ಮುಕೇಶ್‌ ಅಂಬಾನಿ ಈಗ ಏಷ್ಯಾದ ನಂ.1 ಶ್ರೀಮಂತ

By Kannadaprabha NewsFirst Published Jul 14, 2018, 9:45 AM IST
Highlights

ಅಗ್ಗದ ಜಿಯೋ ದೂರಸಂಪರ್ಕ ಸೇವೆ ಮೂಲಕ ಭಾರತೀಯ ಮೊಬೈಲ್‌ ದೂರವಾಣಿ ಕ್ಷೇತ್ರದಲ್ಲಿ ಅಲ್ಲೋಲ- ಕಲ್ಲೋಲ ಸೃಷ್ಟಿಸಿರುವ ರಿಲಯನ್ಸ್‌ ಕಂಪನಿ ಒಡೆಯ ಮುಕೇಶ್‌ ಅಂಬಾನಿ ಈಗ ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿ ಸಂಚಲನ ಮೂಡಿಸಿದ್ದಾರೆ. 

ನವದೆಹಲಿ: ಅಗ್ಗದ ಜಿಯೋ ದೂರಸಂಪರ್ಕ ಸೇವೆ ಮೂಲಕ ಭಾರತೀಯ ಮೊಬೈಲ್‌ ದೂರವಾಣಿ ಕ್ಷೇತ್ರದಲ್ಲಿ ಅಲ್ಲೋಲ- ಕಲ್ಲೋಲ ಸೃಷ್ಟಿಸಿರುವ ರಿಲಯನ್ಸ್‌ ಕಂಪನಿ ಒಡೆಯ ಮುಕೇಶ್‌ ಅಂಬಾನಿ ಈಗ ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿ ಸಂಚಲನ ಮೂಡಿಸಿದ್ದಾರೆ. 

ಏಷ್ಯಾದ ನಂ.1 ಸಿರಿವಂತ ವ್ಯಕ್ತಿ ಎಂಬ ಅಭಿದಾನಕ್ಕೆ ಭಾಜನರಾಗಿದ್ದ ಅಲಿಬಾಬಾ ಸಮೂಹದ ಜಾಕ್‌ ಮಾ ಅವರನ್ನು ಎರಡನೇ ಸ್ಥಾನಕ್ಕೆ ದೂಡಿ ಮುಕೇಶ್‌ ಅವರು ಪ್ರಥಮ ಸ್ಥಾನಕ್ಕೇರಿದ್ದಾರೆ. ಶುಕ್ರವಾರ ಷೇರುಪೇಟೆ ವಹಿವಾಟು ಕೊನೆಗೊಳಿಸಿದಾಗ ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರುಗಳ ಬೆಲೆ ಶೇ.1.6ರಷ್ಟುಏರಿಕೆಯಾಗಿ 1099.8 ರು.ಗೆ ಹೆಚ್ಚಳಗೊಂಡಿದೆ. 

ಇದರಿಂದಾಗಿ ಮುಕೇಶ್‌ ಅವರ ಒಟ್ಟಾರೆ ಸಂಪತ್ತಿನ ಮೌಲ್ಯ 3.03 ಲಕ್ಷ ಕೋಟಿ ರು.ಗೆ ಏರಿಕೆಯಾಗಿದೆ. ಜಾಕ್‌ ಮಾ ಅವರ ಸಂಪತ್ತಿನ ಮೌಲ್ಯ 3.01 ಲಕ್ಷ ಕೋಟಿ ರು. ಆಗಿದ್ದು, ಮುಕೇಶ್‌ಗಿಂತ ಕಡಿಮೆ ಇದೆ. ತನ್ಮೂಲಕ ಮುಕೇಶ್‌ ಅವರು ಏಷ್ಯಾದ ನಂಬರ್‌ 1 ಕುಬೇರರಾಗಿ ಹೊರಹೊಮ್ಮಿದ್ದಾರೆ.

click me!