ಆರ್'ಬಿಐ ಬಿಡುಗಡೆ ಮಾಡಿರುವ 2000 ರೂ ನೋಟು ಸಹ ಸ್ಮಾರ್ಟ್..?

By Suvarna Web DeskFirst Published Nov 9, 2016, 6:12 AM IST
Highlights

ಆರ್ ಬಿಐ ಬಿಡುಗಡೆ ಮಾಡಿರುವ 2000 ರೂ ಮೌಲ್ಯದ ನೋಟುಗಳು ಕೇವಲ ಕಾಗದ ಚೂರಲ್ಲ, ಬದಲಿಗೆ ತನ್ನ ಒಡಲಲ್ಲಿ ನ್ಯಾನೋ ಚಿಪ್ಪನ್ನು ಇಟ್ಟುಕೊಂಡಿರುವ ಸ್ಮಾರ್ಟ್ ನೋಟು. ಇದೊಂದು ಹೆಚ್ಚಿನ ಮೌಲ್ಯದ ನೋಟು ಆಗಿರುವುದರಿಂದ ಕಪ್ಪು ಹಣವಾಗಿ ಶೇಖರಿಸುವ ಸಾಧ್ಯತೆ ಇರುವುದರಿಂದ ಹೊಸದೊಂದು ಪ್ರಯತ್ನಕ್ಕೆ ಆರ್ ಬಿಐ ಮುಂದಾಗಿದೆ. 

ದೆಹಲಿ(ನ.09): ನಿನ್ನೇ ರಾತ್ರಿ ದೇಶದ ನಾಗರೀಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದಲ್ಲಿ ಹೆಚ್ಚುತ್ತಿರುವ ಕಪ್ಪು ಹಣ ಮತ್ತು ನಕಲಿ ನೋಟುಗಳ ಹಾವಳಿಯನ್ನು ತಪ್ಪಿಸುವ ಸಲುವಾಗಿ 500 ರೂ ಹಾಗೂ 1000 ರೂ ಮುಖ ಬೆಲೆಯ ನೋಟುಗಳನ್ನು ನಿಷೇಧಿಸುತ್ತಿರುವುದಾಗಿ ತಿಳಿಸಿದರು. ಇದರ ಬದಲಾಗಿ ಹೊಸ ಮಾದರಿಯ 500 ರೂ ಹಾಗೂ 2000 ರೂ ಮುಖಬೆಲೆಯ ಹೊಸ ಮಾದರಿಯ ಸುಧಾರಿತ ನೋಟುಗಳನ್ನು ಚಲಾವಣೆಗೆ ತರುವುದಾಗಿ ಘೋಷಿಸಿದರು. ಈ ಮೂಲಕ ದೇಶದ ಆರ್ಥಿಕತೆಗೆ ಬಲ ತುಂಬುವ ವಾಗ್ದಾನವನ್ನು ಮಾಡಿದ್ದರು. 

500 ಹಾಗೂ 1000 ರೂ ನೋಟುಗಳನ್ನು ನಿಷೇಧಿಸುತ್ತಿರುವುದಕ್ಕೆ ಕಾರಣ ನೀಡಿದ ಪ್ರಧಾನಿ, ಈ ಮುಖಬೆಲೆಯ ನೋಟುಗಳಲ್ಲಿ ಹೆಚ್ಚಿನ ಪ್ರಮಾಣದ ಕಪ್ಪುಹಣ ಸಂಗ್ರಹವಾಗಿದೆ, ಇದರೊಂದಿಗೆ ಈ ಮುಖಬೆಲೆಯ ನಕಲಿ ನೋಟುಗಳು ಸಹ ಹೆಚ್ಚಿನ ಪ್ರಮಾಣದ ಚಲಾವಣೆಯಲ್ಲಿದ್ದು ಭಾತರದ ಆರ್ಥಿಕತೆಗೆ ಕುತ್ತು ತರುತ್ತಿವೆ. ಅದನ್ನು ತಡೆಯುವ ಸಲುವಾಗಿ ನೋಟುಗಳನ್ನು ನಿಷೇಧಿಸುವ ದಿಟ್ಟ ಕ್ರಮಕ್ಕೆ ಮುಂದಾಗಿರುವುದಾಗಿ ಅವರು ತಿಳಿಸಿದ್ದರು. ಹಾಗಾಗಿ ಈ ಹೊಸ ಸುಧಾರಿತ ಮಾದರಿಯ ನೋಟುಗಳನ್ನು ನಕಲಿ ಮಾಡದಂತೆ ಹಾಗೂ ಹೆಚ್ಚು ಪ್ರಮಾಣದಲ್ಲಿ ಶೇಕರಿಸಿಡದಂತೆ ಮಾಡಲು ಹಲವು ತಂತ್ರಗಳನ್ನು ಅಳವಡಿಸಲಾಗಿದೆ ಎನ್ನುವ ಮಾತುಗಳು ಕೇಳಿಬಂದಿದೆ. 

ಮೂಲಗಳ ಪ್ರಕಾರ ಈ ಹೊಸ ಮಾದರಿಯ 2000 ರೂ ನೋಟುಗಳಲ್ಲಿ ನ್ಯಾನೋ ಚಿಪ್ ಗಳನ್ನು ಅಳವಡಿಸಲಾಗಿದ್ದು, ಈ ಹಿನ್ನಲೆಯಲ್ಲಿ ಅದನ್ನು ನಕಲು ಮಾಡುವುದು ಕಷ್ಟ ಮತ್ತು ಸಂಗ್ರಹಿಸಲು ಸಾಧ್ಯವಿಲ್ಲ ಎನ್ನುವ ಮಾತುಗಳು ಕೇಳಿ ಬಂದಿದೆ. ಆದರೆ ಈ ಕುರಿತು ಆರ್ ಬಿಐ ಯಾವುದೇ ಮಾಹಿತಿಯನ್ನು ಹೊರ ಹಾಕಿಲ್ಲವಾದರು, ನೋಟಿನಲ್ಲಿದೆ ಎನ್ನಲಾದ ನ್ಯಾನೋ ತಂತ್ರಜ್ಞಾನದ ಬಗ್ಗೆ ಮಾಹಿತಿ ಇಲ್ಲಿದೆ. 

2000 ರೂ ನೋಟಿನ ವಿಶೇಷತೆಗಳು: 
ಆರ್ ಬಿಐ ಬಿಡುಗಡೆ ಮಾಡಿರುವ 2000 ರೂ ಮೌಲ್ಯದ ನೋಟುಗಳು ಕೇವಲ ಕಾಗದ ಚೂರಲ್ಲ, ಬದಲಿಗೆ ತನ್ನ ಒಡಲಲ್ಲಿ ನ್ಯಾನೋ ಚಿಪ್ಪನ್ನು ಇಟ್ಟುಕೊಂಡಿರುವ ಸ್ಮಾರ್ಟ್ ನೋಟು. ಇದೊಂದು ಹೆಚ್ಚಿನ ಮೌಲ್ಯದ ನೋಟು ಆಗಿರುವುದರಿಂದ ಕಪ್ಪು ಹಣವಾಗಿ ಶೇಖರಿಸುವ ಸಾಧ್ಯತೆ ಇರುವುದರಿಂದ ಹೊಸದೊಂದು ಪ್ರಯತ್ನಕ್ಕೆ ಆರ್ ಬಿಐ ಮುಂದಾಗಿದೆ. 

2000 ರೂ ಮೌಲ್ಯದ ನೋಟುಗಳನ್ನು ಕಪ್ಪು ಹಣವಾಗಿ ಶೇಕರಿಸಬಾರದು ಎನ್ನುವ ಸಲುವಾಗಿಯೇ ಡಿಸೈನ್ ಮಾಡಲಾಗಿದ್ದು, ನ್ಯಾನೋ ಟೆಕ್ನಾಲಜಿಯನ್ನು ಬಳಿಸಿಕೊಳ್ಳಲಾಗಿದೆ. ಈ ನೋಟಿನ ಒಳಗೆ ಎನ್'ಜಿಸಿ (ನ್ಯಾನೋ ಜಿಪಿಎಸ್ ಚಿಪ್) ಅಳವಾಡಿಸಲಾಗಿದೆ. 

ಈ ನ್ಯಾನೋ ಜಿಪಿಎಸ್ ಚಿಪ್ ಅನ್ನು ಯಾವ ಕಾರಣಕ್ಕಾಗಿ ಅಳಡಿಸಿದ್ದಾರೆ ಎಂದರೆ ಒಂದು ಈ ನೋಟುಗಳನ್ನು ಸುಲಭವಾಗಿ ನಕಲು ಮಾಡಲು ಸಾಧ್ಯವಾದಂತೆ ಮಾಡಲು ಮತ್ತು ಬ್ಯಾಂಕ್ ಮತ್ತು ಅಂಚೆ ಕಛೇರಿಗಳನ್ನು ಬಿಟ್ಟು ಉಳಿದೆಲ್ಲಿಯೂ ಹೆಚ್ಚಿನ ಪ್ರಮಾಣದ ಹಣವನ್ನು ಕೂಡಿಟ್ಟರೆ ಅನ್ನು ಸುಲಭವಾಗಿ ಪತ್ತೆ ಹಚ್ಚಲು ಸಹಾಯವಾಗುವ ಸಲುವಾಗಿ.

ಈ ನೋಟಿನಲ್ಲಿ ಅಳವಿಡಿಸಿರುವ ಚಿಪ್ ಎಷ್ಟು ಶಕ್ತಿ ಶಾಲಿಯಾಗಿದೆ ಎಂದರೆ ಒಂದು ಕಡೆಯಲ್ಲಿ ಶೇಖರವಾಗಿರುವ ಅಷ್ಟು ಹಣ ಪ್ರಮಾಣವನ್ನು ಆರ್ ಬಿಐಗೆ ಸ್ಯಾಟಿಲೈಟ್  ಮೂಲಕ ತಿಳಿಸಲಿದೆ. ಯಾವ ಜಾಗದಲ್ಲಿ ಹಣವನ್ನು ಬಚ್ಚಿಟ್ಟಿದ್ದಾರೆ ಎಂಬುದನ್ನು ತಿಳಿಸಲಿದೆ. ಈ ನೋಟುಗಳನ್ನು ಭೂಮಿಯಿಂದ 120 ಅಡಿ ಆಳದಲ್ಲಿ ಅಡಗಿಸಿಟ್ಟರು ಅದನ್ನು ಸ್ಯಾಟಿಲೈಟ್ ಸಹಾಯದಿಂದ ಪತ್ತೆ ಹಚ್ಚ ಬಹುದಾಗಿದೆ. ಇದರಿಂದ ಕಪ್ಪು ಹಣವನ್ನು ಸಂಗ್ರಹಿಸುವವ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸುವುದು ಸುಲಭವಾಗಲಿದೆ.  

click me!