ಮೋದಿ ಸಂಪುಟದಿಂದ ಹೆಂಡತಿಯರಿಗೂ ತರಬೇತಿ

By Web DeskFirst Published Aug 14, 2018, 9:50 PM IST
Highlights

ಕಳೆದ ವಾರ ಸಂಸದರ ಹೆಂಡತಿಯರಿಗೂ ಮೋದಿ ಸರ್ಕಾರದ ಕೇಂದ್ರ ಸಚಿವರು ಒಂದು ದಿನದ ಪಾಠ ಮಾಡಿದ್ದಾರೆ

ಮೋದಿ ಸಂಪುಟದ ಸಚಿವರು ಸಂಸದರಿಗೆ ಸರ್ಕಾರದ ಸಾಧನೆಗಳ ಬಗ್ಗೆ ಭಾಷಣ ಬಿಗಿಯುವುದು ಇದ್ದದ್ದೇ. ಆದರೆ ಕಳೆದ ವಾರ ಸಂಸದರ
ಹೆಂಡತಿಯರಿಗೂ ಒಂದು ದಿನದ ಅಭ್ಯಾಸ ವರ್ಗ ನಡೆಸಿ ಸರ್ಕಾರ ಏನೆಲ್ಲಾ ಮಾಡಿದೆ ಎಂಬ ಬಗ್ಗೆ ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಪಿಯೂಷ್ ಗೋಯಲ್, ಧರ್ಮೇಂದ್ರ ಪ್ರಧಾನ್ ಪಾಠ ಮಾಡಿ ಹೋಗಿದ್ದಾರೆ. 

ಪ್ರಕಾಶ್ ಜಾವಡೇಕರ್ ಹೆಂಡತಿ ಪ್ರಾಚಿ ಅವರು ‘ಕಮಲ ಸಖಿ’ ಎಂಬ ಬಿಜೆಪಿ ಸಂಸದರ ಪತ್ನಿಯರ ಸಂಘಟನೆ ಶುರುಮಾಡಿದ್ದು, ಇಲ್ಲೂ ಕೂಡ ಚುನಾವಣೆಯಲ್ಲಿ ಗಂಡಂದಿರಿಗೆ ನೆರವಾಗೋದು ಹೇಗೆ ಎಂದು ತರಬೇತಿ ಕೊಡಲಾಯಿತಂತೆ.

[ಪ್ರಶಾಂತ್ ನಾತು ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ ]

click me!