ ವೆಚ್ಚವನ್ನು ಶಾಲೆಗಳು ಮಾತ್ರ ಭರಿಸಲು ಸಾಧ್ಯವಿಲ್ಲ. ಪೋಷಕರು ಶಾಲೆಗಳನ್ನು ಆಯ್ಕೆ ಮಾಡುವಾಗ ಅಲ್ಲಿನ ಸೌಲಭ್ಯ ಮತ್ತು ವೆಚ್ಚವನ್ನು ಗಮನಿಸಬೇಕು’ ಎಂದಿದ್ದಾರೆ.
ಬಿಬಿಎಂಪಿ ಪಾಲಿಕೆ ಶಾಲೆ-ಕಾಲೇಜುಗಳು ಕಾಲೇಜು ಶಿಕ್ಷಣ ಇಲಾಖೆಗೆ, ಅಂತಿಮ ಹಂತದ ಸಿದ್ಧತೆ
ಇನ್ನು ಈ ಬಾರಿ ಹಿಂದೆಂದೂ ಆಗದಷ್ಟು ಬಿಸಿಲಿನ ಪ್ರಖರತೆ ಹೆಚ್ಚಾಗಿದ್ದು, ನಿತ್ಯವೂ ಸರಾಸರಿ 40, 41 ಡಿಗ್ರಿ ತಾಪಮಾನ ಏರಿಕೆಯಾಗುತ್ತಿದ್ದು, ಕೆಂಡದಂತಹ ಬಿಸಿಲಿಗೆ ಜನತೆ ಕಂಗಾಲಾಗಿದ್ದಾರೆ. ನಿತ್ಯವೂ ಬೆಳಗ್ಗೆ 7 ಗಂಟೆಗೆ ಪ್ರಾರಂಭವಾಗುವ ಬಿಸಿಲಿನ ತಾಪ ಸಂಜೆ 6 ಗಂಟೆಯವರೆಗೂ ನಿಲ್ಲುವುದಿಲ್ಲ.