ಮೈಸೂರಿನಲ್ಲಿ ಹೊಸ ದಾಳ ಉರುಳಿಸಿದ ಮಾಜಿ ಸಿಎಂ ಸಿದ್ದರಾಮಯ್ಯ..!

By Web DeskFirst Published Nov 15, 2018, 6:52 PM IST
Highlights

ಮೈಸೂರು ಮಹಾನಗರ ಪಾಲಿಕೆ ಮೇಯರ್ ಸ್ಥಾನವನ್ನ ಕಾಂಗ್ರೆಸ್ ಗೆ ಒಲಿಸಿಕೊಳ್ಳಲು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೊಸ ದಾಳ ಉರುಳಿಸಿದ್ದಾರೆ.

ಮೈಸೂರು,(ನ.15): ಮೈಸೂರು ಪಾಲಿಕೆ ಮೇಯರ್ ಹುದ್ದೆಗೆ ಮೈತ್ರಿ ಪಕ್ಷಗಳಾದ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ನಡೆದಿದೆ.

ಮೇಯರ್​​​ ಪಟ್ಟವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಶತಾಯಗತಾವಾಗಿ ಮೇಯರ್ ಪಟ್ಟವನ್ನ ಕಾಂಗ್ರೆಸ್ ಗೆ ಒಲಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.

Latest Videos

ಈ ಸಂಬಂಧ ಪಾಲಿಕೆಯಲ್ಲಿ ತಮ್ಮ ಸ್ಥಾನಗಳನ್ನ ಹೆಚ್ಚಿಸಿಕೊಳ್ಳಲು ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಹೊಸ ದಾಳ ಉರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಪಕ್ಷೇತರ ಅಭ್ಯರ್ಥಿಯಾಗಿ ಜಯಗಳಿಸಿರುವ  ಸಮಿ ಅವರನ್ನ ಮನವೋಲಿಸಿ ಕಾಂಗ್ರೆಸ್ ಗೆ ಸೆಳೆದಿದ್ದು, ಇಂದು [ಗುರುವಾರ] ಸಮಿ ಅವರನ್ನು ಪಕ್ಷಕ್ಕೆ ಅಧಿಕೃತವಾಗಿ ಬರಮಾಡಿಕೊಂಡರು. ಬಳಿಕ ಸಿದ್ದರಾಮಯ್ಯ ಖಾಸಗಿ ಹೋಟೆಲ್​​ನಲ್ಲಿ ಕಾಂಗ್ರೆಸ್​​ ಸದಸ್ಯರ ಸಭೆ ನಡೆಸಿದ್ದು, ಮೇಯರ್​​ ಪಟ್ಟ ಒಲಿಸಿಕೊಳ್ಳಲು ಚರ್ಚೆ ನಡೆಸಿದರು.

ಮಿತ್ರ ಪಕ್ಷಗಳಲ್ಲಿ ಅತಿ ಹೆಚ್ಚು ಸ್ಥಾನಗಳಿಸಿರುವುದು ಕಾಂಗ್ರೆಸ್. ಹೀಗಾಗಿ ಕಾಂಗ್ರೆಸ್​​ ಮೇಯರ್​ ಸ್ಥಾನಕ್ಕಾಗಿ ಡಿಮ್ಯಾಂಡ್​​ ಮಾಡುತ್ತಿದೆ. ಮತ್ತೊಂದೆಡೆ ಜೆಡಿಎಸ್​​ ಕೂಡ ಮೇಯರ್​​ ಸ್ಥಾನ ನಮಗೆ ಬೇಕೆಂದು ಪಟ್ಟು ಹಿಡಿದಿದೆ. ಹೀಗಾಗಿ ಮೇಯರ್​ ಸ್ಥಾನ ಗಿಟ್ಟಿಸಿಕೊಳಲು ಕಾಂಗ್ರೆಸ್​​-ಜೆಡಿಎಸ್​ ನಡುವೆ ಹಗ್ಗಜಗ್ಗಾಟ ಜೋರಾಗಿಯೇ ನಡೆದಿದೆ.

ಇದೇ​​ ನವೆಂಬರ್​​ 17ರಂದು ಮೈಸೂರು ಮಹಾನಗರ ಪಾಲಿಕೆ ಮೇಯರ್​​, ಉಪ ಮೇಯರ್​​ ಉಪ ಚುನಾವಣೆ ನಡೆಯಲಿದ್ದು, ಮೇಯರ್ ಸ್ಥಾನ ಯಾರಿಗೆ ಒಲಿಯಲಿದೆ ಎನ್ನುವುದನ್ನ ಕಾದುನೋಡಬೇಕಿದೆ.
 

click me!