ಯಾವುದೇ ಅಹಿತಕರ ಘಟನೆಗಳಿಗೆ ರಾಜ್ಯ ಸರ್ಕಾರ ಹೊಣೆಯಾದರೂ, ಮಹಿಳೆಯರ ಸುರಕ್ಷತೆಯು ಎಲ್ಲರ ಜವಾಬ್ದಾರಿಯಾಗಿದೆ ಎಂದು ಸ್ವಪನ್ ದೇಬನಾಥ್ ಹೇಳಿದ್ದಾರೆ.
ಕೋಲ್ಕತ್ತಾ (ಸೆ.20): ಪಶ್ಚಿಮ ಬಂಗಾಳದ ಸಚಿವ ಸ್ವಪನ್ ದೇಬನಾಥ್ ಅವರು ‘ರಿಕ್ಲೈಮ್ ದಿ ನೈಟ್’ ಪ್ರತಿಭಟನೆಯ ಸಮಯದಲ್ಲಿ ಹೆಣ್ಣು ಮಕ್ಕಳ ಮೇಲೆ ಹೆಚ್ಚಿನ ನಿಗಾ ಇಡಬೇಕು ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಪ್ರತಿಭಟನೆ ಹೋಗ್ತೀನಿ ಅಂತಾ ಹೇಳಿ ಹೆಣ್ಣು ಮಕ್ಕಳು ಪುರುಷರೊಂದಿಗೆ ಮದ್ಯ ಸೇವಿಸುತ್ತಿರುವುದನ್ನು ನೋಡಿದ್ದೇನೆ ಎಂದು ಹೇಳಿದ್ದಲ್ಲದೆ, ವೈಯಕ್ತಿಕ ಸ್ವಾತಂತ್ರ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಯಾವುದೇ ಅಹಿತಕರ ಘಟನೆಗಳಿಗೆ ಬಂಗಾಳ ಸರ್ಕಾರ ಹೊಣೆಯಾಗಿದ್ದರೂ, ಮಹಿಳೆಯರ ಸುರಕ್ಷತೆಯು ಎಲ್ಲರ ಜವಾಬ್ದಾರಿಯಾಗಿದೆ ಎಂದು ಸ್ವಪನ್ ದೇಬನಾಥ್ ಟೀಕಿಸಿದ್ದಾರೆ. ಆದರೆ, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಸಚಿವರ ಹೇಳಿಕೆಯಿಂದ ದೂರ ಇದ್ದಿರುವುದಾಗಿ ತಿಳಿಸಿದೆ. ಸ್ವಪನ್ ದೇಬನಾಥ್ ಅವರು ಬುಧವಾರ ಪುರ್ಬಾ ಬರ್ಧಮಾನ್ ಜಿಲ್ಲೆಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಪುರ್ಬಸ್ಥಲಿಯಲ್ಲಿ ಇತ್ತೀಚೆಗೆ ನಡೆದ ‘ರಿಕ್ಲೈಮ್ ದಿ ನೈಟ್’ ಆಂದೋಲನದ ಸಂದರ್ಭದಲ್ಲಿ, ಮಹಿಳೆ ಮತ್ತು ಇಬ್ಬರು ಪುರುಷರ ಜೊತೆಗೆ ಹೋಟೆಲ್‌ನಲ್ಲಿ ಬಿಯರ್ ಕುಡಿಯುತ್ತಿರುವುದನ್ನು ನಾನು ನೋಡಿದ್ದೇನೆ ಎಂದು ಹೇಳಿದ್ದಾರೆ.
ಕಳೆದ ತಿಂಗಳು ಕೋಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ಅತ್ಯಾಚಾರ ಮತ್ತು ಹತ್ಯೆಗೀಡಾದ ವೈದ್ಯೆಯ ನ್ಯಾಯಕ್ಕಾಗಿ ಒತ್ತಾಯಿಸಿ ಸೆಪ್ಟೆಂಬರ್ 8 ರ ಮಧ್ಯರಾತ್ರಿ ‘ರಿಕ್ಲೈಮ್ ದಿ ನೈಟ್’ ಅಭಿಯಾನದ ಮೂರನೇ ಆವೃತ್ತಿಯಲ್ಲಿ ಸಾವಿರಾರು ಮಹಿಳೆಯರು ಭಾಗವಹಿಸಿದ್ದರು. ದೇಶವೇ ತಲೆತಗ್ಗಿಸುವಂಥ ಘಟನೆ ನಡೆದು ಒಂದು ತಿಂಗಳಾದ ಹಿನ್ನಲೆಯಲ್ಲಿ ಈ ಕಾರ್ಯಕ್ರಮ ನಡೆದಿತ್ತು.
“ಒಂದು ವೇಳೆ ಮಹಿಳೆಗೆ ಏನಾದರೂ ಅಹಿತಕರ ಘಟನೆ ನಡೆದಿದ್ದರೆ? ನಮ್ಮ ಕಾರ್ಯಕರ್ತರು ಆ ಸಮಯದಲ್ಲಿ ಎಚ್ಚರಿಕೆ ವಹಿಸಿದ್ದರು. ಹಾಗೇನಾದರೂ ಅವರು ಅಲ್ಲಿಲ್ಲದೇ ಇದ್ದಲ್ಲಿ ಏನಾಗುತ್ತಿತ್ತು? ನಾನು ಪೋಷಕರಿಗೆ ಮಾತು ಹೇಳೋದಿಷ್ಟೇ, ನಿಮ್ಮ ಮಗಳು ಹೋಗಿದ್ದು ಪ್ರತಿಭಟನೆಗೆ. ಇದು ಒಳ್ಳೆಯ ವಿಚಾರ. ಆದರೆ, ಅದಾ ಬಳಿಕ ಆಕೆ ಮದ್ಯ ಸೇವನೆ ಮಾಡುತ್ತಿದ್ದಳು. ಆಕೆಯನ್ನು ಮನೆಗೆ ಕರೆದುಕೊಂಡು ಹೋಗುವಂತೆ ನಾವು ನಿಮಗೆ ಹೇಳುತ್ತಿದ್ದೇವೆ. ಅಲ್ಲದೆ, ಪೊಲೀಸರಿಗೂ ಕೂಡ ಆಕೆಯನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವಂತೆ ಸೂಚಿಸಿದ್ದೆವು' ಎಂದು ಸ್ವಪನ್ ದೇಬನಾಥ್ ಹೇಳಿರುವ ಮಾತು ವೈರಲ್ ಆಗಿದೆ.
ಮಧ್ಯರಾತ್ರಿಯ ನಂತರ ಮಹಿಳೆಯರಿಗೆ ಮದ್ಯ ಮಾರಾಟ ಮಾಡದಂತೆ ತಮ್ಮ ಪ್ರದೇಶದ ಹೋಟೆಲ್ ಮಾಲೀಕರಿಗೆ ಮನವಿ ಮಾಡಿರುವುದಾಗಿ ದೇಬನಾಥ್ ಹೇಳಿದ್ದಾರೆ. ಪಾಲಕರು ಜಾಗರೂಕರಾಗಿರಲು ಒತ್ತಾಯಿಸಿದ ಅವರು, “ನಿಮ್ಮ ಮಗಳು ಇತರ ಮಹಿಳೆಯರ ಸುರಕ್ಷತೆಗೆ ಒತ್ತಾಯಿಸಿ ಪ್ರತಿಭಟನೆಗೆ ಹೋಗಿದ್ದಾಳೆ. ಆದರೆ ಮಧ್ಯರಾತ್ರಿಯ ನಂತರ ಅವಳು ಹೊರಗೆ ಏನು ಮಾಡುತ್ತಿದ್ದಾಳೆ ಎಂದು ಮೇಲ್ವಿಚಾರಣೆ ಮಾಡಿ' ಎಂದು ಹೇಳಿದ್ದಾರೆ. ಹಾಗೇನಾದರೂ ಅಹಿತಕರ ಘಟನೆ ಆದಲ್ಲಿ, ಎಲ್ಲರೂ ರಾಜ್ಯ ಸರ್ಕಾರವನ್ನು ದೂರುತ್ತಾರೆ. ಮಹಿಳೆಯ ಸುರಕ್ಷತೆಗೆ ನಾವೆಲ್ಲರೂ ಜವಾಬ್ದಾರರು. ಆದರೆ, ಅವರಿಗೂ ಕೂಡ ಈ ಜವಾಬ್ದಾರಿ ಇರಬೇಕು' ಎಂದು ದೇಬನಾಥ್ ಹೇಳಿದ್ದಾರೆ.
ಬಂಗಾಳ ವೈದ್ಯರ ಮುಷ್ಕರ ಭಾಗಶಃ ಅಂತ್ಯ; ಇಂದಿನಿಂದ ಕರ್ತವ್ಯಕ್ಕೆ ಹಾಜರು
ವಿವಾದವನ್ನು ಗಮನದಲ್ಲಿಟ್ಟುಕೊಂಡು, ಟಿಎಂಸಿಯ ಹಿರಿಯ ನಾಯಕ ಕುನಾಲ್ ಘೋಷ್ ಅವರು ಇಂತಹ ಹೇಳಿಕೆಗಳನ್ನು ಪಕ್ಷವು ಅನುಮೋದಿಸುವುದಿಲ್ಲ ಎಂದು ಹೇಳಿದ್ದಾರೆ. “ನಾವು ಯಾವುದೇ ವ್ಯಕ್ತಿಯ ಹೇಳಿಕೆ ಹೀಗೇ ಇರಬೇಕು ಎಂದು ನಿರ್ದೇಶಿಸಲು ಸಾಧ್ಯವಿಲ್ಲ, ಪುರುಷ ಅಥವಾ ಮಹಿಳೆ, ಮದ್ಯಪಾನ ಮಾಡಿ ಎಲ್ಲಿಗೆ ಹೋಗುತ್ತಾರೆ ಅನ್ನೋದು ನಮಗೆ ಬೇಕಾಗಿಲ್ಲ. ನಾವು ನೈತಿಕ ಪೊಲೀಸ್‌ಗಿರಿ ಮಾಡಿಲ್ಲ,'' ಎಂದಿದ್ದಾರೆ.
ಪೋಕ್ಸೋ ಕಾಯ್ದೆಗೂ, ದೇಶದಲ್ಲಿ ಸದ್ದು ಮಾಡುತ್ತಿರುವ ಅತ್ಯಾಚಾರ ವಿರೋಧಿ ಕಾನೂನಿಗಿರುವ ವ್ಯತ್ಯಾಸಗಳೇನು