ಧರ್ಮಶಾಲಾದಲ್ಲಿ ಮೇಘಸ್ಫೋಟ, ಮಧ್ಯಪ್ರದೇಶದಲ್ಲಿ ಸಿಡಿಲಿನ ಆರ್ಭಟ; ಜು.12ರ ಟಾಪ್ 10 ಸುದ್ದಿ!

By Suvarna NewsFirst Published Jul 12, 2021, 5:18 PM IST
Highlights

ಉತ್ತರ ಭಾರತದಲ್ಲಿ ಮತ್ತೆ ಪ್ರವಾಹ, ಮಧ್ಯಪ್ರದೇಶದಲ್ಲಿ ಸಿಡಿಲು ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಧರ್ಮಶಾಲಾದಲ್ಲಿ ಮೇಘಸ್ಫೋಟಗೊಂಡಿದ್ದರೆ, ರಾಜಸ್ಥಾನ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಸಿಡಿಲು ಆರ್ಭಟಿಸಿದೆ. ದಲೈ ಲಾಮಾ ಹುಟ್ಟು ಹಬ್ಬ ಆಚರಣೆಗೆ ಚೀನಾ ಸೇನೆ ಅಡ್ಡಪಡಿಸಿದ ಘಟನೆ ನಡೆದಿದೆ. ಜೊತೆ ಜೊತೆಯಿಂದ ಹೊರಬಂದ್ರಾ ಅನುಸಿರಿಮನೆ, ಎಲ್ಲಿದ್ದಾರೆ ರಮ್ಯಾ ಸೇರಿದಂತೆ ಜುಲೈ 11ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಭಾರತದ ಹಳ್ಳಿ ಜನರ ಹುಟ್ಟು ಹಬ್ಬ ಆಚರಣೆಗೆ ಅಡ್ಡಿಪಡಿಸಿದ ಚೀನಾ ಸೇನೆ!

ಭಾರತದ ಸೇನೆ ಜೊತೆ ಸದಾ ಕಿರಿಕ್ ಮಾಡುತ್ತಿರುವ ಚೀನಾ ಸೇನೆ ಇದೀಗ ಭಾರತದ ಹಳ್ಳಿ ಜನರೊಂದಿಗೆ ತಕರಾರು ತೆಗೆದಿದೆ.  ಲಡಾಖ್‌ನ ದೆಮ್ಚೆಕ್ ಹಳ್ಳಿ ಜನರು ಜುಲೈ 6 ರಂದು ಟಿಬೆಟ್ ಧರ್ಮಗುರು ದಲೈ ಲಾಮಾ ಹುಟ್ಟು ಹಬ್ಬ ಆಚರಿಸಿದ್ದಾರೆ. ಈ ಸಂಭ್ರಮಾಚರಣೆಗೆ ಚೀನಾ ಸೇನೆ ಅಡ್ಡಿ ಪಡಿಸಿದ ಘಟನೆ ನಡೆದಿದೆ.

ಸಿಡಿಲಿನಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ ಘೋಷಿಸಿದ ಮೋದಿ

ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಕೆಲವು ಭಾಗಗಳಲ್ಲಿ ಸಿಡಿಲಿನಿಂದ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಪರಿಹಾರ ಘೋಷಿಸಿದ್ದಾರೆ.

ಧರ್ಮಶಾಲಾದಲ್ಲಿ ಮೇಘಸ್ಫೋಟ, ನೀರಿನ ರಭಸಕ್ಕೆ ಕೊಚ್ಚಿ ಹೋದ ಕಾರುಗಳು!...

ಉತ್ತರ ಭಾರತದಲ್ಲಿ ಮತ್ತೆ ಪ್ರವಾಹ ಉಂಟಾಗಿದ್ದು, ಅನೇಕ ಜಿಲ್ಲೆಗಳು ಸಂಪೂರ್ಣ ನೀರಿನಿಂದ ಆವೃತವಾಗಿವೆ. ಭಾರತದ ಪ್ರಮುಖ ಪ್ರವಾಸಿ ತಾಣಗಳಿರುವ ಘಟ್ಟ ಪ್ರದೇಶದ ರಾಜ್ಯವಾದ ಹಿಮಾಚಲಪ್ರದೇಶದಲ್ಲಿ  ಕಳೆದ ವಾರದಿಂದ ಭಾರೀ ಮಳೆಯಾಗುತ್ತಿದೆ.

ಪಾಕ್‌ನಲ್ಲಿ 60 ಹಿಂದುಗಳು ಇಸ್ಲಾಂಗೆ ಬಲವಂತ ಮತಾಂತರ!

ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದ ಮಾಲ್ಟಿಎಂಬಲ್ಲಿ 60ಕ್ಕೂ ಹೆಚ್ಚು ಹಿಂದೂಗಳನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಲಾಗಿದೆ ಎಂಬ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ.

90 ನಿಮಿಷ, ಅಂತರಿಕ್ಷಕ್ಕೆ ಹೋಗಿ ಮರಳಿದ ರಿಚರ್ಡ್‌ ಬ್ರಾನ್ಸನ್‌: ಭಾರತದ ಶಿರಿಶಾ ಕೂಡ ಭಾಗಿ!

ಭೂಮಿ, ಸಾಗರದ ಬಳಿಕ ಬಾಹ್ಯಾಕಾಶ ಪ್ರವಾಸೋದ್ಯಮದಲ್ಲಿ ಹೊಸ ಶಕೆಗೆ ಕಾರಣವಾಗಲಿದೆ ಎಂದು ಆಶಿಸಲಾಗಿರುವ ಅಭೂತಪೂರ್ವ ಘಟನೆಯೊಂದಕ್ಕೆ ಇಡೀ ವಿಶ್ವ ಭಾನುವಾರ ಸಾಕ್ಷಿಯಾಗಿದೆ. ವಿಮಾನದ ಸಹಾಯದಿಂದ ಮೇಲೇರಿದ ವಿಮಾನ ರೂಪದ ರಾಕೆಟ್‌ವೊಂದು ಅಂತರಿಕ್ಷದ ಅಂಚಿನವರೆಗೆ ಸಂಚಾರ ಕೈಗೊಳ್ಳುವ ಮೂಲಕ ಹೊಸ ಇತಿಹಾಸವೊಂದು ರಚಿಸಿದೆ

ಅದ್ಭುತ ಕ್ಯಾಚ್‌ ಹಿಡಿದು ವೈರಲ್‌ ಆದ ಹರ್ಲೀನ್ ಡಿಯೋಲ್‌ ಯಾರು?

ಭಾರತದ ಮಹಿಳಾ ಕ್ರಿಕೆಟ್‌ ತಂಡದ ಆಟಗಾರ್ತಿ ಹರ್ಲೀನ್ ಡಿಯೋಲ್ ಸಖತ್‌ ಸುದ್ದಿಯಲ್ಲಿದ್ದಾರೆ.ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟಿ 20 ಸರಣಿಯಲ್ಲಿ ಹರ್ಲೀನ್ ಡಿಯೋಲ್ ಹಿಡಿದ ಅದ್ಭುತ ಕ್ಯಾಚ್ ಈ ದಿನಗಳಲ್ಲಿ ನ್ಯೂಸ್‌ನಲ್ಲಿದೆ. ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್ ಆಮಿ ಜೋನ್ಸ್ ಅವರನ್ನು  ಔಟ್ ಮಾಡಲು ಬೌಂಡರಿಯಲ್ಲಿ ಅದ್ಭುತ ಕ್ಯಾಚ್ ತೆಗೆದುಕೊಳ್ಳುವ ಮೂಲಕ ಅವರು ಎಲ್ಲರ ಗಮನ ಸೆಳೆದರು. ಅವರ ಈ ಅತ್ಯುತ್ತಮ ಕ್ಯಾಚ್ ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತಿದೆ. 

'ಜೊತೆ ಜೊತೆಯಲಿ' ಧಾರಾವಾಹಿಯಿಂದ ಹೊರ ಬಂದ ಅನು ಸಿರಿಮನೆ?...

ಜೀ ಕನ್ನಡ ವಾಹಿನಿನಯಲ್ಲಿ ಪ್ರಸಾರವಾಗುತ್ತಿರುವ 'ಜೊತೆ ಜೊತೆಯಲಿ' ಧಾರಾವಾಹಿಯಿಂದ ನಟಿ ಅನು ಸಿರಿಮನೆ ಅಲಿಯಾಸ್ ಮೇಘಾ ಶೆಟ್ಟಿ ಹೊರ ಬಂದಿದ್ದಾರೆ ಎಂಬ ಗಾಳಿ ಮಾತು ಕೇಳಿ ಬರುತ್ತಿದೆ. ಅನು ಪಾತ್ರಕ್ಕೆ ಯಾರು ಆಯ್ಕೆ ಆಗಿದ್ದಾರೆ ಗೊತ್ತಾ?

ಆ.12ಕ್ಕೆ ಜಿಸಾಟ್ 1 ಸ್ಯಾಟ್‌ಲೈಟ್ ಉಡಾವಣೆ, ಗಡಿಯ ನೈಜ್ಯ ಸ್ಥಿತಿ ತಿಳಿಯಲು ನೆರವು

ಭಾರತೀಯ ಬಾಹ್ಯಾಕಾಶ ಸಂಸೋಧನಾ ಸಂಸ್ಥೆ ಇಸ್ರೋ ಆಗಸ್ಟ್ 12ರಂದು ಜಿಸಾಟ್ -1 ಸೆಟಲೈಟ್‌ ಉಡಾವಣೆಗೆ ಸಿದ್ಧತೆ ಮಾಡಿಕೊಂಡಿದೆ. ವಾಸ್ತವದಲ್ಲಿ ಈ ಉಪಗ್ರಹ ಮಾರ್ಚ್ ತಿಂಗಳ ಹಿಂದೆಯೇ ಉಡಾವಣೆಯಾಗಬೇಕಿತ್ತು. ಆದರೆ, ತಾಂತ್ರಿಕ ಮತ್ತು ಕೋವಿಡ್ ಸಾಂಕ್ರಾಮಿಕ ಕಾರಣಗಳಿಂದಾಗಿ ಮುಂದಕ್ಕೆ ಹೋಗಿತ್ತು.

10 ಕೋಟಿ ಡಾಲರ್‌ಗಾಗಿ Bank of Baroda ಜೊತೆ Ola Electric ಒಪ್ಪಂದ!

Ola Electric ನೂರು ಮಿಲಿಯನ್ ಡಾಲರ್ ಮೊತ್ತ ಒಗ್ಗೂಡಿಸಲು Bank of Baroda ಜೊತೆ ಒಪ್ಪಂದ ಮಾಡಿಕೊಂಡಿದೆ. ಕಂಪನಿ ತನ್ನ ಪ್ರಕಟಣೆಯೊಂದರಲ್ಲಿ ಇದು ಭಾರತದ ಎಲೆಕ್ಟ್ರಿಕ್ ವ್ಹೀಲ್ ಇಂಡಸ್ಟ್ರಿಯಲ್ಲಿ (EV industry) ಅತೀ ದೊಡ್ಡ ಲಾಂಗ್‌ ಟರ್ಮ್ ಡೇಟ್ ಫೈನಾನ್ಸಿಂಗ್ ಎಗ್ರೀಮೆಂಟ್ ಆಗಿದೆ.

ರಾಜಕೀಯ, ಸಿನಿಮಾ ಹಾಗೂ ಮದುವೆ; ಯಾವುದೂ ಇಲ್ಲದೆ ನಟಿ ರಮ್ಯಾ ಆರಾಂ!...

ಸ್ಯಾಂಡಲ್‌ವುಡ್‌ ಮೋಹಕ ತಾರೆ ರಮ್ಯಾ ಇದೀಗ ರಾಜಕೀಯ, ಸಿನಿಮಾ ಹಾಗೂ ಮದುವೆ ಬಗ್ಗೆ ಇನ್ಸ್ಟಾಗ್ರಾಂ ಲೈವ್‌ನಲ್ಲಿ ಮಾತನಾಡಿದ್ದಾರೆ. ಎಲ್ಲಕ್ಕೂ ಗುಡ್‌ ಬೈ ಹೇಳಿ ರಮ್ಯಾ ಏನು ಮಾಡುತ್ತಿದ್ದಾರೆ? ಈ ವಿಡಿಯೋ ನೋಡಿ
 

click me!