ಅನಂತ್‌ಕುಮಾರ್‌ ಕೊಟ್ಟ ಆ 5 ಸಾವಿರ ರೂಪಾಯಿ, ಡಿಕೆಶಿ ಹೇಳಿದ ಕತೆ

By Web DeskFirst Published Dec 10, 2018, 4:09 PM IST
Highlights

ಬೆಳಗಾವಿ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಅಗಲಿದ ನಾಯಕರಿಗೆ ಸಂತಾಪ ಸೂಚಿಸಲಾಗಿದೆ. ಸಂತಾಪ ಸೂಚನಾ ನಿರ್ಣಯ ಕುರಿತು ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್ ಮಾತನಾಡಿದರು.

ಬೆಳಗಾವಿ[ಡಿ.10]  ಅಗಲಿದ ಕೇಂದ್ರ ಸಚಿವ ಅನಂತ್‌ಕುಮಾರ್‌ ಅವರನ್ನು  ಜಲಸಂಪನ್ಮೂಲ ಸಚಿವ ಡಿಕೆಶಿ ಬೆಳಗಾವಿ ಅಧಿವೇಶನದಲ್ಲಿ ನೆನಪಿಸಿಕೊಂಡರು. 1985 ರ ಚುನಾವಣೆಗೆ ನಾನು ಸ್ಪರ್ಧಿಸಿದಾಗ ಎಬಿವಿಪಿ ಲೀಡರ್ ಆಗಿದ್ದ ಅನಂತಕುಮಾರ್ 5000 ರೂ. ಸಹಾಯ ಮಾಡಿದ್ದರು ಎಂದು ತಾವು ಮೊದಲ ಸಾರಿ ಚುನಾವಣೆ ಎದುರಿಸಿದಾಗ ಅನಂತ್‌ ಕುಮಾರ್ ಮಾಡಿದ ಸಹಾಯ ನೆನಪಿಸಿಕೊಂಡರು.

ಮೆಟ್ರೋ ರೈಲು ಯೋಜನೆ ಬೆಂಗಳೂರಿಗೆ ತರಲು ಅನಂತಕುಮಾರ್‌ ಮತ್ತು ವಾಜಪೇಯಿ ಅವರ ಪ್ರಯತ್ನ ನೆನೆಯಲೇಬೇಕು. ಬೆಂಗಳೂರು ವಿಮಾನನಿಲ್ದಾಣ ಶಂಕುಸ್ಥಾಪನೆ ಮಾಡಲು ಬಂದಿದ್ದ ವಾಜಪೇಯಿ ಬೆಂಗಳೂರನ್ನು ಹೊಗಳಿ ಮಾತಾಡಿದ್ದು ನಮಗೆ ಖುಷಿ ತಂದಿತ್ತು. ಪಕ್ಷ ತಾರತಮ್ಯ ಮರೆತು ವಾಜಪೇಯಿ ಸಹಕಾರ ನೀಡಿದ್ದಾರೆ ಎಂದು ಸ್ಮರಿಸಿದರು.

ಅಧಿವೇಶನ ಬಿಟ್ಟು ಫಾರಿನ್‌ ಟೂರ್‌ ಹೊರಟ ಸಿದ್ದರಾಮಯ್ಯ

ಜಾಫರ್ ಷರೀಫ್ ನನಗೂ ಉತ್ತಮ ಸಂಬಂಧ ಇತ್ತು. ಆದರೆ ರಾಜ್ಯಸಭಾ ಚುನಾವಣೆಯಲ್ಲಿ ಅನಿವಾರ್ಯವಾಗಿ ತಿಕ್ಕಾಟ ನಡೆಯಿತು. ಆದರೂ ಷರೀಫ್ ಸಾಹೇಬರು ಅದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೇ ನನ್ನ ಜೊತೆಗೆ ಚೆನ್ನಾಗಿಯೇ ಇದ್ದರು ಎಂದು ಹೇಳಿದರು.

ಜಾರಕಿಹೊಳಿ ಯಾಕೆ ಬಂದಿಲ್ಲ

ಅಂಬರೀಷ್ ನನ್ನ ಸ್ನೇಹ ಚೆನ್ನಾಗಿ ಇತ್ತು. ಆದರೆ ರಾಜಕೀಯ ಕಾರಣದಿಂದ ಅವರ ಎದುರು ಕೆಲಸ ಮಾಡಿದ್ದೇನೆ. ಕೊನೆಯ ತನಕ ಆತ್ಮೀಯತೆಯಿಂದಲೇ ಇದ್ದೆವು ಎಂದು ಡಿಕೆ ಶಿವಕುಮಾರ್ ಹೇಳಿದರು.

click me!