ನಾವೇನು ಪಂಚಾಯಿತಿ ನಡೆಸುತ್ತಿದ್ದೇವೆಯೇ? ರಾಜ್ಯಗಳಿಗೆ ಸುಪ್ರೀಂ ತರಾಟೆ

By Suvarna Web DeskFirst Published Jan 16, 2017, 12:02 PM IST
Highlights

ರಸ್ತೆಗಳಲ್ಲಿ ವೇಗ ಮಿತಿ ನಿಗದಿಪಡಿಸಿರುವ ಕುರಿತು ಕೈಗೊಂಡಿರುವ ಕ್ರಮಗಳ ವರದಿ ಸಲ್ಲಿಸದ 10 ರಾಜ್ಯಗಳನ್ನು ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ನವದೆಹಲಿ(ಜ.16): ರಸ್ತೆ ಸುರಕ್ಷತೆ ಕುರಿತ ತನ್ನ ನಿರ್ದೇಶನಗಳನ್ನು ಗಂಭೀರವಾಗಿ ಪಾಲಿಸದ 10 ರಾಜ್ಯಗಳನ್ನು ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.

‘‘ನಾವೇನು ಪಂಚಾಯಿತಿ ನಡೆಸುತ್ತಿದ್ದೇವೆಯೇ?’’ ಎಂದು ರಾಜ್ಯಗಳಿಗೆ ಕೋರ್ಟ್ ಕೇಳಿದೆ.

ಮೋಟಾರು ವಾಹನ ಕಾಯ್ದೆಯ ನಿಯಮಗಳ ಜಾರಿಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಸರ್ವೊಚ್ಚ ನ್ಯಾಯಾಲಯವು, ರಸ್ತೆಗಳಲ್ಲಿ ವೇಗ ಮಿತಿ ನಿಗದಿಪಡಿಸಿರುವ ಕುರಿತು ಕೈಗೊಂಡಿರುವ ಕ್ರಮಗಳ ವರದಿ ಸಲ್ಲಿಸದ 10 ರಾಜ್ಯಗಳನ್ನು ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಈ ವಿಷಯಕ್ಕೆ ಸಂಬಂಧಿಸಿ ಎಲ್ಲ ರಾಜ್ಯಗಳಿಂದ ಕೋರ್ಟ್ ಪ್ರತಿಕ್ರಿಯೆ ಕೇಳಿತ್ತು. ಆಂಧ್ರ ಪ್ರದೇಶ, ಅಸ್ಸಾಂ, ನಾಗಾಲ್ಯಾಂಡ್, ಸಿಕ್ಕಿಂ, ತಮಿಳುನಾಡು, ದೆಹಲಿ, ತ್ರಿಪುರಾ, ಬಿಹಾರ, ರಾಜಸ್ಥಾನ, ಮಧ್ಯಪ್ರದೇಶ ರಾಜ್ಯಗಳು ವರದಿ ಸಲ್ಲಿಸಿಲ್ಲ.

click me!