ಪ್ರಯಾಣಿಕರೇ ಇಲ್ಲೊಮ್ಮೆ ಗಮನಿಸಿ : ರೈಲ್ವೆ ಇಲಾಖೆಯಲ್ಲಿ ಮಹತ್ವದ ಬದಲಾವಣೆ

By Web DeskFirst Published Aug 14, 2018, 3:16 PM IST
Highlights

ಭಾರತೀಯ ರೈಲ್ವೆ ಇಲಾಖೆ ಇದೀಗ ಮಹತ್ವದ ಬದಲಾವಣೆಯೊಂದನ್ನು ಮಾಡಿದೆ. ಉತ್ತರ ವಲಯದ 301 ರೈಲುಗಳ ಆಗಮನ ನಿರ್ಗಮನ ಸಮಯವನ್ನು ಬದಲಾವಣೆ ಮಾಡಲಾಗಿದೆ. 

ನವದೆಹಲಿ :  ಭಾರತೀಯ ರೈಲ್ವೆ ಇಲಾಖೆಯು ರೈಲುಗಳ ಆಗಮನ ನಿರ್ಗಮನ ಸಮಯವನ್ನು  ಸಮಯವನ್ನು ಬದಲಾವಣೆ ಮಾಡುತ್ತಿದೆ. ಈ ಬದಲಾವಣೆಯು ಆಗಸ್ಟ್  15ರಿಂದ ಆಗಲಿದೆ.  ಉತ್ತರ ವಲಯ ರೈಲ್ವೆಯು ಒಟ್ಟು 301 ರೈಲುಗಳ ಸಮಯ ಬದಲಾವಣೆ ಮಾಡುವುದಾಗಿ ಹೇಳಿದೆ. 

159 ರೈಲುಗಳು ಆಗಮಿಸುವ ಸಮಯವನ್ನು ಮುಂಚಿತವಾಗಿ ನೀಡಲಾಗಿದೆ. 58 ರೈಲುಗಳ ಸಮಯವನ್ನು ಮುಂದೂಡಲಾಗಿದೆ. 142 ರೈಲುಗಳ ಸಮಯವನ್ನು ಮುಂದೂಡಿಕೆ ಮಾಡಲಾಗಿದೆ. 

ಈ ಬಗ್ಗೆ ಉತ್ತರ ವಲಯ ರೈಲ್ವೆ ಇಲಾಖೆ ರೈಲುಗಳ ಸಮಯ ಬದಲಾವಣೆ ಮಾಡಿ  ಆದೇಶ ಹೊರಡಿಸಿದೆ. ಅಮೃತಸರ ಎಕ್ಸ್ ಪ್ರೆಸ್ , ಶತಾಬ್ದಿ ಎಕ್ಸ್ ಪ್ರೆಸ್,  ತೇಜಸ್ ಎಕ್ಸ್ ಪ್ರೆಸ್, ಹಮ್ ಸಫರ್ ಎಕ್ಸ್ ಪ್ರೆಸ್  ರೈಲುಗಳು 5 ನಿಮಿಷ ಬೇಗ ಆಗಮಿಸಲಿವೆ. 

ನೀಲಾಚಲ್, ಡೆಹ್ರಾಡೂನ್ - ಅಮೃತಸರ್ ಎಕ್ಸ್ ಪ್ರೆಸ್, ಹಮ್ ಸಫರ್ ಎಕ್ಸ್ ಪ್ರೆಸ್,  ಜನ್ ಶತಾಬ್ದಿ ಎಕ್ಸ್ ಪ್ರೆಸ್ ರೈಲುಗಳು ಸಮಯವನ್ನು ಮುಂದಕ್ಕೆ ಹಾಕಲಾಗಿದೆ. 

ರೈಲುಗಳ ಆಗಮನ ಹಾಗೂ ನಿರ್ಗಮನದ ಸಮಯವನ್ನು 5 ರಿಂದ 2 ಗಂಟೆಗಳಷ್ಟು ಬದಲಾವಣೆ ಮಾಡಲಾಗಿದೆ.

click me!