‘ಮಹಿಳೆಗೆ ನೋವಾಗಿದ್ರೆ ಆ ಪದ ಹಿಂಪಡೆಯುತ್ತೇನೆ’

By Web DeskFirst Published Nov 19, 2018, 6:52 PM IST
Highlights

ರೈತ ಮಹಿಳೆಗೆ ಬೈಗುಳ ವಿವಾದಕ್ಕೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟನೆ ಕೊಟ್ಟಿದ್ದಾರೆ. ಏನಂತ ಹೇಳಿದ್ದಾರೆ ನೋಡಿ...

ಬೆಂಗಳೂರು, [ನ.19]: ರೈತ ಮಹಿಳೆ ಬಗ್ಗೆ ಅವಹೇಳನಕಾರಿ ಹೇಳಿಕೆ ಬಗ್ಗೆ ಸಿಎಂ ಕುಮಾರಸ್ವಾಮಿ ಸಮರ್ಥಿಸಿಕೊಂಡಿದ್ದಾರೆ. 

ರೈತರ ಪ್ರತಿಭಟನೆ ಕುರಿತು ಸುದ್ದಿಗೋಷ್ಠಿಯಲ್ಲಿ ಸುದೀರ್ಘವಾಗಿ ಮಾತನಾಡಿದ ಕುಮಾರಸ್ವಾಮಿ ಅವರು, ನಾನು ಆ ಹೆಣ್ಣು ಮಗಳಿಗೆ ತಾಯಿ ಅಂತಾ ಪದ ಬಳಸಿದ್ದೇನೆ. ಅಲ್ಲ ತಾಯಿ ಇಷ್ಟು ದಿನ ಎಲ್ಲಿಗೆ ಹೋಗಿದ್ದೆ? ಎಲ್ಲಿ ಮಲಗಿದ್ದೇ ಅಂತಾ ಹೇಳಿದ್ದೆ.  ನಾನು ಕೆಟ್ಟ ಉದ್ದೇಶದಿಂದ, ಅಗೌರವ ಮಾಡಬೇಕು ಎಂಬ ಉದ್ದೇಶದಿಂದ ಮಾತನಾಡಿಲ್ಲ, ಆದರೆ ಇದನ್ನೇ ತಪ್ಪಾಗಿ ಅರ್ಥೈಸಲಾಗಿದೆ ಎಂದರು.

ಅತ್ತ ರೈತರ ಆಕ್ರೋಶ ಕೊತ ಕೊತ ಕುದಿತ್ತಿದ್ರೆ, ಇತ್ತ ದೇವೇಗೌಡ ಕುಟುಂಬದ ಆಕ್ರೋಶ ಕಟ್ಟೆ ಒಡೆಯಿತು..!

ನಾನು ಗ್ರಾಮೀಣ ಪ್ರದೇಶದಿಂದ ಬಂದವನು. ಹೀಗಾಗಿ ಈ ಪದ ನನ್ನ ಬಾಯಿಂದ ಬಂದಿದೆ. ನಾನು ಮಹಿಳೆಯರಿಗೆ ಗೌರವ ನೀಡುತ್ತೇನೆ, ನನ್ನ ಹೇಳಿಕೆಯಲ್ಲಿ ಯಾವ ದುರುದ್ದೇಶವೂ ಇರಲಿಲ್ಲ, ಆದರೆ ಇದನ್ನೇ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. 

ಆದರೆ ಹೆಣ್ಣು ಮಗಳು ರಾಜ್ಯದ ಮುಖ್ಯಮಂತ್ರಿಗೆ ನಾಲಾಯಕ್ ಅನ್ನೋ ಪದ ಬಳಸಿ ಅವಮಾನ ಮಾಡಿದ್ದಾಳೆ ಅಂತಾ ಆರೋಪಿಸಿದರು. ಒಂದು ವೇಳೆ ನನ್ನ ಹೇಳಿಕೆಯಿಂದ ಅವಮಾನ ಆಗಿದೆ ಅಂತಾದ್ರೆ ನಾನು ಬಳಸಿರುವ ಪದವನ್ನ ವಾಪಸ್ ಪಡೆಯುತ್ತೇನೆ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

click me!