'ಕೈ' ನಾಯಕರಿಗೆ ಮತ್ತೆ ಕಸಿವಿಸಿ, ರೈನಾಗೆ ಶುರುವಾಯ್ತು ತಲೆಬಿಸಿ; ಸೆ.7ರ ಟಾಪ್ 10 ಸುದ್ದಿ!

By Suvarna News  |  First Published Sep 7, 2020, 4:55 PM IST

ಒಂದು ಹಂತದ ಬಂಡಾಯ ಶಮನ ಮಾಡಿದ ಕಾಂಗ್ರೆಸ್ ಇದೀಗ ಮತ್ತೆ ಕಸಿವಿಸಿ ಎದುರಿಸುವಂತಾಗಿದೆ. ಉತ್ತರ ಪ್ರದೇಶದ ನಾಯಕರು ಮತ್ತೊಂದು ಲೆಟರ್ ಬಾಂಬ್ ಸಿಡಿಸಿದ್ದಾರೆ.  ಇತ್ತ ಪ್ರಧಾನಿ ಮೋದಿ ನೂತನ ಶಿಕ್ಷಣ ನೀತಿ ಮಹತ್ವ ಸಾರಿ ಹೇಳಿದ್ದಾರೆ. ಕೊರೋನಾ ಸೋಂಕಿನಿಂದ ಭಾರತ ಬ್ರೆಜಿಲ್ ಹಿಂದಿಕ್ಕಿ 2ನೇ ಸ್ಥಾನಕ್ಕೇರಿದೆ. ಸ್ಯಾಂಡಲ್‌ವುಡ್ ಡ್ರಗ್ಸ್ ಕುರಿತು ಪೂಜಗಾಂಧಿ ಮಾತು, ಸಿಎಸ್‌ಕೆ ತಂಡ ಸೇರಿಕೊಳ್ಳಲು ಬಯಸಿದಿ ರೈನಾಗೆ ಮತ್ತೆ ಶಾಕ್ ಸೇರಿದಂತೆ ಸೆಪ್ಟೆಂಬರ್ 7ರ ಟಾಪ್ 10 ಸುದ್ದಿ.


NEPಯಿಂದ ಶಿಕ್ಷಣದ ಯಶಸ್ಸು ಅಡಗಿದೆ: ಮಹತ್ವದ ಅಂಶಗಳನ್ನು ಬಿಚ್ಚಿಟ್ಟ ಮೋದಿ...

Latest Videos

undefined

ನೂತನ ರಾಷ್ಟ್ರೀಯ ಶಿಕ್ಷಣ ನೀತಿ(ಎನ್ ಇಪಿ) ಕೇವಲ ಒಂದು ಸರ್ಕಾರದ ನೀತಿಯಲ್ಲ, ಆದರೆ ಇದು ಇಡೀ ದೇಶದ ಶಿಕ್ಷಣ ನೀತಿಯಾಗಿದೆ. ಯಾವುದೇ ಸರ್ಕಾರ ಅಧಿಕಾರದಲ್ಲಿರಲಿ ಈ ಶಿಕ್ಷಣ ನೀತಿಯನ್ನು ಸ್ಫೂರ್ತಿಯಿಂದ ಜಾರಿಗೊಳಿಸಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ತಿಳಿಸಿದ್ದಾರೆ.

ಲೆಟರ್ ‌ಬಾಂಬ್‌ ಹಾಕಿದ ಕೈ ನಾಯಕರಿಗೆ ಬಿಗ್ ಶಾಕ್!...

ನಾಯಕತ್ವದ ವಿರುದ್ಧ 23 ನಾಯಕರು ಬರೆದ ಪತ್ರ ಸಂಚಲನಕ್ಕೆ ಕಾರಣವಾದ ಬೆನ್ನಲ್ಲೇ ಕಾಂಗ್ರೆಸ್ಸಿನಲ್ಲಿ ಮತ್ತೊಂದು ‘ಲೆಟರ್‌ ಬಾಂಬ್‌’ ಸ್ಪೋಟಗೊಂಡಿದೆ. ಇತಿಹಾಸದ ಪುಟ ಸೇರುವ ಮುನ್ನ ಪಕ್ಷವನ್ನು ಉಳಿಸುವಂತೆ ಕಾಂಗ್ರೆಸ್ಸಿನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಉತ್ತರಪ್ರದೇಶದ 9 ಉಚ್ಚಾಟಿತ ನಾಯಕರು ಪತ್ರ ಬರೆದಿದ್ದಾರೆ. 

ಬಲೆಗೆ ಬಿದ್ದ ಬೆತ್ತಲೆ ಕಾಲರ್, ಮೊಬೈಲ್‌ನಲ್ಲಿ 500 ಮಹಿಳೆಯರು!...

500 ಕ್ಕೂ ಅಧಿಕ ಮಹಿಳೆಯರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ 22  ವರ್ಷದ ಅಸಾಮಿಯೊಬ್ಬನ ಬಂಧನವಾಗಿದೆ. ದೆಹಲಿ, ಮುಂಬೈ, ಬೆಂಗಳೂರು, ಕೋಲ್ಕತ್ತಾದಂತಹ ಮಹಾನಗರದ ಮಹಿಳೆಯರಿಗೆ ಚಾಲಾಕಿ ಬ್ಲ್ಯಾಕ್ ಮೇಲ್ ಅಸ್ತ್ರ ಬಳಸುತ್ತಿದ್ದ.

ಹಿಜ್ಬುಲ್‌ ಉಗ್ರನಿಗೆ ಪಾಕ್‌ ಅಧಿಕಾರಿ ಸ್ಥಾನಮಾನ!...

ಭಾರತದಲ್ಲಿ ಹಲವು ಭಯೋತ್ಪಾದಕ ಕೃತ್ಯಗಳನ್ನು ನಡೆಸಿರುವ ಹಿಜ್ಬುಲ್‌ ಮುಜಾಹಿದೀನ್‌ ಉಗ್ರ ಸಂಘಟನೆ ಸಂಸ್ಥಾಪಕ ಸೈಯದ್‌ ಸಲಾಹುದ್ದೀನ್‌ಗೆ ಶಿಕ್ಷೆ ಕೊಡಿಸುವ ಬದಲಿಗೆ ಪಾಕಿಸ್ತಾನ ಆತನಿಗೆ ಅಧಿಕಾರಿಗಳಿಗೆ ನೀಡುವಂತಹ ಸ್ಥಾನಮಾನ ನೀಡಿರುವ ಕಳವಳಕಾರಿ ಸಂಗತಿ ಬೆಳಕಿಗೆ ಬಂದಿದೆ.

ಸೋಂಕಿನಲ್ಲಿ ಬ್ರೆಜಿಲ್ ಹಿಂದಿಕ್ಕಿದ ಭಾರತವೀಗ ವಿಶ್ವದಲ್ಲೇ ನಂಬರ್ 2!...

ಜನಸಂಖ್ಯೆಯಲ್ಲಿ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತ ಇದೀಗ ಒಟ್ಟಾರೆ ಕೊರೋನಾ ಸೋಂಕಿತರ ಪಟ್ಟಿಯಲ್ಲೂ ಎರಡನೇ ಸ್ಥಾನಕ್ಕೆ ಏರಿದೆ. ಭಾನುವಾರ ಭಾರತದಲ್ಲಿ ದಾಖಲೆಯ 92406 ಹೊಸ ಪ್ರಕರಣಗಳು ದೃಢಪಡುವುದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 41.93 ಲಕ್ಷಕ್ಕೆ ಏರಿದೆ. ಈ ಮೂಲಕ 41.23 ಲಕ್ಷ ಸೋಂಕಿತರೊಂದಿಗೆ 2ನೇ ಸ್ಥಾನದಲ್ಲಿದ್ದ ಬ್ರೆಜಿಲ್‌ ಅನ್ನು 3ನೇ ಸ್ಥಾನಕ್ಕೆ ತಳ್ಳಿದೆ. ಇನ್ನು 64.34 ಲಕ್ಷ ಕೇಸುಗಳೊಂದಿಗೆ ಅಮೆರಿಕ ಈಗಲೂ ಮೊದಲ ಸ್ಥಾನದಲ್ಲಿದೆ ಮುಂದುವರೆದಿದೆ.

IPL 2020: ಮತ್ತೆ CSK ತಂಡ ಕೂಡಿಕೊಳ್ಳುವ ಕನವರಿಕೆಯಲ್ಲಿದ್ದ ರೈನಾಗೆ ಬಿಸಿಸಿಐ ಶಾಕ್..?...

ಅನಿರೀಕ್ಷಿತವಾಗಿ ಸಿಎಸ್‌ಕೆ ಕ್ಯಾಂಪ್‌ ತೊರೆದು ಭಾರತಕ್ಕೆ ಮರಳಿರುವ ರೈನಾ ಇದೀಗ ಮತ್ತೆ ಚೆನ್ನೈ ತಂಡ ಕೂಡಿಕೊಳ್ಳುವ ಬಗ್ಗೆ ಆಶಾವಾದ ಹೊಂದಿದ್ದಾರೆ. ಇದರ ಬೆನ್ನಲ್ಲೇ ರೈನಾ ಬಗ್ಗೆ ಬಿಸಿಸಿಐ ಅಧಿಕಾರಿಗಳು ಮಾತನಾಡಿದ್ದಾರೆ. 

ಡ್ರಗ್ಸ್‌ ಬಗ್ಗೆ ಕೇಳಿದ್ದೆ ನಿಜ; ಆದರೆ.. - ಮುಂಗಾರು ಮಳೆ ಹುಡುಗಿ ಪೂಜಾ ಸ್ಪೀಕಿಂಗ್!...

ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿಯವರಂತೆ ಪೂಜಾ ಗಾಂಧಿ ಕೂಡ ಉತ್ತರ ಭಾರತದಿಂದ ಕನ್ನಡಕ್ಕೆ ಬಂದ ನಟಿ. ಆದರೆ ಡ್ರಗ್ಸ್ ವಿಚಾರದಲ್ಲಿ ಮಾತ್ರ ಸಂಬಂಧವೇ ಇರದ ಸಂಭಾವಿತೆಯಾಗಿ ಎಲ್ಲರ ಗಮನ ಸೆಳೆದಿದ್ದಾರೆ. 

ದೇಶದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐನಿಂದ 30000 ನೌಕರರಿಗೆ ವಿಆರ್‌ಎಸ್‌?...

 ವೆಚ್ಚ ಕಡಿತಗೊಳಿಸುವ ಉದ್ದೇಶದಿಂದ ದೇಶದ ಅತಿದೊಡ್ಡ ಬ್ಯಾಂಕ್‌ ಆಗಿರುವ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ತನ್ನ ನೌಕರರಿಗೆ ಸ್ವಯಂ ನಿವೃತ್ತಿ ಯೋಜನೆಯೊಂದನ್ನು ಜಾರಿಗೊಳಿಸಲು ಉದ್ದೇಶಿಸಿದೆ. ಇದರಡಿ, 30190 ನೌಕರರು ವಿಆರ್‌ಎಸ್‌ ಪಡೆಯಲು ಅರ್ಹತೆ ಹೊಂದಿದ್ದಾರೆ.

ಹೊಂಡಾ ಕಾರುಗಳ ಮೇಲೆ 2.5 ಲಕ್ಷ ಡಿಸ್ಕೌಂಟ್; ಸೆಪ್ಟೆಂಬರ್ ಆಫರ್!

ಅನ್‌ಲಾಕ್ ಬಳಿಕ ಭಾರತದಲ್ಲಿ ಕಾರು ಮಾರಾಟದಲ್ಲಿ ಚೇತರಿಕೆ ಕಂಡಿದೆ. ಇದೀಗ ಕೆಲ ಆಟೋಮೇಕರ್ ಸೆಪ್ಟೆಂಬರ್ ತಿಂಗಳ ಆಫರ್ ಘೋಷಿಸಿದೆ. ಇದರಲ್ಲಿ ಹೊಂಡಾ ತನ್ನ ಕಾರುಗಳ ಮೇಲೆ ಬರೋಬ್ಬರಿ 2.5 ಲಕ್ಷ ರೂಪಾಯಿ ಡಿಸ್ಕೌಂಟ್ ಆಫರ್ ಘೋಷಿಸಿದೆ. 

ಗ್ರಾಮ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ: ಅರ್ಜಿ ಹಾಕಿ...

ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು, ಈ ಬಗ್ಗೆ ಇನ್ನಷ್ಟು ಮಾಹಿತಿ ಬಹಿರಂಗವಾಗಿದೆ.

click me!