ದೇಶಭ್ರಷ್ಟ ಟ್ಯಾಗ್ ಫಿಕ್ಸ್: ಮಲ್ಯ ಅರ್ಜಿ ತಿರಸ್ಕರಿಸಿದ ನ್ಯಾಯಾಲಯ!

By Web DeskFirst Published Nov 22, 2018, 5:06 PM IST
Highlights

ಬಗೋಡಾ ವಿಜಯ್ ಮಲ್ಯಗೆ ಕಾನೂನಾತ್ಮಕ ಹಿನ್ನಡೆ! ದೇಶಭ್ರಷ್ಠ ಹಾಗೂ ಆರ್ಥಿಕ ಅಪರಾಧಿ ಘೋಷಣೆಗೆ ಅಡ್ಡಿಯಿಲ್ಲ! ಇಡಿ ಅರ್ಜಿಗೆ ತಡೆ ಕೋಡಿ ಅರ್ಜಿ ಸಲ್ಲಿಸಿದ್ದ ವಿಜಯ್ ಮಲ್ಯ! ವಿಜಯ್ ಮಲ್ಯ ಅರ್ಜಿ ತಿರಸ್ಕರಿಸಿದ ಬಾಂಬೆ ಹೈಕೋರ್ಟ್

ಮುಂಬೈ(ನ.22): ಸಾವಿರಾರು ಕೋಟಿ ಸಾಲ ಮಾಡಿ ದೇಶ ಬಿಟ್ಟು ಪಲಾಯನಗೈದ ಮದ್ಯದ ದೊರೆ ವಿಜಯ್ ಮಲ್ಯಗೆ ಮತ್ತೊಂದು ಕಾನೂನಾತ್ಮಕ ಹಿನ್ನಡೆಯಾಗಿದೆ. 

ತನ್ನನ್ನು ದೇಶಭ್ರಷ್ಠ ಹಾಗೂ ಆರ್ಥಿಕ ಅಪರಾಧಿ ಎಂದು ಸಾರುವುದಕ್ಕೆ ಕೋರಿ ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿದ ಅರ್ಜಿಗೆ ತಡೆ ನೀಡುವಂತೆ ಮಲ್ಯ ಸಲ್ಲಿಸಿದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿದೆ.

ಸಾಲ ಮರುಪಾವತಿಸದೆ ದೇಶ ತೊರೆದಿರುವ ವಿಜಯ್ ಮಲ್ಯ ಅವರನ್ನು ದೇಶಭ್ರಷ್ಠ ಹಾಗೂ ಆರ್ಥಿಕ ಅಪರಾಧಿ ಎಂದು ಸಾರುವಂತೆ ಇಡಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು. ಅಲ್ಲದೆ ಮಲ್ಯ ಒಡೆತನದ 12.5 ಸಾವಿರ ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ನೀಡಬೇಕೆಂದು ಅದು ನ್ಯಾಯಾಲಯಕ್ಕೆ ಕೇಳಿತ್ತು.

‘‘ನಾನು ದೇಶಭ್ರಷ್ಠ ಆರ್ಥಿಕ ಅಪರಾಧಿಯಲ್ಲ, ಅಕ್ರಮ ಹಣ ವರ್ಗಾವಣೆಯಲ್ಲಿ ನಾನು ಯಾವ ಪಾತ್ರ ವಹಿಸಲಿಲ್ಲ’’ ಎಂದು ಮಲ್ಯ ಕಳೆದ ಸೆಪ್ಟೆಂಬರ್ ನಲ್ಲಿ ಕೋರ್ಟ್ ಗೆ ಅರಿಕೆ ಮಾಡಿಕೊಂಡಿದ್ದರು.

ದೇಶದಲ್ಲಿ ದೇಶಭ್ರಷ್ಠ ಆರ್ಥಿಕ ಅಪರಾಧ ನಿಯಂತ್ರಣ ವಿಧೇಯಕ 23 ಏಪ್ರಿಲ್ 2018ರಂದು ಜಾರಿಗೆ ಬಂದಿದ್ದು, ಈ ವಿಧೇಯಕದಡಿ ಇದೇ ಮೊದಲ ಬಾರಿಗೆ ಆಸ್ತಿ ಮುಟ್ಟುಗೋಲಿಗಾಗಿ ಅರ್ಜಿ ಸಲ್ಲಿಕೆಯಾಗಿದೆ.

ಕಿಂಗ್ ಫಿಶರ್ ಏರ್ ಲೈನ್ಸ್ ಮಾಲೀಕರಾಗಿದ್ದ ವಿಜಯ್ ಮಲ್ಯ ಅವರ ವಿರುದ್ಧ ನವೆಂಬರ್ 19, 2017ರಂದು ಜಾಮೀನು ರಹಿತ ಬಂಧನದ ವಾರಂಟ್ ಹೊರಡಿಸಲಾಗಿತ್ತು.

click me!