ಇಲ್ಲಿ ಗೆದ್ದ ಬಿಜೆಪಿಗೆ ಲೋಕಸಭಾ ಚುನಾವಣೆಯಲ್ಲಿಯೂ ಗೆಲುವು ಖಚಿತ?

By Web DeskFirst Published Sep 14, 2018, 11:10 AM IST
Highlights

ಬಿಜೆಪಿಗೆ ಇದೀಗ ಆಶಾದಾಯಕ ಮುನ್ಸೂಚನೆಯೊಂದು ದೊರಕಿದಂತಾಗಿದೆ.  ಇಲ್ಲಿ ಗೆದ್ದರೆ ಮುಂದಿನ ಚುನಾವಣೆಯಲ್ಲಿಯೂ ಬಿಜೆಪಿಗೆ ಗೆಲುವು ಖಚಿತ ಎನ್ನುವ ನಂಬಿಕೆಯೊಂದು ಇದ್ದು ದಿಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಪರಿಷತ್ ಚುನಾವಣೆಯಲ್ಲಿ ಎಬಿವಿಪಿ ಗೆಲುವು ಸಾಧಿಸಿದೆ. 

ನವದೆಹಲಿ :  ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ದಿಲ್ಲಿ ವಿಶ್ವವಿದ್ಯಾಲಯದ ಸ್ಟೂಡೆಂಟ್ ಯೂನಿಯನ್ ಚುನಾವಣೆಯ ನಾಲ್ಕು ಸ್ಥಾನಗಳಲ್ಲಿ ಮೂರು ಸ್ಥಾನಗಳಲ್ಲಿ ಗೆಲುವು ಪಡೆದುಕೊಂಡಿದೆ. 

ಇದು ಬಿಜೆಪಿಯ ಆಶಾಭಾವನೆಯನ್ನು ಮೂಡಿಸುವಂತಹ ಬೆಳವಣಿಗೆಯಾಗಿದೆ.  ಬಿಜೆಪಿ ವಿದ್ಯಾರ್ಥಿ ಸಂಘಟನೆಯಾಗಿರುವ ಎಬಿವಿಪಿ ಅಭ್ಯರ್ಥಿಗಳು ವಿಶ್ವವಿದ್ಯಾಲಯದ ವಿದ್ಯಾರ್ಥಿ ಪರಿಷತ್ ನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಲ್ಲಿ  ಗೆದ್ದಿದ್ದಾರೆ.   ಕಾಂಗ್ರೆಸ್ ಅಂಗವಾದ ಎನ್ ಎಸ್ ಯು ಐ ಕಾರ್ಯದರ್ಶಿ ಸ್ಥಾನ ಒಂದರಲ್ಲಿ ಗೆಲುವು ಪಡೆದುಕೊಂಡಿದೆ. 

 

ABVP posts thumping win in .

President
Ankit (ABVP) 20,467
Sunny (NSUI)- 18,723

Vice President
Shakti Singh (ABVP)- 23,046
Leena (NSUI)- 15,000

Secretary
Akash (NSUI)- 20,198
Sudhir (ABVP)- 14,109

Jt secretary
Jyoti (ABVP)- 19,353
Saurabh (NSUI)-14,381

— Abhijit Majumder (@abhijitmajumder)

 

ಇನ್ನು ದಿಲ್ಲಿ ವಿಶ್ವವಿದ್ಯಾಲಯದ ಚುನಾವಣೆಗೂ ಹಾಗೂ ಲೋಕಸಭಾ ಚುನಾವಣೆಗೂ ನೆರವಾದ ಸಂಪರ್ಕವಿದ್ದು, ಲೋಕಸಭಾ ಚುನಾವಣೆಯ ಫಲಿತಾಂಶ ಮುನ್ಸೂಚನೆ ಇಲ್ಲಿ ಪ್ರಕಟವಾಗುತ್ತದೆ ಎನ್ನಲಾಗುತ್ತದೆ.

1997, 98,2013ರಲ್ಲಿಯೂ ಇಲ್ಲಿ ಇದೇ ರೀತಿಯ ಗೆಲುವು ಪಡೆದಿದ್ದು, ಇದಾದ ಬಳಿಕ ಬಿಜೆಪಿ ಕೇಂದ್ರದಲ್ಲಿ ಗೆಲುವು ದಾಖಲಿಸಿತ್ತು. ಆದ್ದರಿಂದ ಈ ಮೂಲಕ ಮುಂದಿನ ಚುನಾವಣೆಯ ಫಲಿತಾಂಶದ ಬಗ್ಗೆ ಬಿಜೆಪಿಯಲ್ಲಿ ಆಶಾಭಾವನೆಯೊಂದು ಮೂಡಿದಂತಾಗಿದೆ.  

click me!