Petrol-Diesel Will Be Cheaper : ಜಾರ್ಖಂಡ್ ರಾಜ್ಯದಲ್ಲಿ ಪೆಟ್ರೋಲ್ ಬೆಲೆ 25 ರೂಪಾಯಿ ಕಡಿತ, ಆದರೆ ಷರತ್ತುಗಳು ಅನ್ವಯ!

By Suvarna NewsFirst Published Dec 29, 2021, 4:14 PM IST
Highlights

ಹೊಸ ವರ್ಷದಿಂದ ಜಾರ್ಖಂಡ್ ನಲ್ಲಿ ಪೆಟ್ರೋಲ್ ಬೆಲೆಯಲ್ಲಿ 25 ರೂಪಾಯಿ ಇಳಿಕೆ
ರಾಜ್ಯದ ಬಡ ಜನರಿಗೆ ಉಡುಗೊರೆ ನೀಡಿದ ಮುಖ್ಯಮಂತ್ರಿ ಹೇಮಂತ್ ಸೊರೆನ್
ಜನವರಿ 26 ರಿಂದ ಜಾರಿಯಾಗಲಿದೆ ಹೊಸ ಆದೇಶ
 

ರಾಂಚಿ (ಡಿ. 29): ಹೊಸ ವರ್ಷದಿಂದ ಜಾರ್ಖಂಡ್ (Jharkhand ) ರಾಜ್ಯದಲ್ಲಿ ಪೆಟ್ರೋಲ್ (Petrol) ಹಾಗೂ ಡೀಸೆಲ್ (diesel )ಬೆಲೆಯಲ್ಲಿ ಭಾರೀ ಇಳಿಕೆಯನ್ನು ಮಾಡಲಾಗುವ ಘೋಷಣೆಯನ್ನು ಮುಖ್ಯಮಂತ್ರಿ ಹೇಮಂತ್ ಸೊರೆನ್ (Chief Minister Hemant Soren) ಮಾಡಿದ್ದಾರೆ. ಮುಂದಿನ ಜನವರಿ 26 ರಿಂದ ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ 25 ರೂಪಾಯಿ ಕಡಿಮೆಯಾಗಲಿದೆ ಎಂದು ಹೇಳಿದ್ದು, ಆದರೆ ಕಡಿಮೆ ಬೆಲೆಗೆ ಪೆಟ್ರೋಲ್ ಖರೀದಿ ಮಾಡಬೇಕಾದಲ್ಲಿ ಗ್ರಾಹಕರಿಗೂ ಕೂಡ ಒಂದು ಷರತ್ತನ್ನು ವಿಧಿಸಲಾಗಿದೆ. ಹೌದು, 25 ರೂಪಾಯಿ ಕಡಿಮೆ ಬೆಲೆಯ ಪೆಟ್ರೋಲ್ ಎಲ್ಲರಿಗೂ ಸಿಗುವುದಿಲ್ಲ. ಬಿಪಿಎಲ್ ಕಾರ್ಡ್ (BPL Card) ಹೊಂದಿರುವ ವ್ಯಕ್ತಿಗಳಿಗೆ ಮಾತ್ರವೇ ಕಡಿಮೆ ಬೆಲೆಯಲ್ಲಿ ಪೆಟ್ರೋಲ್-ಡೀಸೆಲ್ ಸಿಗಲಿದೆ.
 
ಜಾರ್ಖಂಡ್ ನ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಕಳೆದ ಕೆಲವು ತಿಂಗಳುಗಳಿಂದ ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ಮೇಲಿನ ಮೌಲ್ಯವರ್ಧಿತ ತೆರಿಗೆ (ವ್ಯಾಟ್) (VAT) ಕಡಿಮೆ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಪೆಟ್ರೋಲ್ ಮೇಲಿನ ವ್ಯಾಟ್ ಅನ್ನು ಕನಿಷ್ಠ ಶೇ 5ರಷ್ಟು ಕಡಿಮೆ ಮಾಡುವಂತೆ ಮನವಿ ಸಲ್ಲಿಸಿದ್ದವು. ಪ್ರಸ್ತುತ ಜಾರ್ಖಂಡ್ ನಲ್ಲಿ ಪೆಟ್ರೋಲ್ ಮೇಲಿನ ವ್ಯಾಟ್ ಶೇ. 22 ಇದೆ. ಇದನ್ನು ಕನಿಷ್ಠ 17ಕ್ಕೆ ಇಳಿಸುವಂತೆ ಅಸೋಸಿಯೇಷನ್ ಮನವಿ ಸಲ್ಲಿಸಿದ್ದರೂ ಸರ್ಕಾರ ಈವರೆಗೂ ಅದನ್ನು ಪುರಸ್ಕಾರ ಮಾಡಿರಲಿಲ್ಲ. ಅಸೋಸಿಯೇಷನ್ ಗಳು ಹೀಗೆ ಹೇಳಲು ಕಾರಣವೇನೆಂದರೆ, ಜಾರ್ಖಂಡ್ ನ ತೀರಾ ಪಕ್ಕದ ರಾಜ್ಯಗಳಾದ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ ಹಾಗೂ ಒಡಿಶಾದಲ್ಲಿ ಡೀಸೆಲ್ ಬೆಲೆ ಕಡಿಮೆ ಇದೆ. ಇದರಿಂದಾಗಿ ಜಾರ್ಖಂಡ್ ಮೂಲಕ ಹಾದುಹೋಗುವ ಎಲ್ಲಾ ವಾಹನಗಳು ಪಕ್ಕದ ರಾಜ್ಯಗಳಲ್ಲಿಯೇ ಡೀಸೆಲ್  ಅನ್ನು ಭರ್ತಿ ಮಾಡಿಕೊಳ್ಳುತ್ತವೆ. ಇಲ್ಲವೇ ರಾಜ್ಯವನ್ನು ದಾಟಿದ ಬಳಿಕ ಡೀಸೆಲ್ ಅನ್ನು ತುಂಬಿಸಿಕೊಳ್ಳುತ್ತಿವೆ. ಇದರಿಂದಾಗಿ ರಾಜ್ಯದ ಪೆಟ್ರೋಲ್ ಬಂಕ್ ಗಳ ಮಾಲೀಕರು ನಷ್ಟ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದ್ದರು.

ಈ ಕುರಿತಂತೆ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರಿಗೆ ಪತ್ರ ಬರೆದಿದ್ದು ಮಾತ್ರವಲ್ಲದೇ ಕೇಂದ್ರ ಹಣಕಾಸು ಸಚಿವೆಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇವೆ ಎಂದು ಅಸೋಸಿಯೇಷನ್ ನ ಅಧ್ಯಕ್ಷ ಅಶೋಕ್ ಸಿಂಗ್ ತಿಳಿಸಿದ್ದಾರೆ. ಆದರೆ, ಈವರೆಗೂ ಯಾವುದೇ ಕ್ರಮವನ್ನು ಈ ಕುರಿತಂತೆ ಕೈಗೊಂಡಿಲ್ಲ. ಹಣಕಾಸು ಸಚಿವರನ್ನು ಭೇಟಿಯಾಗಿ ಲಿಖಿತ ಮನವಿಯನ್ನು ಸಲ್ಲಿಸಿದ್ದರೂ ಇವರ ಬೇಡಿಕೆಗೆ ಸ್ಪಂದನೆ ಸಿಕ್ಕಿರಲಿಲ್ಲ. ಜಾರ್ಖಂಡ್ ರಾಜ್ಯದಲ್ಲಿ 1350 ಪೆಟ್ರೋಲ್ ಬಂಕ್ ಗಳಿದ್ದು, ಇದರಿಂದ 2.50 ಲಕ್ಷ ಕುಟುಂಬಗಳ ಜೀವನ ಸಾಗುತ್ತಿದೆ. ಆದರೆ, ರಾಜ್ಯದಲ್ಲಿ ಗರಿಷ್ಠ ವ್ಯಾಟ್ ಇರುವ ಕಾರಣ, ಬಂಕ್ ಗಳಲ್ಲಿ ಹೆಚ್ಚಿನ ವ್ಯಾಪಾರ ಆಗುತ್ತಿಲ್ಲ ಎಂದು ತಿಳಿಸಿದ್ದರು.

Maybach Car: ಮೋದಿ ಬತ್ತಳಿಕೆಗೆ ಹೊಸ ಕಾರು, ಜಗತ್ತಲ್ಲೇ ಇಲ್ವಂತೆ ಇಂಥಾ ಸುರಕ್ಷಿತ ಕಾರು!
ಈಗಾಗಲೇ ತೆರಿಗೆ ಕಡಿಮೆ ಮಾಡಿರುವ ಕೇಂದ್ರ ಸರ್ಕಾರ: ಈ ವರ್ಷದ ಆರಂಭದಿಂದಲೂ ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ನಿರಂತರವಾಗಿ ಏರಿಕೆ ಕಾಣುತ್ತಿದೆ.  ಆದರೆ, ದೀಪಾವಳಿ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್ ಮೇಲಿನ ಸುಂಕವನ್ನು 5 ರೂಪಾಯಿ ಹಾಗೂ ಡೀಸೆಲ್ ಮೇಲಿನ ಸುಂಕವನ್ನು 10 ರೂಪಾಯಿ ಕಡಿಮೆ ಮಾಡಿ ಆದೇಶ ಹೊರಡಿಸಿತ್ತು. ಆ ಮೂಲಕ ಜನರಿಗೆ ಸ್ವಲ್ಪ ನಿರಾಳತೆಯನ್ನು ನೀಡಲಾಗಿತ್ತು. ಕೇಂದ್ರ ಸರ್ಕಾರದ ಈ ನಿರ್ಧಾರದ ಬಳಿಕ ರಾಜ್ಯ ಸರ್ಕಾರಗಳಿಗೂ ಪೆಟ್ರೋಲ್-ಡಿಸೇಲ್ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವಂತೆ ಕೇಳಿಕೊಂಡಿತ್ತು. ಕೆಲವು ರಾಜ್ಯಗಳು ಇದಕ್ಕೆ ಸ್ಪಂದನೆ ಮಾಡಿದ್ದರಿಂದ 15 ರಿಂದ 20 ರೂಪಾಯಿಯವರೆಗೆ ಬೆಲೆ ಇಳಿಕೆಯಾಗಿತ್ತು.

Foxconn Tamil Nadu: ಚೆನ್ನೈನ ಐಫೋನ್ ಕಾರ್ಖಾನೆ ಮೌಲ್ಯಮಾಪನಕ್ಕೆ ಅಧಿಕಾರಿ ನೇಮಿಸಿದ ಆ್ಯಪಲ್‌!
ಕೇಂದ್ರ ಸರ್ಕಾರದ ಈ ನಿರ್ಧಾರದ ಬಳಿಕ, ಎನ್ ಡಿಎ ನೇತೃತ್ವದ ಹಲವು ರಾಜ್ಯ ಸರ್ಕಾರಗಳು ಪೆಟ್ರೋಲ್-ಡೀಸೆಲ್ ಮೇಲಿನ ವ್ಯಾಟ್ ಕಡಿಮೆ ಮಾಡಿತ್ತು. ಬಿಹಾರ, ಉತ್ತರ ಪ್ರದೇಶ, ತ್ರಿಪುರ, ಮಧ್ಯಪ್ರದೇಶ, ಹಿಮಾಚಲ ಪ್ರದೇಶದಲ್ಲಿ ತಕ್ಷಣದಲ್ಲೇ ವ್ಯಾಟ್ ಕಡಿಮೆ ಮಾಡಿದ್ದರೆ, ಕಾಂಗ್ರೆಸ್ ನೇತೃತ್ವದ ರಾಜಸ್ಥಾನ, ಪಂಜಾಬ್ ಹಾಗೂ ಛತ್ತೀಸ್ ಗಢದಲ್ಲಿ ಆ ಬಳಿಕ ಕಡಿಮೆ ಮಾಡಲಾಗಿತ್ತು.

click me!