ಸ್ನೇಹಿತರನ್ನ ಕರಕೊಂಡು ಮಾಜಿ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪತಿರಾಯ

By Web DeskFirst Published Nov 10, 2018, 10:24 PM IST
Highlights

ಸ್ನೇಹಿತರ ಜೊತೆಗೂಡಿ ಮಾಜಿ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಬಳಿಕ ಪತಿರಾಯ ಮಾಡಿದ್ದೇನು ಗೊತ್ತಾ?

 ರಾಂಚಿ, [ನ.10]: ಪಾಪಿಯೊಬ್ಬ ತನ್ನ ಇಬ್ಬರು ಸ್ನೇಹಿತರ ಜೊತೆ ಸೇರಿ ಮಾಜಿ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಹತ್ಯೆ ಮಾಡಿರುವ ಘಟನೆ ಜಾರ್ಖಂಡ್‌ನ ಜಮ್ತಾರ್ ಜಿಲ್ಲೆಯ ಉದಯಪುರದಲ್ಲಿ ನಡೆದಿದೆ.

ಘಟನೆ ಬಗ್ಗೆ ಮಾಹಿತಿ ಸಿಗ್ತಿದ್ದಂತೆ ಪೊಲೀಸರು ಆರೋಪಿ ಉದಯ್ ನನ್ನು ಬಂಧಿಸಿದ್ದಾರೆ. ಅತ್ಯಾಚಾರವೆಸಗಿದ ಇನ್ನಿಬ್ಬರು ಸ್ನೇಹಿತರ ಹುಡುಕಾಟ ನಡೆಯುತ್ತಿದೆ. 

ಮಹಿಳೆ ಕಾಳಿ ಪೂಜೆ ವೇಳೆ ನಡೆಯುವ ಯಾತ್ರೆ ನೋಡಲು ಹೋಗಿದ್ದಳು ಎನ್ನಲಾಗಿದೆ. ಅಲ್ಲಿಗೆ ಬಂದಿದ್ದ ಆಕೆಯನ್ನು ಮಾಜಿ ಪತಿ ತನ್ನ ಸ್ನೇಹಿತರ ಜೊತೆ ಸೇರಿ ಸಮೀಪದ ತೋಟಕ್ಕೆ ಎತ್ತುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾರೆ.

 ನಂತರ ಖಾಸಗಿ ಅಂಗಕ್ಕೆ ರಾಡ್ ಹಾಕಿದ್ದಾರೆ.  ಆಕೆ ನರಳುವ ಧ್ವನಿ ಕೇಳಿ ಅಲ್ಲಿಗೆ ಬಂದ ಸ್ಥಳೀಯರು ಪೊಲೀಸರಿಗೆ ದೂರು ನೀಡಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. 

ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.

click me!