ಆರ್ ಆರ್ ನಗರದಲ್ಲಿ ಎಚ್ಐವಿ ಸೋಂಕಿತರ ಸಂಖ್ಯೆ ಹೆಚ್ಚಳವಾಗಲು ಮುನಿರತ್ನ ಕಾರಣ, ಅದಕ್ಕೆ ಆರ್ ಅಶೋಕ್ ಮತ್ತು ಎಚ್ ಡಿಕೆ ಬೆಂಬಲವಿದೆ ಎಂಬ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರಲ್ಲ ಶಾಸಕ ಮುನಿರತ್ನ ಅವರು ಕಾಂಗ್ರೆಸ್ನಲ್ಲಿದ್ದಾಗ ಸತ್ಯ ಹರಿಶ್ಚಂದ್ರರಾ ಎಂದು ಪ್ರಶ್ನಿಸಿದ್ದಾರೆ.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಸೆ.20): ಆರ್ ಆರ್ ನಗರದಲ್ಲಿ ಎಚ್ಐವಿ ಸೋಂಕಿತರ ಸಂಖ್ಯೆ ಹೆಚ್ಚಳವಾಗಲು ಮುನಿರತ್ನ ಕಾರಣ, ಅದಕ್ಕೆ ಆರ್ ಅಶೋಕ್ ಮತ್ತು ಎಚ್ ಡಿಕೆ ಬೆಂಬಲವಿದೆ ಎಂಬ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರಲ್ಲ ಶಾಸಕ ಮುನಿರತ್ನ ಅವರು ಕಾಂಗ್ರೆಸ್ನಲ್ಲಿದ್ದಾಗ ಸತ್ಯ ಹರಿಶ್ಚಂದ್ರರಾ ಎಂದು ಪ್ರಶ್ನಿಸಿದ್ದಾರೆ. ಮುನಿರತ್ನ 30 ವರ್ಷ ಕಾಂಗ್ರೆಸ್ ನಲ್ಲಿ ಇದ್ದರು, ರಾಜಕೀಯ ಜೀವನದ 90 ರಷ್ಟು ಭಾಗ ಕಾಂಗ್ರೆಸ್ ನಲ್ಲಿ ಇದ್ದವರು. ಕಾಂಗ್ರೆಸ್ ನಲ್ಲಿ ಇದ್ದಾಗಲೇ ಗುತ್ತಿಗೆದಾರರನಾಗಿದ್ದು, ಕಾರ್ಪೊರೇಟ್, ಶಾಸಕ ಆಗಿದ್ದು. ನಮ್ಮ ಪಕ್ಷಕ್ಕೆ ಬಂದು ಐದು ವರ್ಷ ಆಗಿರಬಹುದು ಅಷ್ಟೇ. ಆಗ ಮುನಿರತ್ನ ಸತ್ಯ ಹರಿಶ್ಚಂದ್ರ ಆಗಿದ್ದರೇ ಎಂದು ಪ್ರಶ್ನಿಸಿದ್ದಾರೆ.
undefined
ಈಗ ಅವರು ಏಕಾಏಕಿ ದುಷ್ಮನ್ ಆಗಿದ್ದಾರೆಯೇ. ನಾವು ಯಾವುದೇ ಕಾರಣಕ್ಕೂ ತಪ್ಪನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ತಪ್ಪಾಗಿದ್ದರೆ ತಪ್ಪೇ, ಉಪ್ಪು ತಿಂದವನು ನೀರು ಕುಡಿಯಲೇಬೇಕು. ರಾಯಚೂರಿನಲ್ಲಿ ಪಿಎಸ್ಐ ಒಬ್ಬರು ಸತ್ತರು, ಅವರ ಇಡೀ ಕುಟುಂಬ ಬೀದಿಗೆ ಬಂದಿದೆ. ಅಲ್ಲಿನ ಎಂಎಲ್ಎ, ಅವರ ಮಗ 30 ಲಕ್ಷ ಕೇಳಿದ ಅಂತ ಹೇಳಿದರು. 18 ಗಂಟೆಗಳ ಕಾಲ ನಿರಂತರ ಪ್ರತಿಭಟನೆ ಮಾಡಿದರು. ಯಾಕೆ ಅವರ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ. ಒಬ್ಬ ಕೃಷಿ ಅಧಿಕಾರಿ ತಮಗೆ ಲಂಚ ಕೇಳುತ್ತಿದ್ದಾರೆ ಎಂದು ವಿಡಿಯೋ ಮಾಡಿದ್ದರು. ಸಚಿವರ ಮೇಲೆ ಏಕೆ ಕ್ರಮ ಕೈಗೊಳ್ಳಲಿಲ್ಲ. ಕಾನೂನು ರೀತಿ ಕ್ರಮ ಕೈಗೊಂಡಿದ್ದರೆ ನಮ್ಮ ಯಾವುದೇ ತಕರಾರು ಇರಲಿಲ್ಲ.
ಸಿದ್ದರಾಮಯ್ಯ ಸರ್ಕಾರ ಯಾವುದೇ ಕ್ಷೇತ್ರಕ್ಕೆ ಒಂದು ರೂಪಾಯಿ ಅನುದಾನ ನೀಡಿಲ್ಲ: ವಿಜಯೇಂದ್ರ
ಎಫ್ಎಸ್ಎಲ್ ವರದಿ ಬಳಿಕ ಕ್ರಮ ಕೈಗೊಂಡಿದ್ದರೆ ಸಮಸ್ಯೆ ಇರಲಿಲ್ಲ. ಆದರೆ ಒಬ್ಬರಿಗೆ ಒಂದು ಕಾನೂನು ಏಕೆ ಎಂದು ಆರ್ ಅಶೋಕ್ ಪ್ರಶ್ನಿಸಿದರು. ಜಾತಿ ನಿಂದನೆ ಪ್ರಕರಣ ದಾಖಲಾಗುತ್ತಿದ್ದಂತೆ ಮುನಿರತ್ನ ಅವರಿಗೆ ಪಕ್ಷದಿಂದ ನೊಟೀಸ್ ನೀಡಲಾಗಿದೆ. ಆದರೆ ಕಾಂಗ್ರೆಸ್ ಅವರ ಪಕ್ಷದ ಎಷ್ಟು ಜನರ ಮೇಲೆ ಕ್ರಮ ಕೈಗೊಂಡಿದೆ ಹೇಳಲಿ. ದೇಶದಲ್ಲಿ ಒಂದೈವತ್ತು ಜನ ಕಾಂಗ್ರೆಸ್ ನಾಯಕರ ಮೇಲೆ ಸಿಬಿಐ ತನಿಖೆ ಆಗಿದೆ. ಅವರ ಮೇಲೆ ಏನಾದರೂ ಕ್ರಮ ತೆಗೆದುಕೊಂಡಿದ್ದಾರಾ.? ಡಿ.ಕೆ ಶಿವಕುಮಾರ್ ಮೇಲೂ ತನಿಖೆ ಇದೆ, ಕಾಂಗ್ರೆಸ್ ಏನಾದರೂ ಕ್ರಮ ತೆಗೆದುಕೊಂಡಿದೆಯಾ ಎಂದು ಪ್ರಶ್ನಿಸಿದರು.
ಆದರೆ ಬಿಜೆಪಿ ಹಾಗೆ ಅಲ್ಲ, ಎಫ್ ಎಸ್ಎಲ್ ವರದಿಯಲ್ಲಿ ಜಾತಿ ನಿಂದನೆ ಸಾಭೀತಾದರೆ ಶಿಸ್ತು ಕ್ರಮ ಖಚಿತ ಮಡಿಕೇರಿಯಲ್ಲಿ ಆರ್ ಅಶೋಕ್ ಹೇಳಿದರು. 2009 ರಲ್ಲಿ ಎಚ್.ಡಿ ಕುಮಾರಸ್ವಾಮಿ ತಮ್ಮ ಭಾವಮೈದುನನಿಗೆ ಭೂಮಿಯನ್ನು ಡಿನೋಟಿಫಿಕೇಷನ್ ಮಾಡಿದ್ದಾರೆ ಎಂದು ಈಗ ಹೇಳುತ್ತಿರುವ ಕಾಂಗ್ರೆಸ್ನವರು ಇದುವರೆಗೆ ಕಡಲೆಕಾಯಿ ತಿನ್ನುತ್ತಿದ್ದರಾ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸಚಿವ ಎಚ್ ಡಿಕೆ ತಮ್ಮ ಭಾವಮೈದುನನ ಹೆಸರಿಗೆ ಡಿನೋಟಿಫೈ ಮಾಡಿದ್ದಾರೆಂದು ಸಚಿವ ಕೃಷ್ಣೆಬೈರೆಗೌಡ ಹೇಳಿಕೆಗೆ ತಿರುಗೇಟು ನೀಡಿದ ಅಶೋಕ್ ಅವರು ಎರಡು ಬಾರಿ ಕಾಂಗ್ರೆಸ್ ನವರೇ ಎಚ್ ಡಿಕೆಯೊಂದಿಗೆ ಸರ್ಕಾರ ಮಾಡಿದ್ದಾರೆ. ಆವಾಗ ಯಾಕೆ ಈ ಪ್ರಶ್ನೆ ಕೇಳಲಿಲ್ಲ, 2009 ರಲ್ಲಿ ಆಗಿರುವುದು ಎಂದು ನೋಡಿದೆ.
ಚಿರತೆ ಓಡಿಸಲು ಹಾರಿಸಿದ ಗುಂಡು ತಗುಲಿ ನಾಲ್ವರು ರೈತರಿಗೆ ಗಾಯ: ಪ್ರಾಣಾಪಾಯದಿಂದ ಪಾರು
ಅಲ್ಲಿಂದ ಇದುವರೆಗೆ 15 ವರ್ಷ ಕಾಂಗ್ರೆಸ್ ನವರು ಕಡಲೆಕಾಯಿ ತಿನ್ನುತ್ತಿದ್ದರಾ, ತನಿಖೆ ಮಾಡಬಹುದಿತ್ತಲ್ಲವೇ.? ಈ ತಪ್ಪು ಕಂಡು ಹಿಡಿಯುವುದಕ್ಕೆ ಇಷ್ಟು ವರ್ಷ ಬೇಕಾಗಿತ್ತಾ.? ಈ ಸರ್ಕಾರ ಬಂದು 15 ತಿಂಗಳು ಆಗಿದೆ, ಇದುವರೆಗೆ ಯಾಕೆ ಇದನ್ನು ಮುಟ್ಟಲಿಲ್ಲ. ಈಗ ಕಾಂಗ್ರೆಸ್ ಮೇಲೆ ಮುಡಾ, ವಾಲ್ಮೀಕಿ ನಿಗಮದ ಹಗರಣ ಬಂದಿರುವುದರಿಂದ ವಿರೋಧ ಪಕ್ಷಗಳನ್ನು ಮಟ್ಟ ಹಾಕಬೇಕೆಂದು ಇದೆಲ್ಲಾ ಮಾಡುತ್ತಿದ್ದಾರೆ. ಒಂದೊಂದೇ ಕೇಸುಗಳನ್ನು ಹುಡುಕುತ್ತಿದ್ದಾರೆ. ಈಗ ಅವರದೇ ಸರ್ಕಾರ ಇದೆ, ಏನು ಬೇಕಾದರೂ ಕ್ರಮ ತೆಗೆದುಕೊಳ್ಳಲಿ. ಎದುರಿಸುವಂತ ಶಕ್ತಿ ಕುಮಾರಸ್ವಾಮಿ ಅವರಿಗೆ ಇದೆ. ಇಂತಹವನ್ನೆಲ್ಲಾ ಅವರು ಬಹಳ ನೋಡಿದ್ದಾರೆ ಎಂದು ಸಚಿವ ಕೃಷ್ಣೆಬೈರೆಗೌಡ ಅವರಿಗೆ ಆರ್. ಅಶೋಕ್ ತಿರುಗೇಟು ನೀಡಿದರು.