1 ನಿಮಿಷ ತಡವಾಗಿ ಬಂದಿದ್ದಕ್ಕೆ ರಾಜೀನಾಮೆ ನೀಡಿದ ಸಂಸದ!

By Web DeskFirst Published Nov 24, 2018, 3:47 PM IST
Highlights

ಸಮಯದ ಮಹತ್ವ ಎಂತದ್ದು ಎಂಬುದಕ್ಕೆ ಇಲ್ಲಿದೆ  ಉದಾಹರಣೆ! ಸದನಕ್ಕೆ 1 ನಿಮಿಷ ತಡವಾಗಿ ಬಂದಿದ್ದಕ್ಕೆ ರಾಜೀನಾಮೆ ಕೊಟ್ಟ ಸಂಸದ! ಇಂಗ್ಲೆಂಡ್‌ನ ಹೌಸ್ ಆಫ್ ಲಾರ್ಡ್ರ್ಡ್ಸ್ ಸದಸ್ಯ ಲಾರ್ಡ್ ಮೈಕಲ್ ಬೇಟ್ಸ್! ತಡವಾಗಿ ಬಂದು ಸದಸನದ ಕ್ಷಮೆ ಕೋರಿ ರಾಜೀನಾಮೆ ಕೊಟ್ಟ ಬೇಟ್ಸ್    

ಲಂಡನ್(ನ.24): ಭಾರತೀಯರಿಗೆ ಸಮಯದ ಮಹತ್ವ ಗೊತ್ತಿಲ್ಲ ಎಂಬುದು ಸಾಮಾನ್ಯ ಆರೋಪ. 5 ನಿಮಿಷದಲ್ಲಿ ಬರ್ತಿನಿ ಅಂದು 50 ನಿಮಿಷ ತಡವಾಗಿ ಬರುವ ಗೆಳೆಯ, ಸಮಯಕ್ಕೆ ಬಾರದ ರಾಜಕಾರಣಿಗಳು, ಸಮಯ ವ್ಯರ್ಥ ಮಾಡುವ ಸರ್ಕಾರಿ ಅಧಿಕಾರಿಗಳು, ಅಷ್ಟೇ ಏಕೆ ಖುದ್ದು ನಾವೇ ಒಂದೊಂದು ಸಲ ನಿಗದಿತ ಸಮಯದ ಕುರಿತು ನಿರ್ಲಕ್ಷ್ಯ ತೋರುತ್ತೇವೆ.

ಆದರೆ ಪಾಶ್ಚಾತ್ಯರು ಇದಕ್ಕೆ ತದ್ವಿರುದ್ಧ. ಕಾರಣ ಅವರು ಸಮಯದ ಮಹತ್ವವನ್ನು ಚೆನ್ನಾಗಿ ಬಲ್ಲರು. ಸಮಯಕ್ಕೆ ಸರಿಯಾಗಿ ನಿಗದಿತ ಕೆಲಸ ಮಾಡುವ ಅವರ ಹವ್ಯಾಸವೇ ಪಾಶ್ಚಾತ್ಯ ಜಗತ್ತನ್ನು ಇಷ್ಟೊಂದು ಅಭಿವೃದ್ಧಿಗೊಳಿಸಿರುವುದು.

ಅದರಂತೆ ನಮ್ಮ ರಾಜಕಾರಣಿಗಳಲ್ಲಿ ಬಹುತೇಕರಿಗೆ ಸಮಯದ ಮಹತ್ವದ ಅರಿವೇ ಇರುವುದಿಲ್ಲ. ಹೇಳುವ ಸಮಯಕ್ಕೆ ಬರದ ಅದೆಷ್ಟೋ ಶಾಸಕರು, ಮಂತ್ರಿಗಳು, ಮುಖ್ಯಮಂತ್ರಿಗಳು, ಅಷ್ಟೇ ಏಕೆ ಪ್ರಧಾನಮಂತ್ರಿಗಳನ್ನೂ ಈ ದೇಶ ಕಂಡಿದೆ. ಪ್ರಧಾನಿ ನರೇಂದ್ರ ಮೋದಿ ಮಾತ್ರ ಇದಕ್ಕೆ ಅಪವಾದ.

ಆದರೆ ಲಂಡನ್‌ನ ಈ ಸಂಸದ  ಮಾತ್ರ ಇದಕ್ಕೆ ಹೊರತು. ಕಾರಣ ಸಭೆಗೆ ಕೇವಲ 1 ನಿಮಿಷ ತಡವಾಗಿ ಬಂದ ಕಾರಣ ಆತ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾನೆ.

ಹೌದು, ಇಂಗ್ಲೆಂಡ್‌ನ ಹೌಸ್ ಆಫ್ ಲಾರ್ಡ್ರ್ಡ್ಸ್ ಸದಸ್ಯ ಲಾರ್ಡ್ ಮೈಕಲ್ ಬೇಟ್ಸ್,  ಸದನಕ್ಕೆ ಕೇವಲ 1 ನಿಮಿಷ ತಡವಾಗಿ ಬಂದರು. ಬೇಟ್ಸ್ ಬರುವ ಹೊತ್ತಿಗಾಗಲೇ ಸಭೆ ಶುರುವಾಗಿತ್ತು. 

ಇದರಿಂದ ಬೇಸರಗೊಂಡ ಮೈಕಲ್ ಕರ್ತವ್ಯ ನಿರ್ಲಕ್ಷ್ಯ ತೋರಿದ್ದಕ್ಕೆ ಕ್ಷಮೆ ಕೋರಿ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಸಲಿಗೆ ಬೇಟ್ಸ್ ಬರುವುದಕ್ಕೂ ಮೊದಲೆ ಅವರ ಖಾತೆಗೆ ಸಂಬಂಧಿಸಿದಂತೆ ಮಹಿಳೆಯೊಬ್ಬರು ಪ್ರಶ್ನೆ ಕೇಳಿದ್ದರು. ಆದರೆ ಇದಕ್ಕೆ ಉತ್ತರಿಸಬೇಕಾದ ವೇಟ್ಸ್ ಸಭೆಯಲ್ಲಿ ಇರದ ಕಾರಣ ಮಹಿಳೆ ಬೇಸರಗೊಂಡಿದ್ದರು.

ಅಷ್ಟರಲ್ಲಾಗಲೇ ಸದನಕ್ಕೆ ಕಾಲಿಟ್ಟ ಮೈಕಲ್ ಬೇಟ್ಸ್, ಮಹಿಳೆಯ ಪ್ರಶ್ನೆಗೆ ಉತ್ತರಿಸಿ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
 

click me!