ಭಾರತೀಯ ಪ್ರತಿಭಾನ್ವಿತರು ಅಮೆರಿಕಕ್ಕೆ ಬೇಕು: ಟ್ರಂಪ್

By Web DeskFirst Published Oct 15, 2018, 9:25 AM IST
Highlights

ಭಾರತದಂತಹ ದೇಶಗಳಿಂದ ತಾಂತ್ರಿಕ ವೃತ್ತಿಪರರು, ಪ್ರತಿಭಾನ್ವಿತರು ಅಮೆರಿಕ್ಕೆ ನೆರವಾಗಬಲ್ಲರು. ಅಂಥವರ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.

ವಾಷಿಂಗ್ಟನ್[ಅ.15]: ಅಕ್ರಮ ವಲಸಿಗರನ್ನು ಅಮೆರಿಕದಿಂದ ಗಡೀಪಾರು ಮಾಡುವುದಾಗಿ ಘೋಷಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಮೃಧು ಧೋರಣೆ ತಳೆದಿದ್ದು, ಪ್ರತಿಭಾನ್ವಿತರು ಅಮೆರಿಕಕ್ಕೆ ಬರುವುದನ್ನು ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ. 

ಭಾರತದಂತಹ ದೇಶಗಳಿಂದ ತಾಂತ್ರಿಕ ವೃತ್ತಿಪರರು, ಪ್ರತಿಭಾನ್ವಿತರು ಅಮೆರಿಕ್ಕೆ ನೆರವಾಗಬಲ್ಲರು. ಅಂಥವರ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.

ಶ್ವೇತಭವನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಟ್ರಂಪ್, ದೇಶದ ಗಡಿಯೊಳಕ್ಕೆ ಅಕ್ರಮವಾಗಿ ನುಸುಳುವ ಅಗತ್ಯವಿಲ್ಲ. ಪ್ರತಿಭೆ ಇದ್ದವರು ಕಾನೂನಾತ್ಮಕವಾಗಿಯೇ ದೇಶವನ್ನು ಪ್ರವೇಶಿಸ ಬಹುದು. ಪ್ರತಿಭಾನ್ವಿತರಿಗೆ ಅವಕಾಶವಿದೆ ಎಂದಿದ್ದಾರೆ.

click me!