ಮುಖ್ಯಮಂತ್ರಿಗಳೇ, ಮೆಜೆಸ್ಟಿಕ್ ಮೆಟ್ರೋ ಪ್ರವೇಶ ದ್ವಾರವನ್ನು ಯಾವಾಗ ಉದ್ಘಾಟನೆ ಮಾಡುತ್ತೀರಿ?

Jul 3, 2018, 12:30 PM IST

ಬೆಂಗಳೂರಿನ ಹೃದಯ ಭಾಗ ಮೆಜೆಸ್ಟಿಕ್’ನಲ್ಲಿ ಮೆಟ್ರೋ ಪ್ರವೇಶ ದ್ವಾರ ಕಾಮಗಾರಿ  ಮುಕ್ತಾಯಗೊಂಡಿದೆ. ಆದರೆ ಇನ್ನೂ ಉಪಯೋಗಕ್ಕೆ ಬಾರದೇ ಪ್ರಯಾಣಿಕರು ಪರದಾಡುತ್ತಿದ್ದಾರೆ. ಸಿಎಂ ಕುಮಾರಸ್ವಾಮಿ ಉದ್ಘಾಟನೆಗೆ ಬಾರದೇ ಇನ್ನೂ ಲೋಕಾರ್ಪಣೆಯಾಗಿಲ್ಲ. 2006 ರಲ್ಲಿ ಮೆಟ್ರೋ ಕುಮಾರಸ್ವಾಮಿಯೇ ಗುದ್ದಲಿ ಪೂಜೆ ಮಾಡಿದ್ರು. ಆದರೆ ಉದ್ಘಾಟನೆ ಮಾಡದೇ ಇನ್ನೂ ಸೇವೆ ಆರಂಭವಾಗಿಲ್ಲ. 2 ನಿಮಿಷದ ದಾರಿಗೆ ಪ್ರಯಾಣಿಕರು ಕಿಮೀ ನಡೆಯಬೇಕಾಗಿದೆ. ಮುಖ್ಯಮಂತ್ರಿಗಳೇ ಆದಷ್ಟು ಬೇಗ ಉದ್ಘಾಟನೆ ಮಾಡಿ ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.