ಮಧ್ಯ ಪ್ರದೇಶ ಅಭ್ಯರ್ಥಿಗಳ ಸೋಲಿನ ಅಂತರ... ಜಸ್ಟ್‌ ಮಿಸ್..

By Web DeskFirst Published Dec 12, 2018, 11:57 AM IST
Highlights

ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತವಾಗಿದೆ. ಆದರೆ ಮಧ್ಯ ಪ್ರದೇಶದ ಫಲಿತಾಂಶ ಮಾತ್ರ ತೀವ್ರ ವಿಳಂಬವಾಗಿ ಹೊರಬಂತು. ಹಾಗಾದರೆ ಈ ವಿಳಂಬಕ್ಕೆ ಕಾರಣವೇನು? ಸೋಲು-ಗೆಲುವಿನ ಅಂತರ ಸಹ  ಕನಿಷ್ಠ ಅಂಕೆ-ಸಂಖ್ಯೆಯಿಂದ ಕೊನೆಯಾಯಿತು.

ಬೆಂಗಳೂರು[ಡಿ.12] ಮಧ್ಯಪ್ರದೇಶದ ಫಲಿತಾಂಶ ವಿಳಂಬವಾಗಲು ಮುಖ್ಯ ಕಾರಣ ವಿವಿ ಪ್ಯಾಟ್‌ ಅಂದರೆ ಮತತಾಳೆ ಯಂತ್ರ.  ಆದರೆ ಅಸಲಿಗೆ ಸೋಲು ಮತ್ತು ಗೆಲುವಿನ ನಡುವಿನ ಅಂತರ ದಂಗಾಗಿಸುವಂತೆ ಇತ್ತು.

ಮತದಾರನೊಬ್ಬ ತಾನು ಚಲಾವಣೆ ಮಾಡಿದ ಮತ ತನ್ನ ಅಭ್ಯರ್ಥಿಗೆ ಬಿದ್ದಿದೆಯೇ ಎಂದು ತಾಳೆ ಹಾಕಿ ನೋಡಲು ಇರುವ ಅವಕಾಶವೇ ವಿವಿ ಪ್ಯಾಟ್. ಪ್ರತಿ ಮತ ಯಂತ್ರಕ್ಕೂ ವಿವಿ ಪ್ಯಾಟ್ ಅಳವಡಿಕೆ ಮಾಡಲಾಗಿರುತ್ತದೆ.

ಆಪರೇಶನ್‌ಗೆ ಅವಕಾಶ ಇಲ್ಲ, ‘ಕೈ’ಗೆ ಆನೆ ಬೆಂಬಲ..ಬಲಾಬಲ ಏನು?

ಮತೆಣಿಕೆ ಮುಗಿದ ನಂತರ ವಿವಿ ಪ್ಯಾಟ್ ಪ್ರತಿಯೊಂದಿಗೆ ತಾಳೆ ಮಾಡಲಾಗುತ್ತದೆ. ಇದಕ್ಕೆ ಸಾಕಷ್ಟು ಕಾಲಾವಕಾಶ ಹಿಡಿಯುತ್ತದೆ. ಅಲ್ಲದೇ ಮಧ್ಯಪ್ರದೇಶದ 40 ಕ್ಕೂ ಅಧಿಕ ಕ್ಷೇತ್ರಗಳು ಪೋಟೋ ಫಿನಿಶ್ ಆದವು. ಅಂದರೆ 1,3,52, 56 ಓಟುಗಳಿಂದ ಸೋಲು-ಗೆಲುವು ನಿರ್ಧಾರವಾಗಿತ್ತು. ಕಾಂಗ್ರೆಸ್‌ನ ಬಹುತೇಕ ಅಭ್ಯರ್ಥಿಗಳು 800 ಕ್ಕೂ ಕಡಿಮೆ ಮರಗಳ ಅಂತರದ ಸೋಲು ಕಂಡರು.

 

 

click me!