ಅಶ್ಲೀಲ ವಿಡಿಯೋ ತೋರಿಸಿ ಅತ್ಯಾಚಾರ : ಮ್ಯೂಸಿಕ್ ಡೈರೆಕ್ಟರ್ ಅರೆಸ್ಟ್

By Web DeskFirst Published Nov 28, 2018, 11:41 AM IST
Highlights

ಸಂಗೀತ ನಿರ್ದೇಶಕರೋರ್ವರ ವಿರುದ್ಧ ಅತ್ಯಾಚಾರ ಆರೋಪ ಎದುರಾಗಿದ್ದು, ಈ ನಿಟ್ಟಿನಲ್ಲಿ ಇಬ್ಬರನ್ನು ಬಂಧಿಸಲಾಗಿದೆ. 

ಬೆಂಗಳೂರು :  ಸಿನಿಮಾ ಸಂಗೀತ  ನಿರ್ದೇಶಕರೋರ್ವರ ವಿರುದ್ದ ಅತ್ಯಾಚಾರ ಆರೋಪ ಎದುರಾಗಿದೆ.

ಯುವತಿಯೊಂದಿಗೆ ಇರುವ ಅಶ್ಲೀಲ‌ ವಿಡಿಯೋವನ್ನು  ತೋರಿಸಿ ಬ್ಲಾಕ್ ಮೇಲ್ ಮಾಡಿ ಅತ್ಯಾಚಾರ ಎಸಗಿದ್ದು,  ಈ ನಿಟ್ಟಿನಲ್ಲಿ ಸಂಗೀತ ನಿರ್ದೇಶಕ ಕರಣ್ ಮಹಾದೇವ್ ಹಾಗೂ  ಹಾಗೂ ಮಂಜುನಾಥ್ ಎನ್ನುವವರನ್ನು ಬಂಧಿಸಲಾಗಿದೆ. 

ಬಂಧನದ ಬಳಿಕ ಇಬ್ಬರು ಆರೋಪಿಗಳ ಬಳಿ ಇರುವ ಅಶ್ಲೀಲ ವಿಡಿಯೋವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 

ಸಂಗೀತ ಕಲಿಸುವುದಾಗಿ ಹೇಳಿ ಯುವತಿಯೊಂದಿಗೆ ಸ್ನೇಹ ಬೆಳೆಸಿ ಅತ್ಯಾಚಾರ ಎಸಗಿದ್ದಾಗಿ ಯುವತಿ ಆರೋಪ ಮಾಡಿದ್ದಾರೆ. ಯುವತಿಗೆ ವಿವಾಹ ನಿಶ್ಚಯವಾಗಿದ್ದು ಈ ವಿಚಾರ ತಿಳಿದಿದ್ದರೂ ಇಬ್ಬರು ಬೆದರಿಸಿ ಅತ್ಯಾಚಾರ ಎಸಗಿದ್ದರು ಎನ್ನಲಾಗಿದೆ. 

ಫೇಸ್ ಬುಕ್ ಮೂಲಕ ಪರಿಚಯವಾಗಿದ್ದ ಕರಣ್ ನಂತರ ಯುವತಿಯ ಬಳಿ ಸಂಗೀತ ಹೇಳಿಕೊಡುವುದಾಗಿ ಕರೆಸಿಕೊಳ್ಳುತ್ತಿದ್ದರು. ಬಳಿಕ ಆಕೆಯನ್ನು ಬೆದರಿಸಿ  ಅತ್ಯಾಚಾರ ಎಸಗಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ.  

ಸದ್ಯ ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

click me!