ಹಾಸನ ರಾಸಲೀಲೆ ಪ್ರಕರಣ: ಕಿಡ್ನಾಪ್ ಕೇಸಲ್ಲಿ ಹೆಚ್.ಡಿ. ರೇವಣ್ಣಗೆ ಜಾಮೀನು ನಿರಾಕರಿಸಿದ ಕೋರ್ಟ್; ಬಂಧನ ಭೀತಿ

By Sathish Kumar KH  |  First Published May 4, 2024, 6:27 PM IST

ಮಾಜಿ ಸಚಿವ ಹೆಚ್.ಡಿ. ರೇವಣ್ಣ ವಿರುದ್ಧ ದಾಖಲಾದ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಆರೋಪಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ.


ಬೆಂಗಳೂರು (ಮೇ 04): ಮಾಜಿ ಸಚಿವ ಹೆಚ್.ಡಿ. ರೇವಣ್ಣ ವಿರುದ್ಧ ದಾಖಲಾದ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ವಿಚಾರಣೆಗೆ ಹಾಜರಾಗುವ ಮುನ್ನವೇ ನಿರೀಕ್ಷಣಾ ಜಾಮೀನು ಪಡೆಯಲು ಸಲ್ಲಕೆ ಮಾಡಿದ್ದರು. ಆದರೆ, ವಾಲ ಆಲಿಸಿದ ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಶನಿವಾರ ಅರ್ಜಿ  ವಿಚಾರಣೆಗೆ ಕೈಗೆತ್ತಿಕೊಮಡ ನ್ಯಾಯಾಧಶರಾದ ಸಂತೋಷ್ ಗಜಾನನ ಭಟ್ ಅವರ ಪೀಠವು ಆರೋಪಿಗಳಾದ ರೇವಣ್ಣ ಪರ ವಕೀಲರು ಮೂರ್ತಿ ಡಿ.ನಾಯ್ಕ್  ಹಾಗೂ ಪ್ರಕರಣ ತನಿಖೆ ಮಾಡುತ್ತಿರುವ ವಿಶೇಷ ತನಿಖಾ ದಳ (ಎಸ್‌ಐಟಿ) ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ವಾದ ಮಂಡಿಸಿದರು. ಆದರೆ, ವಾದ ಆಲಿಸಿ ರೇವಣ್ಣ ಅವರ ಜಾಮೀನಿ ಅರ್ಜಿಯನ್ನು ವಜಾಗೊಳಿಸಲಾಗಿದೆ. ಜೊತೆಗೆ, ಪ್ರಕರಣದ ವಿಚಾರಣೆಯನ್ನು ಮೇ 6ಕ್ಕೆ ಮುಂದೂಡಿಕೆ ಮಾಡಲಾಗಿದೆ.

Tap to resize

Latest Videos

ಮಾಜಿ ಸಚಿವ ಹೆಚ್.ಡಿ. ರೇವಣ್ಣಗೆ ಲೈಂಗಿಕ ದೌರ್ಜನ್ಯ ಕೇಸಲ್ಲಿ ಜೈಲಾ, ಬೇಲಾ? ಆದೇಶ ಕಾಯ್ದಿರಿಸಿದ ಕೋರ್ಟ್

ಹಾಸನ ಜಿಲ್ಲೆ ಹೊಳೆ ನರಸೀಪುರದಲ್ಲಿ ಮನೆಯ ಕೆಲಸದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಪ್ರಕರಣದಲ್ಲಿ ಹೆಚ್.ಡಿ. ರೇವಣ್ಣ ಅವರು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ, ಈ ಕೇಸಿನಲ್ಲಿ ಗಂಭೀರ ಆರೋಪ ಇಲ್ಲದ ಹಿನ್ನೆಲೆಯಲ್ಲಿ ಸುಲಭವಾಗಿ ಜಾಮೀನು ಲಭ್ಯವಾಗುತ್ತದೆ ಎಂದು ಕೇಳಿ ಬಂದಿತ್ತು. ಮಗ ಪ್ರಜ್ವಲ್ ರೇವಣ್ಣ ಅವರ ಮೇಲೆ ದಾಖಲಾದ ಅತ್ಯಾಚಾರ ಕೇಸಿನ ಸಂತ್ರಸ್ತ ಮಹಿಳೆಯನ್ನು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅಪಹರಣ ಮಾಡಿಸಿದ್ದರು. ಈ ಕುರಿತು ಸಂತ್ರಸ್ತೆಯ ಮಗ ದೂರು ದಾಖಲಿಸಿದ್ದರು. ನ್ಯಾಯಾಲಯದ ಮುಂದೆ ಜಾಮೀನು ಅರ್ಜಿ ವಿಚಾರಣೆಗೆ ಬಂದಾಗ ಎಸ್‌ಐಟಿ ಪರ ವಕೀಲರು ಅವರ ಮೇಲೆ ಇನ್ನೊಂದು ಗಂಭೀರ ಕೇಸ್ ದಾಖಲಾಗಿದ್ದು, ಜಾಮೀನು ನೀಡಬಾರದು ಎಂದು ವಾದ ಮಂಡಿಸಿದ್ದರು.

ಆರೋಪಿ ರೇವಣ್ಣ ಪರ ವಕೀಲರ ವಾದವೇನು?
ರೇವಣ್ಣ ಪರ ವಕೀಲ ಮೂರ್ತಿ ಡಿ.ನಾಯ್ಕ್ ವಾದ ಮಂಡಿಸಿ, ಶಾಸಕ ಹೆಚ್.ಡಿ. ರೇವಣ್ಣ ವಿರುದ್ಧ ತಡರಾತ್ರಿ ತರಾತುರಿಯಲ್ಲಿ ನಾನ್ ಬೇಲೆಬಲ್ ಸೆಕ್ಷನ್ ಹಾಕಿ ಮತ್ತೊಂದು ಏಫ್ಐಆರ್ ದಾಖಲಿಸಲಾಗಿದೆ. ಜೊತೆಗೆ, ವಿಚಾರಣೆಗೆ ಹಾಜರಾಗಲು ನೋಟೀಸ್ ನೀಡಿ ಬಂಧನಕ್ಕೆ ಮುಂದಾಗಿದ್ದಾರೆ. ಒಂದು ಕಿಡ್ನಾಪ್ ಪ್ರಕರಣ ದಾಖಲಾಗಬೇಕಾದರೆ ಹಲ್ಲೆ, ರ್ಯಾನ್ಸಮ್ (ಹಣಕ್ಕೆ ಬೇಡಿಕೆ) ಇರಬೇಕು. ಈ ಪ್ರಕರಣದಲ್ಲಿ ಯಾವುದೂ ನಡೆದಿಲ್ಲ. ಆದರೂ ಇಲ್ಲಿ 364A ಹಾಗೂ 365 ಸೆಕ್ಷನ್ ಅನ್ವಯ ನಾನ್ ಬೆಲಬಲ್ ಸೆಕ್ಷನ್ ಹಾಕಿದ್ದಾರೆ. ಇನ್ನು 364A ಸೆಕ್ಷನ್‌ ಅಡಿ ಡೆತ್ ಸೆಂಟೆನ್ಸ್‌ವರೆಗೂ ಶಿಕ್ಷೆ ನೀಡಬಹುದಾಗಿರುತ್ತದೆ. ರೇವಣ್ಣ ವಿರುದ್ಧ ಅಂತಹ ಗಂಭೀರ ಆರೋಪಗಳು ಇಲ್ಲವಾದ್ದರಿಂದ ಜಾಮೀನಿ ನೀಡಬೇಕು ಎಂದು ಮನವಿ ಮಾಡಿದ್ದರು.

ಹಾಸನ ರಾಸಲೀಲೆ ಪ್ರಕರಣ: ಕಿಡ್ನಾಪ್‌ ಆಗಿದ್ದ ಸಂತ್ರಸ್ಥೆ ರೇವಣ್ಣ ಆಪ್ತನ ಹುಣಸೂರು ತೋಟದ ಮನೆಯಲ್ಲಿ ಪತ್ತೆ

ಎಸ್‌ಐಟಿ ತನಿಖಾದಳ ಪರ ವಕೀಲರ ವಾದವೇನು?
ವಿಶೇಷ ತನಿಖಾ ದಳ (ಎಸ್ಐಟಿ) ಪರ ವಿಶೇಷ ಸರ್ಕಾರಿ ಅಭಿಯೋಜಕ (Special Public Prosecutor-SPP) ಬಿ.ಎನ್.ಜಗದೀಶ್ ವಾದ ಮಂಡಿಸಿ, ಮಾಜಿ ಸಂಸದ ಹೆಚ್.ಡಿ. ರೇವಣ್ಣ ಅವರ ಪುತ್ರ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಕೇಸಿನ ಸಂತ್ರಸ್ತ ಮಹಿಳೆಯನ್ನು ಸ್ವತಃ ರೇವಣ್ಣ ಅವರೇ ಅಪಹರಣ ಮಾಡಿಸಿದ್ದಾರೆ. ಆ ಬಡ ಮಹಿಳೆ ಎಲ್ಲಿದ್ದಾರೆ ಅನ್ನೋದನ್ನ ಪತ್ತೆ ಹಚ್ಚಬೇಕಿದೆ. ಕಿಡ್ನಾಪ್‌ಗೆ ಒಳಗಾದ ಮಹಿಳೆಯ ಮಗ ತನ್ನ ತಾಯಿಯನ್ನ ರೇವಣ್ಣ ಕಿಡ್ನಾಪ್ ಮಾಡಿಸಿದ್ದಾರೆ ಎಂದು ಹೇಳಿದ್ದಾರೆ. ಈಗ ಮಹಿಳೆಯನ್ನು ಎಸ್ಐಟಿ ‌ಮುಂದೆ ಹೇಳಿಕೆ‌ ನೀಡದಂತೆ, ದೂರು ನೀಡದಂತೆ ಬೆದರಿಸಲು ಕಿಡ್ನಾಪ್ ಮಾಡಲಾಗಿದೆ. ಹೆಚ್.ಡಿ.ರೇವಣ್ಣ ಅಥವಾ ಪ್ರಜ್ವಲ್ ವಿರುದ್ಧ ಯಾವುದೇ ಮಹಿಳೆ ಹೇಳಿಕೆ/ದೂರು ನೀಡಿದರೆ ಇದೇ ಗತಿ ಕಾಣಿಸುತ್ತೇವೆ ಎಂದು ಬೆದರಿಸಲು ಹೀಗೆ ಮಾಡಿದ್ದಾರೆ. ಇವರಿಗೆ ಜಾಮೀನು ಮಂಜೂರು ಮಾಡಬಾರದು ಎಂದು ವಾದ ಮಂಡಿಸಿದ್ದರು.

click me!