ಐಫೋನ್ ಲೇಡಿ ಅಲ್ಲ, ನಾನು ರೈತ ಮಹಿಳೆ: ಸಿಎಂಗೆ ದಾಖಲೆ ಕೊಟ್ಟ ಗಟ್ಟಿಗಿತ್ತಿ

By Web DeskFirst Published Nov 19, 2018, 5:35 PM IST
Highlights

ನಿನ್ನೆ [ಭಾನುವಾರ] ಬೆಳಗಾವಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದ ಓರ್ವ ರೈತ ಮಹಿಳೆ ಬಗ್ಗೆ ಸಿಎಂ ಕುಮಾರಸ್ವಾಮಿ ಉಡಾಫೆ ಮಾತುಗಳನ್ನಾಡಿದ್ದರು. ಅದಕ್ಕೆ ಆ ಮಹಿಳೆ ನಾನು ರೈತ ಮಹಿಳೆ ಎನ್ನುವುದಕ್ಕೆ ದಾಖಲೆ ಬಿಡುಗಡೆ ಮಾಡುವ ಮೂಲಕ ತಿರುಗೇಟು ಕೊಟ್ಟಿದ್ದಾಳೆ. 

ಬೆಂಗಳೂರು,[ನ.19] : ನಿನ್ನೆ [ಭಾನುವಾರ] ಬೆಳಗಾವಿ ಸುವರ್ಣ ಸೌಧದಲ್ಲಿ ಕಬ್ಬು ಬೆಳಗೆರಾರ ಆಕ್ರೋಶ ಕೊತ ಕೊತ ಕುದಿಯುತ್ತಿದ್ರೆ. ಮತ್ತೊಂದೆಡೆ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಆಕ್ರೋಶದ ಕಟ್ಟೆ ಒಡೆದಿತ್ತು.

ಸಿಎಂ ಅಕ್ಷರಶಃ ಕೆಂಡಾಮಂಡಲರಾಗಿದ್ದ ಎಚ್ಡಿಕೆ ಸುವರ್ಣಸೌಧಕ್ಕೆ ಲಾರಿ ನುಗ್ಗಿಸಿದವರು ರೈತರಲ್ಲ ಗೂಂಡಾಗಳು ಎಂದ್ರು. ಅಷ್ಟೇ ಅಲ್ಲ. ಪ್ರತಿಭಟನಾ ನಿರತ ರೈತ ಮಹಿಳೆಗೆ ಇಷ್ಟುದಿನ ಎಲ್ಲಿ ಮಲಗಿದ್ಯಮ್ಮಾ ಎಂಬ ವಿವಾದಾತ್ಮಕ ಹೇಳಿಕೆಯನ್ನೂ ಕೊಟ್ಬಿದ್ರು.

ಸುವರ್ಣಸೌಧಕ್ಕೆ ತೆರಳಿ ಸಿಎಂಗೆ ರೈತ ಮಹಿಳೆ ಕೊಟ್ಟ ಖಡಕ್ ಎಚ್ಚರಿಕೆ ಇದು!

ಇಷ್ಟು ದಿನ ಎಲ್ಲಿ ಮಲಗಿದ್ಯಮ್ಮಾ ಎಂಬ ಸಿಎಂ ಹೇಳಿಕೆಗೆ ರಾಜ್ಯವ್ಯಾಪಿ ಖಂಡನೆ ವ್ಯಕ್ತವಾಗಿದ್ದು. ಸಿಎಂ ಮಹಿಳೆಯ ಕ್ಷಮೆ ಕೇಳುವಂತೆ ಒತ್ತಾಯ ಕೇಳಿ ಬರ್ತಿವೆ. ಈ ಮಧ್ಯೆ ರೈತ ಮಹಿಳೆ ಜಯಶ್ರೀ ಕೂಡ ಸಿಎಂಗೆ ತಿರುಗೇಟು ಕೊಟ್ಟಿದ್ದಾರೆ.

ಅಷ್ಟೇ ಅಲ್ಲದೇ ಆ ಮಹಿಳೆ ಯಾರು? ಇಷ್ಟು ದಿನ ಎಲ್ಲಿ ಮಲಗಿದ್ದಳು ಎನ್ನುವುದಕ್ಕೆ ಇದೀಗ ಸ್ವತಃ ರೈತ ಮಹಿಳೆ ಜಯಶ್ರೀ ಅವರೇ ಖುದ್ದು ನಾನು ಒಬ್ಬ ರೈತ ಮಹಿಳೆ ಎಂದು ರಾಜ್ಯ ರೈತ ಸಂಘದ ಸದಸ್ಯತ್ವ ಐಡಿ ಕಾರ್ಡ್ ಬಿಡುಗಡೆ ಮಾಡುವ ಮೂಲಕ ಸಿಎಂಗೆ ತಿರುಗೇಟು ನೀಡಿದ್ದಾರೆ.

ಅತ್ತ ರೈತರ ಆಕ್ರೋಶ ಕೊತ ಕೊತ ಕುದಿತ್ತಿದ್ರೆ, ಇತ್ತ ದೇವೇಗೌಡ ಕುಟುಂಬದ ಆಕ್ರೋಶ ಕಟ್ಟೆ ಒಡೆಯಿತು..!

ಅಷ್ಟಕ್ಕೂ ಆ ಮಹಿಳೆ ಯಾರು ಗೊತ್ತ?
ಪ್ರತಿಭಟನೆ ಮಾಡಿದ್ದ ರೈತ ಮಹಿಳೆ ಹೆಸರು ಜಯಶ್ರೀ ವಿ.ಜಿ. ಇವರು ಮೂಲತಃ ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಹೋಲಗಿ ಗ್ರಾಮದವರಾಗಿದ್ದಾರೆ. ಇನ್ನು ಈ ಮಹಿಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಬೆಳಗಾವಿ ಜಿಲ್ಲಾಧ್ಯಕ್ಷೆಯಾಗಿದ್ದಾರೆ. 

click me!