ಬಿಎಂಟಿಸಿ ನಷ್ಟ ಜನರ ತಲೆ ಮೇಲೆ?:

Jul 12, 2018, 5:33 PM IST

ಬೆಂಗಳೂರು(ಜು.12): ನಷ್ಟದಲ್ಲಿರುವ ಬಿಎಂಟಿಸಿಯನ್ನು ಮೇಲೆತ್ತಲು ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸಿದೆ. ನಿನ್ನೆಯಷ್ಟೇ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಪತ್ರಿಕಾಹಗೋಷ್ಠಿ ನಡೆಸಿ ಯಾವುದೇ ಕಾರಣಕ್ಕೂ ಬಿಎಂಟಿಸಿ ಟಿಕೆಟ್ ದರ ಹೆಚ್ಚಳ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.

ಆದರೆ ಬಿಎಂಟಿಸಿ ನಷ್ಟವನ್ನು ಸರಿದೂಗಿಸಲು ಸರ್ಕಾರ ಬೇರೊಂದು ಮಾರ್ಗವನ್ನು ಕಂಡುಹಿಡಿದಂತಿದೆ. ಈ ಕುರಿತು ಸಾರಿಗೆ ಸಚಿವ ಹೊಸ ಯೋಜನೆ ಸಿದ್ದಪಡಿಸಿದ್ದು, ಸಾರ್ವಜನಿಕರಿಂದ  ಹೆಚ್ಚುವರಿ ಸೆಸ್ ಸಂಗ್ರಹಿಸಿ ಬಿಎಂಟಿಸಿ ನಷ್ಟ ತಗ್ಗಿಸಲು ಮುಂದಾಗಿದ್ದಾರೆ.

ಬಿಬಿಎಂಪಿ ಸಂಗ್ರಹಿಸುವ ತೆರಿಗೆಯಲ್ಲಿ ಬಿಎಂಟಿಸಿ ಸೆಸ್ ಸೇರಿಸುವಂತೆ ಮನವಿ ಮಾಡಲು ಸಾರಿಗೆ ಇಲಾಖೆ ಮುಂದಾಗಿದೆ.  ಬಿಬಿಎಂಪಿಯ ನಿರಂತರ ಕಾಮಗಾರಿಯಿಂದ ಬಿಎಂಟಿಸಿಗೆ ನಷ್ಟವಾಗುತ್ತಿದ್ದು, ಎಲ್ಲೆಂದರಲ್ಲಿ ರಸ್ತೆ ಅಗೆಯುವುದರಿಂದ ಬಸ್ ಗಳು ಕೆಟ್ಟು ಹೋಗುತ್ತಿವೆ ಎಂದೂ ಇಲಾಖೆ ದೂರಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..