ದಿನೇಶ್ ಅಮಿನ್ ಮಟ್ಟುಗೆ ಇಲ್ಲಿ ಬದುಕುವ ಹಕ್ಕಿಲ್ಲ : ಪೂಜಾರಿ

By Web DeskFirst Published Aug 14, 2018, 11:14 AM IST
Highlights

ಶಿರಾಮ ಕಾರಂತರು ಸಾಯೋದು ಉತ್ತಮ ಎಂದು ತಮಗೆ ಅನಿಸಿತ್ತು ಎಂದು ಹೇಳಿದ್ದ ದಿನೇಶ್ ಅಮಿನ್ ಮಟ್ಟು ಅವರಿಗೆ ಈ ಸಮಾಜದಲ್ಲಿ ಬದುಕುವ ಹಕ್ಕಿಲ್ಲ ಎಂದು ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಬೆಂಗಳೂರು :  ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಖ್ಯಾತ ಸಾಹಿತಿ ಕೆ.ಶಿವರಾಮ ಕಾರಂತರ ಬಗ್ಗೆ ‘ಅವರು ಸಾಯೋದೇ ಉತ್ತಮ ಎನಿಸಿತ್ತು’ ಎಂದಿರುವ ಹಿರಿಯ ಪತ್ರಕರ್ತ ದಿನೇಶ್‌ ಅಮಿನ್‌ ಮಟ್ಟು ಅವರಿಗೆ ಈ ಸಮಾಜದಲ್ಲಿ ಬದುಕುವ ಹಕ್ಕಿಲ್ಲ ಎಂದು ವಿಧಾನಪರಿಷತ್‌ ವಿರೋಧಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, ‘ಚೋಮನ ದುಡಿ’ಯಂತಹ ಕೃತಿ ರಚಿಸಿದವರು ಶಿವರಾಮ ಕಾರಂತರು. ಈ ದಿನೇಶ್‌ ಅಮಿನ್‌ಮಟ್ಟು ಹುಟ್ಟುವ ಮೊದಲೇ ಶಿವರಾಮ ಕಾರಂತರು ಅನ್ಯ ಜಾತಿಯ ಯುವತಿಯನ್ನು ವಿವಾಹವಾಗಿದ್ದರು.

ಅಂತಹವರು ಈದ್ಗಾ ಮೈದಾನದಲ್ಲಿ ರಾಷ್ಟ್ರದ ತ್ರಿವರ್ಣ ಧ್ವಜ ಹಾರಿಸಿದ್ದಕ್ಕೆ ಬೆಂಬಲ ವ್ಯಕ್ತಪಡಿಸಿದರೆ ಅವರು ಸಾಯೋದು ಉತ್ತಮ ಎಂದು ಹೇಳುತ್ತಾರೆ. ಶಿವರಾಮ ಕಾರಂತರು ಬದುಕಬಾರದು ಎಂದು ಹೇಳುವವರಿಗೆ ಸಮಾಜದಲ್ಲಿ ಬದುಕುವ ಹಕ್ಕಿಲ್ಲ ಎಂದು ಶ್ರೀನಿವಾಸ ಪೂಜಾರಿ ಹೇಳಿದರು.

ಮಟ್ಟು ಅವರ ವಿವಾದಾತ್ಮಕ ಹೇಳಿಕೆ ಏನು?

click me!