ಸೆಕ್ಸ್ ಸ್ಕ್ಯಾಂಡಲ್‌: ಸಂಸದ ಪ್ರಜ್ವಲ್ ರೇವಣ್ಣ ಓದಿದ್ದು ಆಸ್ಟ್ರೇಲಿಯಾದಲ್ಲಾ!

First Published | Apr 30, 2024, 6:26 PM IST

ಬೆಂಗಳೂರು (ಏ.30): ಇಡೀ ದೇಶದಾದ್ಯಂತ ಸೆಕ್ಸ್ ಸ್ಕ್ಯಾಂಡಲ್‌ನಲ್ಲಿ ಭಾರೀ ಸುದ್ದಿಯಾಗುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ಬೆಂಗಳೂರು ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್‌ ಶಿಕ್ಷಣ (ಬಿಇ) ಪೂರೈಸಿದ್ದಾರೆ. ನಂತರ, ಆಸ್ಟ್ರೇಲಿಯಾಗೆ ಮಾಸ್ಟರ್ಸ್‌ ಮಾಡುವುದಕ್ಕೆ ತೆರಳಿದ್ದರು.

ದೇಶದಾದ್ಯಂತ ಸೆಕ್ಸ್ ಸ್ಕ್ಯಾಂಡಲ್‌ನಲ್ಲಿ ಭಾರೀ ಸುದ್ದಿಯಾಗುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ಬೆಂಗಳೂರಿನಲ್ಲಿ ಬಿಇ ಮುಗಿಸಿ, ಆಸ್ಟ್ರೇಲಿಯಾದಲ್ಲಿ ಮಾಸ್ಟರ್ಸ್ ಮಾಡಲು ಹೋಗಿದ್ದರು.

ದೇಶದಲ್ಲಿ 2019ರಲ್ಲಿ ಲೋಕಸಭೆಗೆ ಆಯ್ಕೆಯಾದ ಕಿರಿಯ ಸಂಸದರ ಪೈಕಿ ಒಬ್ಬರಾಗಿದ್ದ ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಈಗ ಸೆಕ್ಸ್‌ ಸ್ಕ್ಯಾಂಡಲ್ ಮೂಲಕ ದೇಶಾದ್ಯಂತ ಭಾರಿ ಸುದ್ದಿಯಾಗುತ್ತಿದ್ದಾರೆ.

Tap to resize

ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಸುಮಾರು 2,700ಕ್ಕೂ ಅಧಿಕ ಅಶ್ಲೀಲ ವಿಡಿಯೋಗಳು ಪೆನ್‌ಡ್ರೈವ್ ಮೂಲಕ ಹರಿದಾಡುತ್ತಿವೆ ಎಂದು ದೇಶದಲ್ಲಿ ಹೇಳಲಾಗುತ್ತಿದ್ದು, ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ಪ್ರಜ್ವಲ್ ಶಿಕ್ಷಣ ಪಡೆದಿದ್ದೆಲ್ಲಿ? 
ರಾಜಕೀಯ ಕುಟುಂಬದ ಹಿನ್ನೆಲೆಯನ್ನು ಹೊಂದಿರುವ ಪ್ರಜ್ವಲ್ ರೇವಣ್ಣ ಬೆಂಗಳೂರು ಇಂಜಿನಿಯರಿಂಗ್ ಕಾಲೇಜಿನಲ್ಲಿ 'ಬಿಇ' ಶಿಕ್ಷಣ ಪಡೆದಿದ್ದಾರೆ. ನಂತರ, ಮಾಸ್ಟರ್ಸ್‌ ಮಾಡುವುದಕ್ಕೆಂದು ಆಸ್ಟ್ರೇಲಿಯಾಕ್ಕೆ ಹೋಗಿದ್ದರು.

ಆಸ್ಟ್ರೇಲಿಯಾದಲ್ಲಿ ಮಾಸ್ಟರ್ಸ್ ಮಾಡುತ್ತಿರುವಾಗಲೇ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ, ರಾಜ್ಯಕ್ಕೆ ಬಂದು ರಾಜಕಾರಣದಲ್ಲಿ ತೊಡಗಿಕೊಂಡರು. ಅವರ ತಾತ ಹೆಚ್.ಡಿ. ದೇವೇಗೌಡರ ಗೆಲುವಿಗಾಗಿ ಹಾಸನದಲ್ಲಿ ಭರ್ಜರಿ ಪ್ರಚಾರ ಕೈಗೊಂಡು ರಾಜಕೀಯವಾಗಿ ಮುನ್ನೆಲೆಗೆ ಬಂದರು.

2014ರ ಲೋಕಸಭಾ ಚುನಾವಣೆಯಲ್ಲಿ ಹಾಸನ ಲೋಕಸಭಾ ಕ್ಷೇತ್ರದಲ್ಲಿ ತಾತ ಹೆಚ್.ಡಿ. ದೇವೇಗೌಡರ ಪರವಾಗಿ ಪ್ರಜ್ವಲ್ ವ್ಯಾಪಕ ಚುನಾವಣಾ ಪ್ರಚಾರ ಕೈಗೊಂಡರು. 2015ರಲ್ಲಿ ಜೆಡಿಎಸ್ ಪಕ್ಷದ ಸದಸ್ಯರಾದರು.

2018ರ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಪ್ಪ ಹೆಚ್.ಡಿ.ಕುಮಾರಸ್ವಾಮಿ ಅವರಿಂದಾಗಿ ಜೆಡಿಎಸ್ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾದರೂ, ರಾಜ್ಯಾದ್ಯಂತ ಸುತ್ತಾಡಿ ವ್ಯಾಪಕ ಪ್ರಚಾರ ಮಾಡಿದ್ದರು. ಆದರೆ, ಸ್ವತಃ ಹೆಚ್.ಡಿ. ದೇವೇಗೌಡರು ತಮ್ಮ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್‌ಗೆ ಬಿಟ್ಟುಕೊಟ್ಟರು. 2019ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು.

ಲೋಕಸಭಾ ಚುನಾವಣೆ- 2024ರ ಎರಡನೇ ಹಂತದ ಮತದಾನದ ಮೂರು ದಿನಗಳಿಗೆ ಮುನ್ನ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜನಸಾಮಾನ್ಯರಿಗೆ ಸಂಸದ ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋ ಇರುವ ಪೆನ್‌ಡ್ರೈವ್ ಹಂಚಿಕೆ ಮಾಡಿ, ಅವರಿಗೆ ಮತ ಹಾಕದಂತೆ ಪ್ರಚಾರ ಮಾಡಲಾಗಿದೆ.

ಹಾಸನದಲ್ಲಿ ಲೋಕಸಭಾ ಚುನಾವಣೆ ಮತದಾನ ಪೂರ್ಣಗೊಳ್ಳುತ್ತಿದ್ದಂತೆ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಅವರ ತಂದೆ ಶಾಸಕ ಹೆಚ್.ಡಿ. ರೇವಣ್ಣ ಅವರ ಮೇಲೆ ಲೈಂಗಿಕ ದೌರ್ಜನ್ಯದ ಕೇಸ್ ದಾಖಲಿಸಲಾಗಿದೆ.

ಪ್ರಜ್ವಲ್ ರೇವಣ್ಣ ಅವರ ತಾತ ಹೆಚ್.ಡಿ. ದೇವೇಗೌಡ ಮಾಜಿ ಪ್ರಧಾನಮಂತ್ರಿ ಆಗಿದ್ದಾರೆ. ಅವರ ಚಿಕ್ಕಪ್ಪ ಹೆಚ್.ಡಿ. ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ ಆಗಿದ್ದಾರೆ. ಇನ್ನು ಪ್ರಜ್ವಲ್‌ನ ತಂದೆ ಹೆಚ್.ಡಿ. ರೇವಣ್ಣ ಮಾಜಿ ಸಚಿವರೂ ಆಗಿದ್ದು, ಹಾಲಿ ಶಾಸಕರಾಗಿದ್ದಾರೆ. ಇನ್ನು ಪ್ರಜ್ವಲ್ ಕೂಡ ಸಂಸದರಾಗಿದ್ದು, ಈ ಕೃತ್ಯ ಎಸಗಿದ್ದಾರೆ.

Latest Videos

click me!