ರಾಜಧಾನಿಯ ರಸ್ತೆಯಲ್ಲಿ ಅಪಘಾತಗಳ ಸಂಖ್ಯೆ ಇಳಿಮುಖ

By Suvarna Web DeskFirst Published Jan 12, 2018, 10:28 AM IST
Highlights

ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಅಪಘಾತಕ್ಕೆ ಬಲಿ ಯಾಗುವವರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆ ಕಂಡಿದೆ. ಸಂಚಾರ ಪೊಲೀಸರ ಕಟ್ಟುನಿಟ್ಟಿನ ಕ್ರಮ, ಸಾವಿನ ರಹದಾರಿಗಳಾಗಿದ್ದ ಹೆದ್ದಾರಿಗಳಲ್ಲಿ ಪಾದಚಾರಿಗಳ ಓಡಾಡಕ್ಕೆ ಸೂಕ್ತ ವ್ಯವಸ್ಥೆ, ವೇಗಮಿತಿ ನಿಯಂತ್ರಣಕ್ಕೆ ಕಡಿವಾಣದಂತಹ  ರಣಗಳಿಂದ ಸಾವಿನ ಸಂಖ್ಯೆಯಲ್ಲಿ ಕಡಿಮೆಯಾಗಿದೆ.

ಬೆಂಗಳೂರು (12): ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಅಪಘಾತಕ್ಕೆ ಬಲಿ ಯಾಗುವವರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆ ಕಂಡಿದೆ. ಸಂಚಾರ ಪೊಲೀಸರ ಕಟ್ಟುನಿಟ್ಟಿನ ಕ್ರಮ, ಸಾವಿನ ರಹದಾರಿಗಳಾಗಿದ್ದ ಹೆದ್ದಾರಿಗಳಲ್ಲಿ ಪಾದಚಾರಿಗಳ ಓಡಾಡಕ್ಕೆ ಸೂಕ್ತ ವ್ಯವಸ್ಥೆ, ವೇಗಮಿತಿ ನಿಯಂತ್ರಣಕ್ಕೆ ಕಡಿವಾಣದಂತಹ  ರಣಗಳಿಂದ ಸಾವಿನ ಸಂಖ್ಯೆಯಲ್ಲಿ ಕಡಿಮೆಯಾಗಿದೆ.

2017ರಲ್ಲಿ 5065 ಅಪಘಾತ ಪ್ರಕರಣಗಳು ದಾಖಲಾಗಿದ್ದು, 641 ಜನ ಮೃತಪಟ್ಟು, 4,251 ಜನ ಗಾಯಗೊಂಡಿದ್ದಾರೆ. 2016 ರಲ್ಲಿ ಒಟ್ಟು 5333 ಪ್ರಕರಣಗಳಲ್ಲಿ 793 ಮಂದಿ ಅಪಘಾತಕ್ಕೆ ಬಲಿಯಾಗಿದ್ದರು. ಕಳೆದ 10 ವರ್ಷಕ್ಕೆ ಹೋಲಿಸಿದರೆ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಭಾರೀ ಇಳಿಕೆ ಕಂಡಿದೆ.

ಇನ್ನು ಯಲಹಂಕ, ಎಲೆಕ್ಟ್ರಾನಿಕ್ ಸಿಟಿ, ಹೆಬ್ಬಾಳ, ದೇವಹಳ್ಳಿ, ಚಿಕ್ಕಜಾಲ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಸವಾರರಿಗೆ ಜವರಾಯನ ರಸ್ತೆಗಳಾಗಿದ್ದ ರಾಜ್ಯ ಹೆದ್ದಾರಿಗಳಲ್ಲಿ ಅಪಘಾತ ಸಂಖ್ಯೆ ತುಸು ಕಡಿಮೆಯಾಗಿದೆ. ಬಳ್ಳಾರಿ ರಸ್ತೆ ಹಾದು ಹೋಗುವ ಯಲಹಂಕ ಠಾಣಾ ವ್ಯಾಪ್ತಿಯಲ್ಲಿ ಗಂಟೆಗೆ ಸಾವಿರರು ವಾಹನಗಳು ಓಡಾಡುತ್ತವೆ. ಈ ಮಾರ್ಗದಲ್ಲಿ ಪ್ರತಿ ವರ್ಷ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿದ್ದವು.

2016 ರಲ್ಲಿ ಈ ರಸ್ತೆಯಲ್ಲಿ 59 ಮಂದಿ ಮೃತಪಟ್ಟಿದ್ದರು. ಸಂಚಾರ ಪೊಲೀಸರ ಬಿಗಿ ಕ್ರಮದಿಂದಾಗಿ 2017 ರಲ್ಲಿ ಸಾವಿನ ಸಂಖ್ಯೆ 39 ಕ್ಕೆ ಇಳಿದಿದೆ. ಈ ಪ್ರಮಾಣ 2 ವರ್ಷಕ್ಕೆ ಹೋಲಿಸಿದರೆ ಶೇ.34 ರಷ್ಟು ಕಡಿಮೆಯಾಗಿದೆ. ಅದರಂತೆ ಚಿಕ್ಕಜಾಲದಲ್ಲಿ 2016 ರಲ್ಲಿ 40 ಮಂದಿ ಮೃತಪಟ್ಟಿದ್ದರೆ, 2017 ರಲ್ಲಿ 25  ಮಂದಿ ಮೃತಪಟ್ಟಿ ದ್ದಾರೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪ ರ್ಕಿಸುವ ದೇವನಹಳ್ಳಿ ರಸ್ತೆಯಲ್ಲಿ 2016 ರಲ್ಲಿ 39 ಸಾವನ್ನಪ್ಪಿದ್ದರೆ, 2017ರಲ್ಲಿ 24 ಮಂದಿ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದರು.

ಅಡ್ಡಾದಿಡ್ಡಿ ಓಡಾಟಕ್ಕೆ ಬ್ರೇಕ್: ಎಲ್ಲೆಂದರಲ್ಲಿ ರಸ್ತೆ ಗಳಲ್ಲಿ ಸವಾರರು ತಿರುವು ತೆಗೆದುಕೊಳ್ಳುತ್ತಿದ್ದರು. ಪಾದಚಾರಿಗಳು ಎಲ್ಲೆಂದರಲ್ಲಿ ರಸ್ತೆ ದಾಟಲು ಮುಂದಾಗುತ್ತಿದ್ದರು. ಹೀಗಾಗಿ ರಾತ್ರಿ ವೇಳೆ ಹೆದ್ದಾರಿಗಳಲ್ಲಿ ವೇಗವಾಗಿ ಬರುವ ವಾಹನಗಳು ಪಾದಚಾರಿಗಳ ಮೇಲೆ ಹರಿದು ಅಪಘಾತಗಳು ಸಂಭವಿಸುತ್ತಿದ್ದವು.

ಇಂತಹ ಪಾದಚಾರಿ ಮಾರ್ಗಗಳನ್ನು ಮುಚ್ಚಲಾಗಿದೆ. ಇನ್ನು ವೇಗಮಿತಿ ನಿಯಂತ್ರಣಕ್ಕೆ ಬೇಕ್ರ್ ಹಾಕಲಾಗಿದ್ದು, ‘ಇಂಟರ್ ಸೆಪ್ಟರ್’ ಮೂಲಕ ವೇಗವಾಗಿ ಬರುವ ವಾಹನಗಳನ್ನು ತಡೆದು ದಂಡ ವಿಧಿಸಲಾಗುತ್ತಿದೆ. ಯಾವ್ಯಾವ ಠಾಣಾ ವ್ಯಾಪ್ತಿಗಳಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ ಎಂಬ ಬಗ್ಗೆ ಮಾಹಿತಿ ಪಡೆದು, ಅಲ್ಲಿನ ಸಮಸ್ಯೆ ಬಗ್ಗೆ ಅಧ್ಯಯನ ನಡೆಸಿ ಅಂತಹ ಸೂಕ್ಷ್ಮ ಪ್ರದೇಶದಲ್ಲಿ ಕ್ರಮಕೈಗೊಳ್ಳಲಾಗಿದೆ. ಹೀಗಾಗಿ ಅಪಘಾತ ಪ್ರಕರಣಗಳಲ್ಲಿ ಇಳಿಕೆ ಕಂಡಿದೆ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಆರ್.ಹಿತೇಂದ್ರ ‘ಕನ್ನಡಪ್ರಭ’ಕ್ಕೆ ಹೇಳಿ ಪಡಿಸಿ ಉಳಿದ ಸಿಬ್ಬಂದಿ ಸಂಚಾರ ನಿರ್ವಹಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿರುತ್ತಾರೆ. ಈ ಹಿಂದೆ ಯೇ ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಅದರಂತೆ ಸಿಬ್ಬಂದಿ ರಸ್ತೆಯಲ್ಲಿ ವಾಹನ ದಟ್ಟಣೆ ನಿವಾರಿಸುತ್ತಿದ್ದಾರೆ. ಸಂಚಾರ ನಿಯಮ ಉಲ್ಲಂಘಿ ಸಂಚಾರಿಸುವ ವಾಹನಗಳನ್ನು ತಡೆದು ದಂಡ ವಿಧಿಸಲಾಗುತ್ತಿದೆ. ಅನಾವಶ್ಯಕ ತಿರುವು, ಸಣ್ಣಪುಟ್ಟ ಜಂಕ್ಷನ್‌ಗಳಲ್ಲಿ ಸಿಗ್ನಲ್ ವ್ಯವಸ್ಥೆ ಕಲ್ಪಿಸಲಾಗಿದೆ. ಪತ್ರಿಕೆಗಳಲ್ಲಿ ಅಪಘಾತದ ಬಗ್ಗೆ ಜಾಹೀರಾತು ನೀಡುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಈ ಎಲ್ಲಾ ಅಂಶಗಳು ಅಪಘಾತ ಸಂಖ್ಯೆ ಕಡಿಮೆ ಯಾಗಲು ಕಾರಣವಾಗಿದೆ ಎಂದು ತಿಳಿಸಿದರು.

click me!