ಕರ್ನಾಟಕದಲ್ಲಿ ಕಾಂಡೋಮ್ ದಂಧೆ

By Kannadaprabha NewsFirst Published Jul 18, 2018, 8:12 AM IST
Highlights

ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಮಂಡಳಿಯಲ್ಲಿ ಏಡ್ಸ್ ನಿಯಂತ್ರಣದ ಹೆಸರಿನಲ್ಲಿ ಕಳೆದ 20ಕ್ಕೂ ಹೆಚ್ಚು ವರ್ಷಗಳಿಂದ ರಾಜ್ಯಾದ್ಯಂತ ಕಾಂಡೋಮ್ ವಿತರಿಸಲು ತಳಹಂತದ ಲೈಂಗಿಕ ವೃತ್ತಿನಿರತರನ್ನು ನೋಂದಣಿ ಮಾಡಿಕೊಳ್ಳಲಾಗಿದೆ. ಕಾಂಡೋಮ್ ಹಂಚುವ ದಂಧೆಯಿಂದ ಹೊರಬರಲಾರದೆ ಪರಿತಪಿಸುವಂಥ ಸ್ಥಿತಿ ನಿರ್ಮಾಣವಾಗಿದೆ. 

ಬೆಂಗಳೂರು :  ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಮಂಡಳಿಯಲ್ಲಿ ಏಡ್ಸ್ ನಿಯಂತ್ರಣದ ಹೆಸರಿನಲ್ಲಿ ಕಳೆದ 20ಕ್ಕೂ ಹೆಚ್ಚು ವರ್ಷಗಳಿಂದ ರಾಜ್ಯಾದ್ಯಂತ ಕಾಂಡೋಮ್ ವಿತರಿಸಲು 96,878 ಮಂದಿ ತಳಹಂತದ ಲೈಂಗಿಕ ವೃತ್ತಿನಿರತರನ್ನು ನೋಂದಣಿ ಮಾಡಿಕೊಳ್ಳಲಾಗಿದೆ.

ಕಾಂಡೋಮ್ ಹಂಚುವ ದಂಧೆಯಿಂದ ಹೊರಬರಲಾರದೆ ಪರಿತಪಿಸುವಂಥ ಸ್ಥಿತಿ ನಿರ್ಮಾಣವಾಗಿದೆ. ಇದರಲ್ಲಿ ಸಾವಿರಾರು ಅಪ್ರಾಪ್ತರು, ಅಂಗವಿಕಲರು, ಎಚ್‌ಐವಿ ಸೋಂಕಿತರು ನೋಂದಣಿ ಯಾಗಿದ್ದಾರೆ. ಇದು ಮಕ್ಕಳು, ಮಹಿಳೆಯರು, ವಿಶೇಷ ಚೇತನರ ಹಕ್ಕುಗಳ ಉಲ್ಲಂಘನೆಯಾಗಿದೆ. 

ಹಾಗಾಗಿ ಆರೋಗ್ಯ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಮಂಡಳಿ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಯೋಗಕ್ಕೆ ದೂರು ನೀಡಲಾಗಿದೆ.

click me!