ರಾಹುಲ್‌ಗೆ ತಿರುಗುಬಾಣವಾಯ್ತಾ ಸ್ವಿಸ್ ಬ್ಯಾಂಕ್ ವರದಿ?

Jul 25, 2018, 10:28 PM IST

ಬೆಂಗಳೂರು(ಜು.25): ಕಪ್ಪು ಹಣ ಕುರಿತಂತೆ ರಾಜ್ಯಸಭೆಯಲ್ಲಿ ನಿನ್ನೆ ಮಾತನಾಡಿದ್ದ ಸಚಿವ ಪಿಯೂಷ್ ಗೊಯಲ್, 2014ರಿಂದ 2017ರ ಅವಧಿಯಲ್ಲಿ ಭಾರತೀಯರು ಸ್ವಿಸ್ ರಾಷ್ಟ್ರೀಯ ಬ್ಯಾಂಕಿನಲ್ಲಿ ಇಟ್ಟಿರುವ  ಠೇವಣಿ ಮೊತ್ತದಲ್ಲಿ  ಶೇ. 80 ರಷ್ಟು ಇಳಿಕೆಯಾಗಿದೆ ಎಂದು ತಿಳಿಸಿದ್ದರು.

ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ ಕಳೆದ ಸಾಲಿನಲ್ಲಿ  ಭಾರತೀಯರು ಸ್ವೀಸ್ ರಾಷ್ಟ್ರೀಯ ಬ್ಯಾಂಕಿನಲ್ಲಿ ಇಟ್ಟಿರುವ ಠೇವಣಿ ಮೊತ್ತ ಹಾಗೂ ಸಾಲದ ಪ್ರಮಾಣದಲ್ಲಿ ಶೇ. 34. 5 ರಷ್ಟು ಕಡಿಮೆಯಾಗಿದೆ ಗೊಯಲ್ ಮಾಹಿತಿ ನೀಡಿದ್ದರು.

ಸ್ವಿಸ್ ರಾಷ್ಟ್ರೀಯ ಬ್ಯಾಂಕ್ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಮಾಹಿತಿ ಲಭ್ಯವಿದ್ದು, ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಕೈಗೊಂಡ ಕಠಿಣ ನಿರ್ಧಾರಗಳೇ ಈ ಬೆಳವಣಿಗೆಗೆ ಕಾರಣ ಎಂದು ಪಿಯೂಷ್ ರಾಜ್ಯಸಭೆಗೆ ತಿಳಿಸಿದ್ದರು.

ಆದರೆ ಕಾಂಗ್ರೆಸ್ ಈ ಹಿಂದಿನ ಕೆಲವು ಹೇಳಿಕೆಗಳ ಆಧಾರದ ಮೇಲೆ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸ್ವಿಸ್ ಬ್ಯಾಂಕ್ ಗಳಲ್ಲಿ ಭಾರತೀಯರ ಠೇವಣಿ ದುಪ್ಪಟ್ಟಾಗಿದೆ ಎಂದು ಆಧಾರರಹಿತ ಆರೋಪ ಮಾಡಿತ್ತು.

ಈ ಕುರಿತು ನಿಮ್ಮ ಸುವರ್ಣನ್ಯೂಸ್ ನ ಲೆಫ್ಟ್ ರೈಟ್ ಆ್ಯಂಡ್ ಸೆಂಟರ್ ನಲ್ಲಿ ಇಂದು ನಡೆದ ಚರ್ಚೆಯ ಸಂಪೂಣರ್ಣ ವಿವರ ಇಲ್ಲಿದೆ..