ಮಹಾರಾಷ್ಟ್ರ, ಹರ್ಯಾಣ: ಮತ್ತೆ ಬಿಜೆಪಿ ಜಯಭೇರಿ

By Web DeskFirst Published Oct 18, 2019, 7:34 AM IST
Highlights

ಭಾರತೀಯ ಜನತಾ ಪಕ್ಷ, ಮುಂಬರುವ ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭಾ ಚುನಾವಣೆಯಲ್ಲೂ ಭರ್ಜರಿ ಜಯದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಯೊಂದು ಭವಿಷ್ಯ ನುಡಿದಿದೆ.

ಮುಂಬೈ/ಚಂಡೀಗಢ [ಅ.18]: ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಯಶಸ್ಸು ಕಂಡಿದ್ದ ಭಾರತೀಯ ಜನತಾ ಪಕ್ಷ, ಮುಂಬರುವ ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭಾ ಚುನಾವಣೆಯಲ್ಲೂ ಭರ್ಜರಿ ಜಯದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಯೊಂದು ಭವಿಷ್ಯ ನುಡಿದಿದೆ.

ಜನ್‌ ಕೀ ಬಾತ್‌ ನಡೆಸಿರುವ ಸಮೀಕ್ಷೆ ಅನ್ವಯ 288 ಸ್ಥಾನಗಳನ್ನು ಹೊಂದಿರುವ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ- ಶಿವಸೇನೆ ಮೈತ್ರಿಕೂಟ ಮರಳಿ ಅಧಿಕಾರಕ್ಕೆ ಬರುವುದು ಖಚಿತವಾಗಿದೆ. ಸಮೀಕ್ಷೆ ಅನ್ವಯ ಬಿಜೆಪಿ 142-147 ಸ್ಥಾನ, ಶಿವಸೇನೆ 83-85 ಸ್ಥಾನ ಗೆಲ್ಲಲಿದೆ. ಇನ್ನು ಒಳಜಗಳದಿಂದ ಕಂಗೆಟ್ಟಿರುವ ಕಾಂಗ್ರೆಸ್‌ ಕೇವಲ 21-23 ಸ್ಥಾನಕ್ಕೆ ಸೀಮಿತಗೊಳ್ಳಲಿದೆ. ಕಾಂಗ್ರೆಸ್‌ನ ಮಿತ್ರ ಪಕ್ಷ ಎನ್‌ಸಿಪಿ 27-29 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಲಿದೆ ಎಂದು ಸಮೀಕ್ಷೆ ಹೇಳಿದೆ. ವಿಶೇಷವೆಂದರೆ ರಾಜ್ಯದಲ್ಲಿ ಬಿಜೆಪಿ ಏಕಾಂಗಿಯಾಗಿಯೇ ಅಧಿಕಾರಕ್ಕೆ ಬರುವಷ್ಟುಸ್ಥಾನ ಪಡೆದುಕೊಳ್ಳಲಿದೆ ಎಂದು ಸಮೀಕ್ಷೆ ಹೇಳಿದೆ.

ಇನ್ನು ಹರ್ಯಾಣದಲ್ಲಿ ಕೂಡಾ ಬಿಜೆಪಿ ಮರಳಿ ಅಧಿಕಾರಕ್ಕೆ ಬರಲಿದೆ. ರಾಜ್ಯ ವಿಧಾನಸಭೆಯ 90 ಸ್ಥಾನಗಳ ಪೈಕಿ ಬಿಜೆಪಿ 58-70 ಸ್ಥಾನ ಗೆಲ್ಲಲಿದೆ. ಕಾಂಗ್ರೆಸ್‌ 12-15 ಸ್ಥಾನ, ದುಶ್ಯಂತ್‌ ಚೌತಾಲಾ ನೇತೃತ್ವದ ಜನನಾಯಕ್‌ ಜನತಾ ಪಕ್ಷ 5-8 ಸ್ಥಾನ ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ.

ಮಹಾರಾಷ್ಟ್ರ (ಒಟ್ಟು 288 ಸ್ಥಾನ) ಬಹುಮತಕ್ಕೆ 145 ಸ್ಥಾನ

ಪಕ್ಷ 2014 2019

ಬಿಜೆಪಿ 122 142-147

ಶಿವಸೇನೆ 63 83-85

ಕಾಂಗ್ರೆಸ್‌ 41 21-23

ಎನ್‌ಸಿಪಿ 42 27-29

ಹರ್ಯಾಣ (ಒಟ್ಟು 90 ಸ್ಥಾನ) ಬಹುಮತಕ್ಕೆ 46 ಸ್ಥಾನ

ಪಕ್ಷ 2014 2019

ಬಿಜೆಪಿ 47 58-70

ಕಾಂಗ್ರೆಸ್‌ 15 12-15

ಜೆಜೆಪಿ 00 5-8

ಮಹಾರಾಷ್ಟ್ರದಲ್ಲಿ

- ಒಟ್ಟು ಸೀಟು: 288 ಬಹುಮತಕ್ಕೆ: 145

- ಬಿಜೆಪಿ+ಶಿವಸೇನೆ ಮೈತ್ರಿಕೂಟ: 227

- ಕಾಂಗ್ರೆಸ್‌: 22 ಎನ್‌ಸಿಪಿ: 28

ಹರ್ಯಾಣದಲ್ಲಿ

- ಒಟ್ಟು ಸೀಟು: 90 ಬಹುಮತಕ್ಕೆ: 46

- ಬಿಜೆಪಿ: 58-70 ಕಾಂಗ್ರೆಸ್‌: 12-15

click me!