ಪೈಲೆಟ್ ಬಿಡುಗಡೆಗೆ ಒಪ್ಪಂದವಿಲ್ಲ: ಶೀಘ್ರ ಬಿಡುಗಡೆಗೆ ಭಾರತ ಒತ್ತಾಯ!

By Web DeskFirst Published Feb 28, 2019, 3:12 PM IST
Highlights

ಭಾರತ-ಪಾಕ್ ನಡುವೆ ಬಿಗುವಿನ ವಾತಾವರಣ ನಿರ್ಮಾಣ| ಪಾಕ್ ವಶದಲ್ಲಿರುವ ಭಾರತೀಯ ಪೈಲೆಟ್| ವಿಂಗ್ ಕಮಾಂಡರ್ ಬಿಡುಗಡೆಗಾಗಿ ದೇಶಾದ್ಯಂತ ಪ್ರಾರ್ಥನೆ| ಪೈಲೆಟ್ ಬಿಡುಗಡೆಗಾಗಿ ಯಾವುದೇ ಒಪ್ಪಂದಕ್ಕೆ ಸಿದ್ಧವಿಲ್ಲ ಎಂದ ಭಾರತ| ಪೈಲೆಟ್ ಸುರಕ್ಷಿತ ಬಿಡುಗಡೆಗೆ ಭಾರತದ ತೀವ್ರ ಒತ್ತಾಯ|

ನವದೆಹಲಿ(ಫೆ.28): ಪಾಕಿಸ್ತಾನ ವಶದಲ್ಲಿರುವ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಬಿಡುಗಡೆಗೆ ಭಾರತ ಒತ್ತಾಯಿಸಿದೆ. ಆದರೆ ಈ ಕುರಿತು ಪಾಕಿಸ್ತಾನದೊಂದಿಗೆ ಯಾವುದೇ ಒಪ್ಪಂದಕ್ಕೆ ಭಾರತ ನಿರಾಕರಿಸಿದೆ.

ಈ ಕುರಿತು ಮಾಹಿತಿ ನೀಡಿರುವ ವಿದೇಶಾಂಗ ಸಚಿವಾಲಯ, ಪೈಲೆಟ್ ಬಿಡುಗಡೆಗಾಗಿ ಪಾಕಿಸ್ತಾನದೊಂದಿಗೆ ಯಾವುದೇ ಮಾತುಕತೆಗೆ ಭಾರತ ಸಿದ್ಧವಿಲ್ಲ ಎಂದು ತಿಳಿಸಿದೆ.

Sources: India expects Wing Commander to be returned immediately, there is no question of any deal. If Pakistan thinks they have a card to negotiate with then they are mistaken. India expects the Wing Commander to be treated in a humane manner pic.twitter.com/iTbUfA5mQN

— ANI (@ANI)

ಆದರೆ ವಿಂಗ್ ಕಮಾಂಡರ್ ಅವರನ್ನು  ಸುರಕ್ಷಿತವಾಗಿ ಬಿಡುಗಡೆಗೊಳಿಸುವಂತ ಆಗ್ರಹಿಸಿರುವ ಭಾರತ, ಅಂತಾರಾಷ್ಟ್ರೀಯ ಕಾನೂನಿನ ಪಾಲನೆ ಮಾಡುವುದು ಪಾಕ್ ಕರ್ತವ್ಯ ಎಂದು ಹೇಳಿದೆ.

click me!