2 ರಾಜ್ಯದ ಮೇಲೆ ಡ್ರೋನ್ ದಾಳಿ ಅಲರ್ಟ್, ಅಭಿಮಾನಿಗೆ ರಶ್ಮಿಕಾ ಟಿಪ್ಸ್; ಜು.4ರ ಟಾಪ್ 10 ಸುದ್ದಿ!

By Suvarna NewsFirst Published Jul 4, 2021, 4:48 PM IST
Highlights

ಕೇರಳ ಹಾಗೂ ತಮಿಳುನಾಡಿನ ಮೇಲೆ ಡ್ರೋನ್ ದಾಳಿಯಾಗುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಸಿದೆ. ಓವೈಸಿ ನೀಡಿದ ಚಾಲೆಂಜನ್ನು ಸಿಎಂ ಯೋಗಿ ಆದಿತ್ಯನಾಥ್ ಸ್ವೀಕರಿಸಿದ್ದಾರೆ. ಅಭಿಮಾನಿಗೆ ಅಭಿಮಾನಿಗೆ ಕರೆಕ್ಟಾಗಿ ಪ್ರಪೋಸ್ ಮಾಡು ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಮನೆಯಲ್ಲಿದ್ದೇ 1 ಲಕ್ಷ ರೂಪಾಯಿ ಗಳಿಸಿ, 85 ಸೈನಿಕರಿದ್ದ ವಿಮಾನ ಪತನ ಸೇರಿದಂತೆ ಜುಲೈ 4ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ದಕ್ಷಿಣ ಭಾರತದ 2 ರಾಜ್ಯದ ಮೇಲೆ ಡ್ರೋನ್ ದಾಳಿ ಸಾಧ್ಯತೆ; ಎಚ್ಚರಿಕೆ ನೀಡಿದ ಗುಪ್ತಚರ ಇಲಾಖೆ!...

ಜಮ್ಮು ಮತ್ತು ಕಾಶ್ಮೀರದ ಮಿಲಿಟರಿ ಏರ್‌ಬೇಸ್ ಮೇಲೆ ಎರಡು ಡ್ರೋನ್ ದಾಳಿ ಭಾರತವನ್ನೇ ಬೆಚ್ಚಿ ಬೀಳಿಸಿತ್ತು. ಈ ದಾಳಿ ಹಿಂದಿನ ರೂವಾರಿ ಕುರಿತು ತನಿಖೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಗಡಿ ಬಳಿ ಕೆಲ ಡ್ರೋನ್ ಪತ್ತೆಯಾಗಿದ್ದು ಮತ್ತಷ್ಟು ಆತಂಕ ತಂದಿದೆ. ಇದೀಗ ಕೇಂದ್ರ ಗುಪ್ರಚರ ಇಲಾಖೆ ಮತ್ತೊಂದು ವಾರ್ನಿಂಗ್ ನೀಡಿದೆ. ದಕ್ಷಿಣ ಭಾರತದ 2 ರಾಜ್ಯದ ಮೇಲೆ ಡ್ರೋನ್ ದಾಳಿ ಸಾಧ್ಯತೆಯನ್ನು ಬಿಚ್ಚಿಟ್ಟಿದೆ.

ಯೋಗಿಗೆ ಓವೈಸಿ ಚಾಲೆಂಗ್: ಸವಾಲು ಸ್ವೀಕರಿಸ್ತೀನಿ ಎಂದ ಯುಪಿ ಸಿಎಂ!...

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ನಡೆಯಲು ಒಂದು ವರ್ಷ ಇರುವಾಗಲೇ ರಾಜಕೀಯ ಪೈಪೋಟಿ ಆರಂಭವಾಗಿದೆ. ಉತ್ತರ ಪ್ರದೇಶ ಚುನಾವಣೆಯಲ್ಲಿ ಅಸಾದುದ್ದೀನ್ ಐವೈಸಿ ಪಕ್ಷ AIMIM ಸ್ಪರ್ಧಿಸುತ್ತಿರುವುದು ಮತ್ತಷ್ಟು ಬಿಸಿ ಏರುವಂತೆ ಮಾಡಿದೆ.

ಫಿಲಿಪೈನ್ಸ್: 85 ಸೈನಿಕರಿದ್ದ ವಿಮಾನ ಪತನ!...

85 ಮಂದಿ ಸೈನಿಕರಿದ್ದ ಮಿಲಿಟರಿ ವಿಮಾನ ದಕ್ಷಿಣ ಫಿಲಿಪೈನ್ಸ್‌ನಲ್ಲಿ ಅಪಘಾತಕ್ಕೀಡಾಗಿದೆ. ಪತನಗೊಂಡಿರುವ C-130 ಮಿಲಿಟರಿ ವಿಮಾನದಿಂದ ಒಟ್ಟು 40 ಸೈನಿಕರನ್ನು ರಕ್ಷಿಸಲಾಗಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ

ಸಕಲ ಸರ್ಕಾರಿ ಗೌರವಗಳೊಂದಿಗೆ ಹುತಾತ್ಮ ಯೋಧ ಕಾಶಿರಾಯ ಅಂತ್ಯಕ್ರಿಯೆ...

ಪುಲ್ವಾಮದಲ್ಲಿ ಉಗ್ರರ ಜೊತೆ ಹೋರಾಡುವಾಗ ಹುತಾತ್ಮನಾದ ವಿಜಯಪುರದ ಯೋಧ ಕಾಶಿರಾಯರಿಗೆ ಸಕಲ ಸರ್ಕಾರಿ ಗೌರವ ಸಲ್ಲಿಸಿ ಅಂತಿಮ ನಮನ ಸಲ್ಲಿಸಲಾಯಿತು. 

ಅಭಿಮಾನಿಗೆ ಕರೆಕ್ಟಾಗಿ ಪ್ರಪೋಸ್ ಮಾಡು ಎಂದ ರಶ್ಮಿಕಾ ಮಂದಣ್ಣ!...

ಸೋಷಿಯಲ್ ಮೀಡಿಯಾದಲ್ಲಿ ತನ್ನನ್ನು ಮದುವೆಯಾಗಲು ಬೇಡಿಕೆ ಇಟ್ಟ ಅಭಿಮಾನಿಯೊಬ್ಬರಿಗೆ, ಮೊದಲು ಸರಿಯಾಗಿ ಪ್ರಪೋಸ್ ಮಾಡಿ ಅಂತ ರಶ್ಮಿಕಾ ಮಂದಣ್ಣ ಕಾಲೆಳೆದಿದ್ದಾರೆ. 

ಒಂದು ಷರತ್ತು ಪಾಲಿಸಿ, ಮನೆಯಲ್ಲಿದ್ದೇ 1 ಲಕ್ಷ ರೂಪಾಯಿ ಗಳಿಸಿ!...

ಕೊರೋನಾ ಕಾಲದಲ್ಲಿ ಆರ್ಥಿಕ ಸಮಸ್ಯೆ ಎದುರಿಸುತ್ತಿರುವವರಿಗೆ, ಹಣ ಗಳಿಸಲು ಒಂದು ಸರಳ ಹಾಗೂ ಸುಲಭ ಹಾದಿ ಇದೆ. ಇದರಿಂದ ಮನೆಯಲ್ಲಿದ್ದುಕೊಂಡೇ ನೀವು ಒಂದು ಲಕ್ಷ ರೂಪಾಯಿ ಗಳಿಸಬಹುದು.

ಪವನ್ ಕುಮಾರ್ ನಿರ್ದೇಶನದ 'ದ್ವಿತ್ವ' ಚಿತ್ರ ಪೋಸ್ಟರ್ ವಿವಾದ!...

ಕೆಲವು ದಿನಗಳ ಹಿಂದೆ ನಿರ್ದೇಶಕ ಪವನ್ ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಚಿತ್ರ 'ದ್ವಿತ್ವ' ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು. ದ್ವಿತ್ವ ಚಿತ್ರದ ಪೋಸ್ಟರ್‌ ನಕಲು ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಹೆಚ್ಚಿನ ಮಾಹಿತಿ ಈ ವಿಡಿಯೋದಲ್ಲಿದೆ.

ಹನಿಟ್ರ್ಯಾಪ್ ಕೇಸ್ : ವಿಡಿಯೋ ಮೂಲಕ ಬೆತ್ತಲಾದವಳು ಅರೆಸ್ಟ್...

ಹನಿಟ್ರಾಪ್ ಆರೋಪದಲ್ಲಿ  ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಗ್ರಾಮಾಂತರ ಪೊಲೀಸರು ಯುವತಿಯೋರ್ವಳನ್ನು ಇಂದು ಬಂಧಿಸಿದ್ದಾರೆ. 

ರೀಚಾರ್ಜ್ ಮಾಡಿ ನಂತರ ಪಾವತಿಸಿ; ಜಿಯೋದಿಂದ ಎಮರ್ಜೆನ್ಸಿ ಡೇಟಾ ಲೋನ್!...

ಕೋಟ್ಯಧಿಪತಿ ಉದ್ಯಮಿ ಮುಕೇಶ್ ಅಂಬಾನಿ ಅವರ ರಿಲಯನ್ಸ್ ಜಿಯೊ ಕಂಪನಿ ಇದೀಗ ತನ್ನ ಬಳಕೆದಾರರಿಗೆ ತಕ್ಷಣವೇ ರೀಚಾರ್ಜ್ ಮಾಡಿ ನಂತರ ಪಾವತಿ ಮಾಡಬಹುದಾದ 'ಎಮರ್ಜೆನ್ಸಿ ಡೇಟಾ ಲೋನ್' ಸೌಲಭ್ಯ ಪರಿಚಯಿಸುತ್ತಿದೆ. 

click me!