ಡಿ.ಕೆ.ಶಿವಕುಮಾರ್‌ ಆರೋಪ ಸಾಬೀತಾದ್ರೆ 7 ವರ್ಷ ಜೈಲು

By Web DeskFirst Published Sep 18, 2018, 2:27 PM IST
Highlights

ಮೊನ್ನೆ ಅಷ್ಟೇ ಆದಾಯ ತೆರಿಗೆ ಇಲಾಖೆಯಿಂದ ದಾಖಲಾದ ಪ್ರಕರಣಗಳಲ್ಲಿ ಡಿ.ಕೆ.ಶಿವಕುಮಾರ್​ ಜಾಮೀನು ಪಡೆದು ನಿಟ್ಟುಸಿರು ಬಿಟ್ಟಿದ್ದ ಜಲಸಂನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. 

ಬೆಂಗಳೂರು,  (ಸೆ.18): ಮೊನ್ನೆ ಅಷ್ಟೇ ಆದಾಯ ತೆರಿಗೆ ಇಲಾಖೆಯಿಂದ ದಾಖಲಾದ ಪ್ರಕರಣಗಳಲ್ಲಿ ಡಿ.ಕೆ.ಶಿವಕುಮಾರ್​ ಜಾಮೀನು ಪಡೆದು ನಿಟ್ಟುಸಿರು ಬಿಟ್ಟಿದ್ದ ಜಲಸಂನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.  

ಮತ್ತೆ ಬಂಧನದ ಭೀತಿಯಲ್ಲಿ ಡಿ.ಕೆ.ಶಿವಕುಮಾರ್‌

ಅಕ್ರಮ ಆದಾಯ ಗಳಿಕೆ ಆರೋಪದಡಿ ಜಾರಿ ನಿರ್ದೇಶನಾಲಯ ಎಫ್‌ಐಆರ್ ದಾಖಲಿಸಿದೆ. ದೆಹಲಿಯ ಫ್ಲಾಟ್‌ನಲ್ಲಿ ಸಿಕ್ಕಿದ್ದ 8.59 ಕೋಟಿ ರೂಪಾಯಿಗಳ ಪ್ರಕರಣದಲ್ಲಿ ಎಫ್‌ಐಆರ್ ದಾಖಲು ಮಾಡಿದೆ.  ಈ ಮೂಲಕ ಸಚಿವ ಡಿ.ಕೆ.ಶಿವಕುಮಾರ್​ಗೆ ಬಂಧನದ ಭೀತಿ ಎದುರಿಸುತ್ತಿದ್ದಾರೆ.

ಆದಾಯ ತೆರಿಗೆ ಕಾಯ್ದೆ 276(ಸಿ), 277ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು,  ಒಂದು ವೇಳೆ ಆರೋಪ ಸಾಬೀತಾದರೆ 7 ವರ್ಷ ಜೈಲು ಶಿಕ್ಷೆ ಪಕ್ಕಾ. ಇದ್ರಿಂದ ಡಿಕೆಶಿಗೆ ಮುಂದಿನ ದಾರಿ ತಿಳಿಯದೇ ಒತ್ತಡಕ್ಕೆ ಸಿಲುಕಿದ್ದಾರೆ. 

click me!